Team India: ರೋಹಿತ್, ವಿರಾಟ್ ಬೆನ್ನಲ್ಲೆ ಇನ್ನೋರ್ವ ಆಟಗಾರ ದಿಢೀರ್ ನಿವೃತ್ತಿ! ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ವಿಶ್ವಕಪ್ ಹೀರೋ | Piyush Chawla announces retirement from all forms of cricket

Team India: ರೋಹಿತ್, ವಿರಾಟ್ ಬೆನ್ನಲ್ಲೆ ಇನ್ನೋರ್ವ ಆಟಗಾರ ದಿಢೀರ್ ನಿವೃತ್ತಿ! ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ವಿಶ್ವಕಪ್ ಹೀರೋ | Piyush Chawla announces retirement from all forms of cricket

ಭಾರತಕ್ಕಾಗಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ 19 ವರ್ಷಗಳ ನಂತರ,ಪಿಯೂಷ್ ಚಾವ್ಲಾಎಲ್ಲಾ ರೀತಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಸ್ಟಾರ್ ಲೆಗ್ ಸ್ಪಿನ್ನರ್ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂ ಮೂಲಕ ತಮ್ಮ ನಿವೃತ್ತಿಯನ್ನು ಘೋಷಿಸಿದ್ದಾರೆ. ಟೀಂ ಇಂಡಿಯಾದ ಪರ ಮೂರು ಸ್ವರೂಪಗಳಲ್ಲಿ ಆಡಿದ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಈ ಬಾರಿಯ ಯಾವುದೇ ತಂಡ ಅವರನ್ನು ಖರೀದಿಸದಿರುವುದರಿಂದ ಅವರು ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ಚಾವ್ಲಾ ಉತ್ತರ ಪ್ರದೇಶದವರಾಗಿದ್ದು, ತಮ್ಮ ವೃತ್ತಿಜೀವನದ ಬಹುಪಾಲು ತಮ್ಮ ರಾಜ್ಯದ ಪರವಾಗಿ ದೇಶೀಯ ಕ್ರಿಕೆಟ್‌ನ ಭಾಗವಾಗಿ ಆಡಿದ್ದಾರೆ. ಇನ್ನೂ ಕೆಲವು ದಿನಗಳ ಕಾಲ ಗುಜರಾತ್ ತಂಡವನ್ನು ಕೂಡ ಪ್ರತಿನಿಧಿಸಿದ್ದಾರೆ. ಅನುಭವಿ ಲೆಗ್-ಸ್ಪಿನ್ನರ್ ತಮ್ಮ ಐಪಿಎಲ್ ವೃತ್ತಿಜೀವನವನ್ನು ಕಿಂಗ್ಸ್ ಇಲೆವೆನ್ ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್), ಕೊಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡದ ಪರ ಆಡಿದ್ದಾರೆ.

ಪಿಯೂಷ್ ಚಾವ್ಲಾ ರೆಕಾರ್ಡ್:

ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಎರಡನೇ ಅತ್ಯಂತ ಕಿರಿಯ ಟೆಸ್ಟ್ ಕ್ರಿಕೆಟಿಗ ಪಿಯೂಷ್ ಚಾವ್ಲಾ 2006 ರಲ್ಲಿ ನಾಗ್ಪುರದಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದಾಗ ಅವರಿಗೆ ಕೇವಲ 17 ವರ್ಷ 75 ದಿನಗಳು ವಯಸ್ಸಾಗಿತ್ತು. ಇದು ಸಚಿನ್ ತೆಂಡೂಲ್ಕರ್ ಬಳಿಕ ಭಾರತ ತಂಡದ ಪರ ಪಾದಾರ್ಪಣೆ ಮಾಡಿದ ಎರಡನೇ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡರು.

ಎರಡು ವಿಶ್ವಕಪ್ ವಿಜೇತ ತಂಡದ ಆಟಗಾರ: ಪಿಯೂಷ್ ಚಾವ್ಲಾ 2007 ರ ಟಿ-20 ವಿಶ್ವಕಪ್ ಮತ್ತು 2011 ರ ವಿಶ್ವಕಪ್ ಗೆದ್ದ ಭಾರತೀಯ ತಂಡದ ಭಾಗವಾಗಿದ್ದರು. 2007 ರಲ್ಲಿ ಚಾವ್ಲಾ ಒಂದೇ ಒಂದು ಪಂದ್ಯವನ್ನು ಆಡಲಿಲ್ಲ, ಆದರೆ 2011 ರಲ್ಲಿ ಮಾತ್ರ ಮೂರು ಪಂದ್ಯಗಳಲ್ಲಿ ಮಾತ್ರ ಆಡಿದ್ದರು.

ಅಂತಾರಾಷ್ಟ್ರೀಯ ಕ್ರಿಕೆಟ್ ದಾಖಲೆ: ಪಿಯೂಷ್ ಚಾವ್ಲಾ ಭಾರತ ಪರ ಕೇವಲ 3 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಅವರು 7 ವಿಕೆಟ್ ತೆಗೆದು ಸಾಧನೆ ಮಾಡಿದ್ದಾರೆ. ಚಾವ್ಲಾ 2007 ರಲ್ಲಿ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು ಮತ್ತು 2011 ರ ವಿಶ್ವಕಪ್‌ನಲ್ಲಿ ಭಾರತ ಪರ ಕೊನೆಯ ಪಂದ್ಯವನ್ನು ಆಡಿದರು. ಏಕದಿನ ಮಾದರಿಯಲ್ಲಿ ಅವರು 25 ಪಂದ್ಯಗಳಲ್ಲಿ 32 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 2010 ಮತ್ತು 2012 ರ ನಡುವಿನ ಅವಧಿಯಲ್ಲಿ ಅವರು ಭಾರತ ಪರ 7 ಟಿ20 ಪಂದ್ಯಗಳಲ್ಲಿ ಆಡಿದ್ದು, ಅದರಲ್ಲಿ ಅವರು 4 ವಿಕೆಟ್‌ ಪಡೆದಿದ್ದಾರೆ.

ಐಪಿಎಲ್ ದಂತಕಥೆ

ಪಿಯೂಷ್ ಚಾವ್ಲಾ 2008 ರ ಉದ್ಘಾಟನಾ ಸೀಸನ್‌ನಿಂದ 2024 ರವರೆಗೆ ಬರೋಬ್ಬರಿ 17 ಸೀಸನ್‌ಗಳಲ್ಲಿ ಐಪಿಎಲ್‌ನಲ್ಲಿ ಆಡಿದ್ದಾರೆ. ಇದರಲ್ಲಿ ಅವರು 192 ವಿಕೆಟ್‌ಗಳೊಂದಿಗೆ ಲೀಗ್‌ನ ಇತಿಹಾಸದಲ್ಲಿ 3ನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಚಾವ್ಲಾ 84 ವಿಕೆಟ್‌ಗಳೊಂದಿಗೆ ಪಿಬಿಕೆಎಸ್‌ ಪರ ಅತೀ ಹೆಚ್ಚು ವಿಕೆಟ್ ಪಡೆದ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಇದರೊಂದಿಗೆ ಕೆಕೆಆರ್ ಪರ 71 ಪಡೆದಿದ್ದಾರೆ. 2014 ರಲ್ಲಿ ಕೆಕೆಆರ್ ಪರ ಐಪಿಎಲ್ ಗೆದ್ದ ಚಾವ್ಲಾ, ತಮ್ಮ ಮಾಜಿ ತಂಡ ಪಂಜಾಬ್ ವಿರುದ್ಧ ಫೈನಲ್‌ನಲ್ಲಿ ಗೆಲುವಿನ ರನ್ ಗಳಿಸಿದ್ದರು.

1000 ವಿಕೆಟ್‌ಗಳು: ಚಾವ್ಲಾ ತಮ್ಮ ವೃತ್ತಿಪರ ವೃತ್ತಿಜೀವನದಲ್ಲಿ, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 446, ಲಿಸ್ಟ್-ಎ ಕ್ರಿಕೆಟ್‌ನಲ್ಲಿ 254 ಮತ್ತು ಟಿ20 ಕ್ರಿಕೆಟ್‌ನಲ್ಲಿ 319 ವಿಕೆಟ್‌ಗಳೊಂದಿಗೆ 1000 ವಿಕೆಟ್‌ಗಳನ್ನು ಕಬಳಿಸಿರುವ ಸಾಧನೆ ಮಾಡಿದ್ದಾರೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Team India: ರೋಹಿತ್, ವಿರಾಟ್ ಬೆನ್ನಲ್ಲೆ ಇನ್ನೋರ್ವ ಆಟಗಾರ ದಿಢೀರ್ ನಿವೃತ್ತಿ! ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ವಿಶ್ವಕಪ್ ಹೀರೋ