New Year 2025: ವರ್ಷದ ಕೊನೆಯ ದಿನ ಪಣಂಬೂರು ಬೀಚ್‌ನಲ್ಲಿ ಸೂರ್ಯಾಸ್ತ ಕಣ್ತುಂಬಿಕೊಂಡ ಜನರು! | Sunset at Panamburu beach on year end

New Year 2025: ವರ್ಷದ ಕೊನೆಯ ದಿನ ಪಣಂಬೂರು ಬೀಚ್‌ನಲ್ಲಿ ಸೂರ್ಯಾಸ್ತ ಕಣ್ತುಂಬಿಕೊಂಡ ಜನರು! | Sunset at Panamburu beach on year end

Last Updated:

ವರ್ಷದ ಕೊನೆಯ ಸೂರ್ಯಾಸ್ತಮಾನವನ್ನು ಜನ ಹಲವು ಪ್ರದೇಶಗಳಲ್ಲಿ ನೋಡಿ ಕಣ್ತುಂಬಿಕೊಂಡಿದ್ದಾರೆ. ಮಂಗಳೂರಿನ ಪಣಂಬೂರು ಬೀಚ್, ಸುರತ್ಕಲ್, ಮುಕ್ಕ, ತಣ್ಣೀರುಬಾವಿ, ಬೊಕ್ಕಪಟ್ಟಣ ಸೇರಿದಂತೆ ಕಡಲತೀರದ ಹಲವು ಭಾಗಗಳಿಂದ ಪ್ರವಾಸಿಗರು ವರ್ಷದ ಕೊನೆಯ ಸೂರ್ಯನನ್ನು ಬೀಳ್ಕೊಟ್ಟರು.

X

ವಿಡಿಯೋ ಇಲ್ಲಿ ನೋಡಿ

ಮಂಗಳೂರು: ಹೊಸ ವರುಷ ಬಂದಿದೆ(New Year 2025). ಹಳೆಯ ನೆನಪುಗಳ ಜೊತೆ ಹೊಸ ಸೂರ್ಯೋದಯವಾಗಿದೆ(Sunrise). 2024ರ ಕಹಿ ನೆನಪುಗಳು ಸೂರ್ಯನ ಜೊತೆ ಅಸ್ತವಾಗಿವೆ. ಮಂಗಳೂರಿನ ಪಣಂಬೂರು ಬೀಚ್‌ನಲ್ಲಿ(Panamburu Beach) ನೆರೆದಿದ್ದ ಸಾವಿರಾರು ಜನ 2024ರ ಕೊನೆಯ ಸೂರ್ಯಾಸ್ತವನ್ನು ಸಂಭ್ರಮಿಸಿದ ಬಗೆ ಇದು.

ಬೆಳಗ್ಗಿನಿಂದಲೇ ಪಣಂಬೂರು ಬೀಚ್‌ಗೆ ಪ್ರವಾಸಿಗರು ಆಗಮಿಸಿದ್ದರೂ ಸಂಜೆಯ ವೇಳೆಗೆ ಈ ಸಂಖ್ಯೆ ದುಪ್ಪಟ್ಟಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ, ದೇಶದ ಹಲವು ಭಾಗಗಳಿಂದ ಆಗಮಿಸಿದ ಪ್ರವಾಸಿಗರು ಪಣಂಬೂರು ಬೀಚ್‌ನಲ್ಲಿ ಸೂರ್ಯಾಸ್ತಕ್ಕಾಗಿಯೇ ಕಾದು ಕುಳಿತಿದ್ದರು. ಮೋಡದ ಜೊತೆ ಸರಸವಾಡುತ್ತಾ ಅಸ್ತಂಗತನಾದ ಸೂರ್ಯ ಕೊನೆಗೆ ನೈಜ ದರ್ಶನ ನೀಡುತ್ತಾ ಕಡಲೊಳಗೆ ಲೀನವಾದ. ಸೂರ್ಯನ ಪ್ರಭೆ ಅಸ್ತವಾಗುವ ವೇಳೆ ಇಡೀ ಆಕಾಶ ಕಡುಕೆಂಪಗೆ ಗೋಚರಿಸಿತ್ತು. ಜನರೂ ಕೂಡ ವರ್ಷದ ಕೊನೆಯ ಸೂರ್ಯನಿಗೆ ಟಾಟಾ ಬೈ ಹೇಳಿದ್ದಾರೆ.

ಇದನ್ನೂ ಓದಿ: International Kho-Kho World Cup: ಖೋ ಖೋ ವಿಶ್ವಕಪ್‌ನಲ್ಲಿ ಕೃಷಿಕರ ಮಕ್ಕಳು- ಇದು ಸಕ್ಕರೆನಾಡಿನ ವಿದ್ಯಾರ್ಥಿನಿಯರ ಸಾಧನೆ

ವರ್ಷದ ಕೊನೆಯ ಸೂರ್ಯಾಸ್ತಮಾನವನ್ನು ಜನ ಹಲವು ಪ್ರದೇಶಗಳಲ್ಲಿ ನೋಡಿ ಕಣ್ತುಂಬಿಕೊಂಡಿದ್ದಾರೆ. ಮಂಗಳೂರಿನ ಪಣಂಬೂರು ಬೀಚ್, ಸುರತ್ಕಲ್, ಮುಕ್ಕ, ತಣ್ಣೀರುಬಾವಿ, ಬೊಕ್ಕಪಟ್ಟಣ ಸೇರಿದಂತೆ ಕಡಲತೀರದ ಹಲವು ಭಾಗಗಳಿಂದ ಪ್ರವಾಸಿಗರು ವರ್ಷದ ಕೊನೆಯ ಸೂರ್ಯನನ್ನು ಬೀಳ್ಕೊಟ್ಟರು. ಪಣಂಬೂರು ಬೀಚ್‌ನಲ್ಲಿ ಕುಟುಂಬ ಸಮೇತ, ಸ್ನೇಹಿತರ ಜೊತೆಗೂಡಿ ಆಗಮಿಸಿದ ಪ್ರವಾಸಿಗರು ಜಲಕ್ರೀಡೆಗಳನ್ನು ಆಡಿ ಸಂಭ್ರಮಿಸಿದರು.

ಪ್ಲೋಟಿಂಗ್ ಬ್ರಿಡ್ಜ್‌ ನಲ್ಲಿ ಕಡಲ ಅಲೆಗಳೊಂದಿಗೆ ಆಟ ಆಡುತ್ತಾ, ಸೂರ್ಯ ನನ್ನು ಮತ್ತಷ್ಟು ಹತ್ತಿರದಿಂದ ಕಂಡು ಖುಷಿಪಟ್ಟರು. ಕಳೆದೊಂದು ವಾರದಿಂದ ಮಂಗಳೂರಿಗೆ ಬರುವ ಪ್ರವಾಸಿಗರ ಸಂಖ್ಯೆ ಜಾಸ್ತಿಯಾಗಿದ್ದು, ವರ್ಷಾಂತ್ಯಕ್ಕೆ ದುಪ್ಪಟ್ಟಾಗಿತ್ತು. ಆಟ ಆಡೋಕೆ ಬೀಚ್, ಭಕ್ತಿಗೆ ದೇವಸ್ಥಾನಗಳು, ಊಟಕ್ಕೆ ಮೀನೂಟ ಇದ್ರೆ ಗೋವಾ ಎಲ್ಲಾ ಯಾಕೆ ಮಂಗಳೂರೇ ದಿ ಬೆಸ್ಟ್ ಅಂತಾ ಜನ ಖುಷಿಪಟ್ಟರು.