Bakrid: ಬಕ್ರೀದ್‌ಗಾಗಿ 3 ಮೇಕೆ ಖರೀದಿಸಿದ ಖ್ಯಾತ ಕ್ರಿಕೆಟಿಗ! ಸೋಶಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆ | Cricketer Avesh Khan Goat Purchase Video Viral Netizens Criticize

Bakrid: ಬಕ್ರೀದ್‌ಗಾಗಿ 3 ಮೇಕೆ ಖರೀದಿಸಿದ ಖ್ಯಾತ ಕ್ರಿಕೆಟಿಗ! ಸೋಶಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆ | Cricketer Avesh Khan Goat Purchase Video Viral Netizens Criticize

Last Updated:

ಆವೇಶ್ ಖಾನ್ ಬಕ್ರೀದ್ ಹಬ್ಬದ ಮುನ್ನ ಮೂರು ಮೇಕೆಗಳನ್ನು ಖರೀದಿಸಿದ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಈ ಕುರಿತು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

ಆವೇಶ್ ಖಾನ್ ಮೇಕೆ ಖರೀದಿಆವೇಶ್ ಖಾನ್ ಮೇಕೆ ಖರೀದಿ
ಆವೇಶ್ ಖಾನ್ ಮೇಕೆ ಖರೀದಿ

ಇಂದು ದೇಶದಾದ್ಯಂತ ಶಾಂತಿ ಮತ್ತು ಭಾವೈಕ್ಯತೆಯ ಸಂಖ್ಯೆತವಾಗಿರುವ ಬಕ್ರೀದ್ (Bakrid) ಹಬ್ಬವನ್ನು ಮುಸ್ಲಿಂ ಸಮುದಾಯದವರು (Muslim) ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದ್ದಾರೆ.  ಈ ಹಿನ್ನೆಲೆಯಲ್ಲಿ ಅನೇಕರು ಮೇಕೆ, ಕುರಿಗಳನ್ನು ಖರೀದಿಸಿ ಬಲಿ (Kill) ಕೊಡುವುದನ್ನು ಕಾಣಬಹುದಾಗಿದೆ. ಈ ನಡುವೆ ಕ್ರಿಕೆಟಿಗ ಆವೇಶ್‌ಖಾನ್ (Avesh Khan) ಅವರ ಮೇಕೆ ಖರೀದಿಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದೆ.

ಬಕ್ರೀದ್‌ ಸಂಭ್ರಮಕ್ಕೆ ಉತ್ಸುಕರಾಗಿರುವುದಾಗಿ ತಿಳಿಸಿದ ಆವೇಶ್

ಈದ್ ಅಲ್-ಅಧಾ ಹಬ್ಬದ ಮುನ್ನ ಬಲಿದಾನಕ್ಕಾಗಿ ಅಜ್ಮೀರ್‌ನಿಂದ ಮೂರು ಮೇಕೆಗಳನ್ನು ಖರೀದಿಸಿದ್ದಾರೆ. ಈ ಸಂದರ್ಭದಲ್ಲಿ ಮಾಡಲಾಗಿರುವ ವಿಡಿಯೋ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿರುವ ವೀಡಿಯೊದಲ್ಲಿ, ಬಲಗೈ ಆವೇಶ್ ಖಾನ್ ತಾನು ಖರೀದಿಸಿದ ಮೇಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಮತ್ತು ಬಕ್ರೀದ್ ಹಬ್ಬಕ್ಕಾಗಿ ಉತ್ಸುಕರಾಗಿರುವುದಾಗಿಯೂ ಹೇಳಿಕೊಂಡಿದ್ದಾರೆ. ಆದ್ರೆ, ಕೆಲವು ಅವರ ಹೇಳಿಕೆಯನ್ನು ಖಂಡಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ವೀಡಿಯೊದಲ್ಲಿ, ಆವೇಶ್ ಮೇಕೆಗಳ ಬಗ್ಗೆ ನೀಡಿದ ಹೇಳಿಕೆ ಏನೆಂದು ನೋಡುವುದಾದ್ರೆ, “ಕಾಫಿ ಅಚ್ಚೆ ಲಗೇ. ಬಕ್ರೆ ಖೂಬ್ಸುರತ್ ಭಿ ಹೈಂ ಔರ್ ಸಾಫ್ ಬಕ್ರೆ ಹೈಂ. ಮುಝೆ ಕಾಫಿ ಪಸಂದ್ ಆಯೆ. ತೋ ಇಸ್ಲಿಯೇ ಮೈನೆ ಯೇ 3 ಬಕ್ರೇ ಲಿಯೇ ಹೈಂ.” (ನನಗೆ ಮೇಕೆಗಳು ಇಷ್ಟವಾಗಿವೆ. ಆಡುಗಳು ತುಂಬಾ ಮುದ್ದಾಗಿವೆ ಮತ್ತು ಸ್ವಚ್ಛವಾಗಿವೆ. ಅದಕ್ಕಾಗಿಯೇ ನಾನು ಇಲ್ಲಿಂದ ಮೂರು ಮೇಕೆಗಳನ್ನು ಖರೀದಿಸಿದ್ದೇನೆ ಮತ್ತು ಬಕ್ರೀದ್ ಹಬ್ಬಕ್ಕಾಗಿ ನಾನು ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ)

ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾದ ಅಭಿಪ್ರಾಯ:

ಓರ್ವ ಬಳಕೆದಾರ ವಿವಿಧ ಧರ್ಮಗಳಲ್ಲಿ ಹಲವು ಆಚರಣೆಗಳು ಕಾಲಕ್ರಮೇಣ ವಿಕಸನಗೊಂಡಿವೆ. ಪ್ರಾಣಿ ಬಲಿಯ ಬಗ್ಗೆಯೂ ಪುನರ್ವಿಮರ್ಶೆ ಏಕೆ ಮಾಡಬಾರದು? ಎಂದು ಪ್ರಶ್ನಿಸಿದ್ದಾರೆ. ಆವೇಶ್ ಖಾನ್‌ರಂತಹ ಪ್ರಭಾವಿ ವ್ಯಕ್ತಿಗಳು ಬದಲಾವಣೆಗೆ ಪ್ರೇರಣೆ ನೀಡಬೇಕು. ಪೂಜೆಯು ಜೀವ ತೆಗೆಯುವುದನ್ನು ಒಳಗೊಂಡಿರಬಾರದು. ಎಂದು ಹೇಳಿದ್ದಾರೆ.

ಇನ್ನೋರ್ವ ಬಳಕೆದಾರ, ಕ್ರಿಕೆಟಿಗ ಅವೇಶ್ ಖಾನ್ ಬಕ್ರೀದ್ (ಈದ್ ಅಲ್-ಅಧಾ)ದಂದು ಬಲಿ ನೀಡಲು 3 ಮೇಕೆಗಳನ್ನು ಖರೀದಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇನ್ನೋರ್ವರು, ಲಕ್ಷಗಟ್ಟಲೆ ಖರ್ಚು ಮಾಡಿ ಮೇಕೆಗಳನ್ನು ಕೊಂಡು ಬಲಿ ಕೊಡುವ ಇಂತಹವರಿಗೆ ನಾಚಿಕೆಯಾಗಬೇಕು, ಬಡ ಪ್ಯಾಲೆಸ್ತೇನಿ ಮಕ್ಕಳು ಕೇವಲ ಪಾರ್ಲೆ-ಜಿ ತಿಂದು ಹಸಿವು ನೀಗಿಸಿಕೊಳ್ಳುತ್ತಿದ್ದಾರೆ. ಇಂತಹವರು ಅವರಿಗೆ ಸಹಾಯ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನೋರ್ವ ಬಳಕೆದಾರರು, ಹಬ್ಬದ ಸಂಭ್ರಮಾಚರಣೆಯ ಹೆಸರಿನಲ್ಲಿ ಕ್ರಿಕೆಟಿಗ ಆವೆಶ್ ಖಾನ್ ಮೂರು ಮುಗ್ಧ ಮೇಕೆಗಳನ್ನು ಬಲಿ ಕೊಡಲು ಹೊರಟಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಒಟ್ಟಾರೆಯಾಗಿ ಆವೆಶ್ ಖಾನ್ ಅವರು ಮೇಕೆಗಳನ್ನು ಖರೀದಿಸಿ ಬಕ್ರೀದ್‌ಗೆ ಸಿದ್ದವಾಗಿದ್ದರೆ, ಇತ್ತ ನೆಟ್ಟಿಗರು ಅವರ ವಿರುದ್ಧ ಟೀಕೆ ವ್ಯಕ್ತಪಡಿಸುತ್ತಿದ್ದಾರೆ.