Zaheer Khan: 20 ವರ್ಷದ ಬಳಿಕ ಬಂದು ಮತ್ತೆ ಐ ಲವ್ ಯೂ ಅಂದ್ರು ಆ ಯುವತಿ! ನೋಡುತ್ತಾ ನಿಂತಲ್ಲೇ ನಿಂತು ಬಿಟ್ಟ ಜಹೀರ್ ಖಾನ್!/Fan Who Proposed Zaheer Khan on TV Returns With Another Proposal After 20 Years

Zaheer Khan: 20 ವರ್ಷದ ಬಳಿಕ ಬಂದು ಮತ್ತೆ ಐ ಲವ್ ಯೂ ಅಂದ್ರು ಆ ಯುವತಿ! ನೋಡುತ್ತಾ ನಿಂತಲ್ಲೇ ನಿಂತು ಬಿಟ್ಟ ಜಹೀರ್ ಖಾನ್!/Fan Who Proposed Zaheer Khan on TV Returns With Another Proposal After 20 Years

Last Updated:

Viral Video: 2005 ರಲ್ಲಿ ಜಹೀರ್ ಖಾನ್‌ಗೆ ಪ್ರೀತಿ ತೋರಿಸಿದ್ದ ಹುಡುಗಿ 20 ವರ್ಷಗಳ ನಂತರ ಮತ್ತೆ ಅದೇ ಪ್ಲೇಕಾರ್ಡ್ ಹಿಡಿದು ಜಹೀರ್ ಅವರನ್ನು ಭೇಟಿಯಾದರು. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮತ್ತೆ ಬಂದ್ರು ಜಹೀರ್ ಐ ಲವ್‌ ಯೂ ಅಂದಿದ್ದ ಯುವತಿಮತ್ತೆ ಬಂದ್ರು ಜಹೀರ್ ಐ ಲವ್‌ ಯೂ ಅಂದಿದ್ದ ಯುವತಿ
ಮತ್ತೆ ಬಂದ್ರು ಜಹೀರ್ ಐ ಲವ್‌ ಯೂ ಅಂದಿದ್ದ ಯುವತಿ

ಒಂದು ಕಾಲದಲ್ಲಿ ಎಲ್ಲ ಕ್ರಿಕೆಟ್ ಅಭಿಮಾನಿಗಳ (Cricket Fans) ಮನಸ್ಸು ಗೆದ್ದಿದ್ದ ಒಂದು ವಿಡಿಯೋ ಇತ್ತೀಚೆಗೆ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ (Social Media) ಸಖತ್ ಸದ್ದು ಮಾಡ್ತಿದೆ. 2005 ರಲ್ಲಿ ನಡೆದ ಒಂದು ಕ್ರಿಕೆಟ್ ಮ್ಯಾಚ್‌ನಲ್ಲಿ ಒಬ್ಬ ಹುಡುಗಿ ‘ಜಹೀರ್, ಐ ಲವ್ ಯೂ’ (Zaheer) ಅಂತ ಬರೆದಿದ್ದ ಪ್ಲೇಕಾರ್ಡ್ ಹಿಡಿದು ಜಹೀರ್ ಖಾನ್ ಮೇಲೆ ತನ್ನ ಪ್ರೀತಿ ತೋರಿಸಿದ್ದ ದೃಶ್ಯ ಎಲ್ಲರಿಗೂ ನೆನಪಿರಬಹುದು. ಆ ವಿಡಿಯೋ ಆಗ ವೈರಲ್ ಆಗಿತ್ತು. ಈಗಲೂ ಕೂಡ ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಈಗ ಅದೇ ಹುಡುಗಿ 20 ವರ್ಷಗಳ ನಂತರ ಮತ್ತೆ ಅದೇ ರೀತಿ ‘ಜಹೀರ್, ಐ ಲವ್ ಯೂ’ ಅಂತ ಬರೆದ ಪ್ಲೇಕಾರ್ಡ್ ಹಿಡಿದು ಜಹೀರ್ ಖಾನ್ (Zaheer Khan) ಮುಂದೆ ಬಂದಿದ್ದಾರೆ.

20 ವರ್ಷಗಳ ನಂತ್ರ ಮತ್ತೆ ಬಂದ ಯುವತಿ!

2005 ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಆ ಹುಡುಗಿ ‘ಜಹೀರ್ ಐ ಲವ್ ಯೂ’ ಅಂತ ಬರೆದ ಪ್ಲೇಕಾರ್ಡ್ ತೋರಿಸಿದ್ದರು. ಟಿವಿ ಕ್ಯಾಮೆರಾಗಳು ಅದನ್ನ ಸೆರೆ ಹಿಡಿದಿದ್ದವು. ಕ್ರೀಡಾಂಗಣದ ದೊಡ್ಡ ಪರದೆಯಲ್ಲಿ ಆ ದೃಶ್ಯವನ್ನ ತೋರಿಸಿದಾಗ ಪೆವಿಲಿಯನ್‌ನಲ್ಲಿದ್ದ ಜಹೀರ್ ಖಾನ್‌ಗೆ ಯುವರಾಜ್ ಸಿಂಗ್ ಆ ದೃಶ್ಯ ತೋರಿಸಿದ್ದರು. ಮೊದಲಿಗೆ ಜಹೀರ್ ಖಾನ್ ಆಶ್ಚರ್ಯಪಟ್ಟರು. ನಂತರ ಆ ಹುಡುಗಿಗೆ ಫ್ಲೈಯಿಂಗ್ ಕಿಸ್ ಕೊಟ್ಟರು.

ಲಕ್ನೋ ಸೂಪರ್ ಜೈಂಟ್ಸ್‌ ತಂಡದ ಮಾರ್ಗದರ್ಶಕ ಜಹೀರ್!

ಇತ್ತೀಚೆಗೆ ಜಹೀರ್ ಖಾನ್ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾರ್ಗದರ್ಶಕರಾಗಿದ್ದಾಗ ಆ ಹುಡುಗಿ ಮತ್ತೆ ಅದೇ ‘ಜಹೀರ್, ಐ ಲವ್ ಯೂ’ ಪ್ಲೇಕಾರ್ಡ್ ಹಿಡಿದು ಜಹೀರ್ ಖಾನ್ ಅವರನ್ನು ಭೇಟಿಯಾದರು. ಈ ದೃಶ್ಯಗಳನ್ನು ಲಕ್ನೋ ಸೂಪರ್ ಜೈಂಟ್ಸ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ “ಜಹೀರ್ ಖಾನ್ ಮೇಲಿನ ನಮ್ಮ ಪ್ರೀತಿ ಎಂದಿಗೂ ಬದಲಾಗುವುದಿಲ್ಲ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಈ ಇಬ್ಬರು ವಿಶ್ವದ ಅತ್ಯಂತ ಅಪಾಯಕಾರಿ ಬೌಲರ್ಸ್! ಒಂದೇ ತಂಡದಲ್ಲಿರುವ ಈ ಜೋಡಿಯ ದಾಳಿ ಎದುರಿಸುವುದು ಕಷ್ಟ ಎಂದ ಧೋನಿ

ಜಹೀರ್‌ ಖಾನ್‌ಗೆ ಆ ಹುಡುಗಿ ತೋರಿಸಿದ್ದ ಯುವರಾಜ್‌ ಸಿಂಗ್!

ಮ್ಯಾಚ್ ನಡೀತಿದ್ದಾಗ ಕ್ರೀಡಾಂಗಣದ ದೊಡ್ಡ ಪರದೆಯ ಮೇಲೆ ಒಂದು ದೃಶ್ಯ ತೋರಿಸಲಾಗುತ್ತಿತ್ತು. ಅದರಲ್ಲಿ ಒಬ್ಬ ಅಭಿಮಾನಿ ಹುಡುಗಿ ಮುಖ ಮುಚ್ಚಿಕೊಂಡು ನಾಚುತ್ತಾ ಕುಣಿಯುತ್ತಿದ್ದಳು. ಆಗ ಪೆವಿಲಿಯನ್‌ನಲ್ಲಿದ್ದ ಯುವರಾಜ್ ಸಿಂಗ್, ಪಕ್ಕದಲ್ಲಿದ್ದ ಜಹೀರ್ ಖಾನ್‌ಗೆ ಆ ದೃಶ್ಯ ತೋರಿಸಿದರು. ಮೊದಲು ಜಹೀರ್ ಖಾನ್ ಆಶ್ಚರ್ಯದಿಂದ ನೋಡಿದರು. ನಂತರ ಆ ಹುಡುಗಿ ತನ್ನನ್ನೇ ನೋಡುತ್ತಿದ್ದಾಳೆ ಅಂತ ಗೊತ್ತಾಗಿ, ಫ್ಲೈಯಿಂಗ್ ಕಿಸ್ ಕೊಟ್ಟರು. ಕ್ಯಾಮೆರಾಗಳು ಈ ಎಲ್ಲಾ ದೃಶ್ಯಗಳನ್ನು ಸೆರೆ ಹಿಡಿದವು.

ಗೌತಮ್‌ ಗಂಭೀರ್‌ ಜಾಗಕ್ಕೆ ಜಹೀರ್‌ ಖಾನ್‌!

ಗೌತಮ್ ಗಂಭೀರ್ ಕಳೆದ ವರ್ಷ ಆಗಸ್ಟ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾರ್ಗದರ್ಶಕರಾದಾಗ, ಅವರ ಜಾಗದಲ್ಲಿ ಜಹೀರ್ ಖಾನ್ ಅವರನ್ನು LSG ತಂಡದ ಮಾರ್ಗದರ್ಶಕರನ್ನಾಗಿ ನೇಮಿಸಲಾಯಿತು. ಗಂಭೀರ್ ನಂತರ ಭಾರತೀಯ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡರು. ಲಕ್ನೋ ಸೂಪರ್ ಜೈಂಟ್ಸ್ ತಂಡವು ಮಾರ್ಚ್ 24 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದೊಂದಿಗೆ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದೆ.