IPL 2025: ಕಪ್ ಗೆದ್ದ ಬೆನ್ನಲ್ಲೆ RCB ಸೇಲ್ ವದಂತಿ! ಕೊನೆಗೂ ಮೌನಮುರಿದ ಮಾಲೀಕರು, ಹೇಳಿದ್ದೇನು?

IPL 2025: ಕಪ್ ಗೆದ್ದ ಬೆನ್ನಲ್ಲೆ RCB ಸೇಲ್ ವದಂತಿ! ಕೊನೆಗೂ ಮೌನಮುರಿದ ಮಾಲೀಕರು, ಹೇಳಿದ್ದೇನು?

Last Updated:

ಟ್ರೋಫಿ ಗೆದ್ದ ಬಳಿಕ ಆರ್‌ಸಿಬಿ ಫ್ರಾಂಚೈಸಿ ತಂಡವನ್ನು ಸೇಲ್‌ ಮಾಡಲಿದೆ ಎಂಬ ವದಂತಿಯೊಂದು ವ್ಯಾಪಕವಾಗಿ ಹರಡುತ್ತಿದೆ. ಸದ್ಯ, ಈ ಕುರಿತು ಕಂಪನಿಯ ಮಾಲೀಕರು ಸ್ಪಷ್ಟನೆ ನೀಡಿದ್ದಾರೆ.

ಆರ್‌ಸಿಬಿ-ವಿರಾಟ್ ಕೊಹ್ಲಿ
ಆರ್‌ಸಿಬಿ-ವಿರಾಟ್ ಕೊಹ್ಲಿ
ಆರ್‌ಸಿಬಿ-ವಿರಾಟ್ ಕೊಹ್ಲಿ

ಬರೋಬ್ಬರಿ 17 ವರ್ಷಗಳ ಬಳಿಕ ತನ್ನ 18ನೇ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (RCB) ತನ್ನ ಮೊದಲ ಟ್ರೋಫಿಯನ್ನು ಗೆದ್ದಿಕೊಂಡಿದೆ. ಈ ನಡುವೆ ಆರ್‌ಸಿಬಿ ಫ್ರಾಂಚೈಸಿ ತಂಡವನ್ನು ಸೇಲ್‌ ಮಾಡಲಿದೆ ಎಂಬ ವದಂತಿಯೊಂದು ವ್ಯಾಪಕವಾಗಿ ಹರಡುತ್ತಿದೆ. ಸದ್ಯ, ಈ ಕುರಿತು ಕಂಪನಿಯ ಮಾಲೀಕರು ಸ್ಪಷ್ಟನೆ ನೀಡಿದ್ದಾರೆ.

ಯಾವುದೇ ಮಾರಾಟದ ಮಾಡುವ ಯೋಜನೆ ಇಲ್ಲ

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಮಾರಾಟ ಮಾಡಲಾಗುತ್ತಿದೆ ಎಂಬ ವದಂತಿಯನ್ನು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಕಂಪನಿ (USL- United Spirits Ltd) ತಳ್ಳಿಹಾಕಿದೆ. ಆರ್‌ಸಿಬಿ ತಂಡವನ್ನು ಮಾರಾಟ ಮಾಡಲಾಗುತ್ತದೆ ಎನ್ನುವ ಸುದ್ದಿ ಶುದ್ಧ ಸುಳ್ಳು, ಊಹಾಪೋಹ ಅಷ್ಟೇ. ತಂಡವನ್ನು ಮಾರಾಟ ಮಾಡುತ್ತಿಲ್ಲ ಎಂದು ಆರ್​​ಸಿಬಿಯ ಮಾಲಕ ಸಂಸ್ಥೆಯಾದ ಯುನೈಟೆಡ್ ಸ್ಪಿರಿಟ್ಸ್ ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದೆ.

ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವುದು ಸತ್ಯಕ್ಕೆ ದೂರವಾದ ಮಾಹಿತಿ

ಜೂನ್ 10, 2025ರಂದು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (ಬಿಎಸ್‌ಇ)ಗೆ ಯುಎಸ್‌ಎಲ್ ಬರೆದಿರುವ ಪತ್ರದಲ್ಲಿ, ಆರ್‌ಸಿಬಿ ಫ್ರಾಂಚೈಸಿಯ ಒಡೆತನದ ಬಗ್ಗೆ ಯಾವುದೇ ಚರ್ಚೆಗಳನ್ನು ನಡೆಸುತ್ತಿಲ್ಲ ಎಂದು ತಿಳಿಸಿದೆ. “ಮಾಧ್ಯಮಗಳಲ್ಲಿ ಆರ್‌ಸಿಬಿ ಮಾರಾಟದ ಕುರಿತಾದ ವರದಿಗಳು ಕೇವಲ ಊಹಾಪೋಹಗಳಾಗಿದ್ದು, ಕಂಪನಿಯು ಇಂತಹ ಯಾವುದೇ ಚರ್ಚೆ ನಡೆಸಿಲ್ಲ” ಎಂದು ಯುಎಸ್‌ಎಲ್‌ನ ಕಂಪನಿ ಕಾರ್ಯದರ್ಶಿ ಮಿತಾಲ್ ಸಂಘ್ವಿ ಸ್ಪಷ್ಟಪಡಿಸಿದ್ದಾರೆ.

ಈ ವದಂತಿಗಳು ಆರ್‌ಸಿಬಿಯ ಐಪಿಎಲ್ 2025ರ ಚೊಚ್ಚಲ ಟ್ರೋಫಿ ಗೆದ್ದ ಬನ್ನಲ್ಲೆ ಹಬ್ಬಿಕೊಂಡಿವೆ. ಜೂನ್ 3, 2025ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಆರ್‌ಸಿಬಿ ತನ್ನ ಮೊದಲ ಐಪಿಎಲ್ ಟ್ರೋಫಿಯನ್ನು ಗೆದ್ದಿತ್ತು. ಇದರ ಬೆನ್ನಲ್ಲೆ ಡಿಯಾಜಿಯೋ ತನ್ನ ಒಡೆತನದ ಫ್ರಾಂಚೈಸಿಯನ್ನು ಭಾಗಶಃ ಅಥವಾ ಸಂಪೂರ್ಣವಾಗಿ $2 ಬಿಲಿಯನ್ (ಸುಮಾರು 17,000 ಕೋಟಿ ರೂ.) ಮೌಲ್ಯಕ್ಕೆ ಮಾರಾಟ ಮಾಡಲು ಚಿಂತಿಸುತ್ತಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿತ್ತು.

ಆರಂಭದಿಂದಲೂ ಐಪಿಎಲ್ ಆಡ್ತಾ ಇದೆ ಆರ್‌ಸಿಬಿ

ಐಪಿಎಲ್‌​​ನ ಆರಂಭದಲ್ಲಿ ಇದ್ದ 8 ತಂಡಗಳ ಪೈಕಿ ಆರ್‌ಸಿಬಿ ಕೂಡ ಒಂದು. ಮೊದಲಿಗೆ ವಿಜಯ್ ಮಲ್ಯ ಒಡೆತನದಲ್ಲಿ ಯುನೈಟೆಡ್ ಸ್ಪಿರಿಟ್ಸ್ ಇತ್ತು. ಯುನೈಟೆಡ್ ಸ್ಪಿರಿಟ್ಸ್ ಅನ್ನು ಬ್ರಿಟನ್ ಮೂಲದ ಡಿಯಾಜಿಯೋ ಖರೀದಿ ಮಾಡಿತು. ಆ ಬಳಿಕ ಆರ್‌‌ಸಿಬಿಸಿಬಿ ಮಾಲೀಕತ್ವವು ಡಿಯಾಜಿಯೋ ಕೈಗೆ ಹೋಗಿತ್ತು. 2008ರಿಂದ ಐಪಿಎಲ್ ಆಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ವರ್ಷ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಪಡೆದುಕೊಂಡಿದೆ.

ಆರ್‌ಸಿಬಿ ಮಾರಾಟದ ಕುರಿತು ಯಾವುದೇ ಚರ್ಚೆ ನಡೆಯುತ್ತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ಈ ಸ್ಪಷ್ಟನೆಯ ಹೊರತಾಗಿಯೂ, ಆರ್‌ಸಿಬಿ ಗೆಲುವಿನ ಸಂಭ್ರಮದ ಸಂದರ್ಭದಲ್ಲಿ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ಘಟನೆಯು 11 ಜನರ ಸಾವು ಮತ್ತು ಹಲವರ ಗಾಯಕ್ಕೆ ಕಾರಣವಾಗಿತ್ತು. ಈ ಘಟನೆಯ ಬಳಿಕ ಮಾರಾಟದ ವದಂತಿಗಳಿಗೆ ಇಂಬುಕೊಟ್ಟಿತು. ಈ ಘಟನೆಯಿಂದ ಫ್ರಾಂಚೈಸಿಯ ಮೇಲೆ ಒತ್ತಡ ಹೆಚ್ಚಾಗಿದ್ದು, ಭಾರತದ ಆರೋಗ್ಯ ಸಚಿವಾಲಯವು ಐಪಿಎಲ್‌ನಲ್ಲಿ ತಂಬಾಕು ಮತ್ತು ಮದ್ಯದ ಬ್ರಾಂಡ್‌ಗಳ ಪ್ರಚಾರವನ್ನು ನಿಷೇಧಿಸುವ ಒತ್ತಾಯದ ಮಧ್ಯೆ ಈ ವದಂತಿಗಳು ಹರಡಿದ್ದವು.

ಆರ್‌ಸಿಬಿಯ ಮೌಲ್ಯವು 2024ರಲ್ಲಿ $117 ಮಿಲಿಯನ್‌ಗಿಂತಲೂ ಹೆಚ್ಚಾಗಿದ್ದು, ವಿರಾಟ್ ಕೊಹ್ಲಿಯವರ ಜನಪ್ರಿಯತೆ ಮತ್ತು ತಂಡದ ಇತ್ತೀಚಿನ ಯಶಸ್ಸಿನಿಂದ ಇದು ಗಗನಕ್ಕೇರಿದೆ. ಆದರೆ, ಯುಎಸ್‌ಎಲ್‌ನ ಸ್ಪಷ್ಟನೆಯು ಈ ವದಂತಿಗಳನ್ನು ತಣ್ಣಗಾಗಿಸಿದ್ದು, ಆರ್‌ಸಿಬಿ ತನ್ನ ಒಡೆತನದಲ್ಲಿ ಯಾವುದೇ ಬದಲಾವಣೆಗೆ ಯೋಜನೆ ಹಾಕಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.