ಹೌದು, ಪಂದ್ಯ ಗೆದ್ದ ಬಳಿಕ ಮಾತನಾಡಿದ ಟೆಂಬಾ ಬವುಮಾ ಸೌತ್ ಆಫ್ರಿಕಾದ ಸ್ಟಾರ್ ವೇಗಿ ಕಗಿಸೋ ರಬಾಡ ಅವರ ಬೌಲಿಂಗ್ ವೈಖರಿಯನ್ನು ಹಾಡಿ ಹೊಗಳಿದರು. ಮಾತ್ರವಲ್ಲ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಗೆಲುವಿನಲ್ಲಿ, ಅವರ ಕೊಡುಗೆಯನ್ನು ಸ್ಮರಿಸಿದರು.
ಎರಡು ದಿನಗಳು ನಮಗೆ ಅತ್ಯಂತ ಪ್ರಮುಖವಾಗಿತ್ತು
ಪಂದ್ಯದ ಬಳಿಕ ಮಾತನಾಡಿದ, ಟೆಂಬಾ ಬವುಮಾ, ಎರಡು ದಿನಗಳು ನಮಗೆ ವಿಶೇಷವಾಗಿತ್ತು, ನಮಗೆ ಸಿಕ್ಕ ಬೆಂಬಲ ನೋಡ್ತಾ ಇದ್ರೆ, ನಾವು ದಕ್ಷಿಣ ಆಫ್ರಿಕಾದಲ್ಲಿ ಆಡಿದಂತೆ ಭಾಸವಾಯಿತು. ಒಂದು ತಂಡವಾಗಿ ನಮಗೆ ಇದು ವಿಶೇಷ ಕ್ಷಣ. ಈ ಸಂಭ್ರಮವನ್ನು ನಾವು ಸೌತ್ ಆಫ್ರಿಕಾಗೆ ತೆರಳಿ ಆಚರಿಸಲು ಭಯಸುತ್ತೇವೆ. ಆದ್ರೆ, ಅದಕ್ಕೆ ಇನ್ನೂ ಒಂದೆರಡು ದಿನಗಳು ಬೇಕಾಗುತ್ತದೆ.
ತಂಡದಲ್ಲಿ ಶಕ್ತಿ ಇತ್ತು, ತಂಡವಾಗಿ ನಾವು ಈ ಗೆಲುವನ್ನು ಬಯಸುತ್ತಿದ್ದೆವು, ನಾವು ಯಾವಾಗಲು ಟ್ರೋಫಿಯ ಬಾಗಿಲು ತಟ್ಟುತ್ತಿದ್ದೇವೆ ಆದ್ರೆ, ಅದನ್ನು ತಲುಪಲು ಸಾಧ್ಯವಾಗ್ತಾ ಇರಲಿಲ್ಲ. ನಾವು ಹೃದಯದ ನೋವು, ನಿರಾಶೆಗಳನ್ನು ದಾಟಿದ್ದೇವೆ. ನಮ್ಮ ಈ ಹಿಂದಿನ ಆಟಗಾರರೊಂದಿಗೆ ಇದನ್ನು ನೋಡಿದ್ದೇವೆ ಮತ್ತು ದೇವರು ನಮ್ಮ ಜೊತೆ ಇದ್ದಾನೆ ಎಂದರು.
ರಬಾಡಗೆ ಕೆಲವೇ ವರ್ಷಗಳಲ್ಲಿ ಹಾಲ್ ಆಫ್ ಫೇಮ್
ಇದೇ ಸಂದರ್ಭದಲ್ಲಿ, ಕಗಿಸೋ ರಬಾಡ ಬಗ್ಗೆ ಮಾತನಾಡಿದ ಅವರು, ಅವರು ಒಬ್ಬ ಉತ್ತಮ ಆಟಗಾರ, ಒಂದೆರಡು ವರ್ಷಗಳಲ್ಲಿ ಅವರು ‘ಐಸಿಸಿ ಹಾಲ್ ಆಫ್ ಫೇಮ್’ನಲ್ಲಿರುತ್ತಾರೆ. ಇತ್ತೀಚೆಗೆ ಅವರು ವಿವಾದ ಒಂದರಲ್ಲಿ ಸಿಲುಕಿದ್ದರು. ಆದರೆ, ಅವರು ಏನು ಮಾಡಬೇಕೋ ಅದನ್ನು ಮಾಡಿದರು ಎಂದು ಹೇಳಿದರು.
ಇನ್ನೂ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ, ಮಾರ್ಕ್ರಂ ಅದ್ಭುತ ಆಟಗಾರ, ಅಂಕಿಅಂಶಗಳು ಮುಖ್ಯವಾಗುವುದಿಲ್ಲ, ಆದ್ರೆ, ಪ್ರಮುಖ ಹಂತದಲ್ಲಿ ತಂಡಕ್ಕೆ ಆಧಾರವಾಗುವುದು ಮುಖ್ಯ, ಐಡೆನ್ ಅದನ್ನು ಮಾಡಿದ್ದಾರೆ, ಅವರು ನಮ್ಮ ತಂಡದ ದೊಡ್ಡ ಆಟಗಾರ ಎಂದರು.
ಮಾರ್ಕ್ರಮ್- ಬವುಮಾ 147 ರನ್ ಜೊತೆಯಾಟ
ಆದರೆ ಅಲ್ಲಿಂದ ಜೊತೆಗೂಡಿದ ಮಾರ್ಕ್ರಮ್ ಹಾಗೂ ನಾಯಕ ಬವುಮಾ ಆಸೀಸ್ ಬೌಲರ್ಗಳನ್ನ ಸಮರ್ಥವಾಗಿ ಎದುರಿಸಿದರು. ಈ ಇಬ್ಬರು ಅನುಭವಿಗಳು 3ನೇ ವಿಕೆಟ್ ಜೊತೆಯಾಟದಲ್ಲಿ 147 ರನ್ ಸೇರಿಸಿದರು. 3ನೇ ದಿನ ಮಾರ್ಕ್ರಮ್ 159 ಎಸೆತಗಳಲ್ಲಿ 11 ಬೌಂಡರಿಗಳ ಸಹಿತ ಅಜೇಯ 102 ರನ್ಗಳಿಸಿದರೆ, ನಾಯಕ ಟೆಂಬ ಬವುಮಾ 121 ಎಸೆತಗಳಲ್ಲಿ 5 ಬೌಂಡರಿಗಳ ಸಹಿತ ಅಜೇಯ 65 ರನ್ಗಳಿಸಿ 4ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದರು.
ಆದರೆ 4ನೇ ದಿನ ಬವುಮಾ ತಮ್ಮ 3ನೇ ದಿನದ ಮೊತ್ತಕ್ಕೆ ಕೇವಲ 1 ರನ್ ಮಾತ್ರ ಸೇರಿಸಲು ಶಕ್ತರಾದರು. 66 ರನ್ಗಳಿಸಿದ್ದ ಬವುಮಾರನ್ನ ಆಸಿಸ್ ನಾಯಕ ಪ್ಯಾಟ್ ಕಮಿನ್ಸ್ ದಿನದ 3ನೇ ಓವರ್ನಲ್ಲೇ ಪೆವಿಲಿಯನ್ಗಟ್ಟಿದರು. 4ನೇ ಕ್ರಮಾಂಕದಲ್ಲಿ ಬಂದ ಟ್ರಿಸ್ಟನ್ ಸ್ಟಬ್ಸ್ 43 ಎಸೆತಗಳನ್ನಾಡಿ ಕೇವಲ 8 ರನ್ಗಳಿಸಿ ಔಟ್ ಆದರು. ಮಾರ್ಕ್ರಮ್ ತಮ್ಮ 207 ಎಸೆತಗಳಲ್ಲಿ14 ಬೌಂಡರಿಗಳ ನೆರವಿನೊಂದ 136 ರನ್ಗಳಿಸಿ ಗೆಲುವಿಗೆ ಕೇವಲ 6 ರನ್ಗಳಿದ್ದಾಗ ಸಿಕ್ಸರ್ ಹೊಡೆಯುವ ಯತ್ನದಲ್ಲಿ ಜೋಶ್ ಹ್ಯಾಜಲ್ವುಡ್ಗೆ ವಿಕೆಟ್ ಒಪ್ಪಿಸಿದರು. ಡೇವಿಡ್ ಬೆಡಿಂಗ್ಹ್ಯಾಮ್ ಅಜೇಯ 21 ರನ್ ಹಾಗೂ ಕೈಲ್ ವರೇನ್ ಅಜೇಯ 4 ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.
June 14, 2025 7:48 PM IST
WTC Final: ಆತನೇ ನಮ್ಮ ತಂಡದ ಹೀರೋ, ಕೆಲವೇ ವರ್ಷದಲ್ಲಿ ಆತನಿಗೆ ‘ಹಾಲ್ ಆಫ್ ಫೇಮ್’ ಸಿಗಲಿದೆ: ಬವುಮಾ ಗೆಲುವಿನ ಕ್ರೆಡಿಟ್ ಕೊಟ್ಟಿದ್ದು ಯಾರಿಗೆ?