Pat Cummins: ಅವರಿಬ್ಬರಿಂದಲೇ ನಮಗೆ ಸೋಲಾಯಿತು! WTC ಫೈನಲ್ ಸೋಲಿಗೆ ಕಾರಣ ಬಹಿರಂಗಪಡಿಸಿದ ಪ್ಯಾಟ್ ಕಮಿನ್ಸ್ | Aiden and Temba Didn t Give Us a Chance in WTC Final says Cummins Admits

Pat Cummins: ಅವರಿಬ್ಬರಿಂದಲೇ ನಮಗೆ ಸೋಲಾಯಿತು! WTC ಫೈನಲ್ ಸೋಲಿಗೆ ಕಾರಣ ಬಹಿರಂಗಪಡಿಸಿದ ಪ್ಯಾಟ್ ಕಮಿನ್ಸ್ | Aiden and Temba Didn t Give Us a Chance in WTC Final says Cummins Admits

Last Updated:


ಶನಿವಾರ ನಡೆದ 2025 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾ ವಿರುದ್ಧ 5 ವಿಕೆಟ್‌ಗಳಿಂದ ಸೋತಿತು. ಈ ಗೆಲುವಿನೊಂದಿಗೆ, ದಕ್ಷಿಣ ಆಫ್ರಿಕಾ 27 ವರ್ಷಗಳ ಕನಸನ್ನು ನನಸಾಗಿಸಿತು.

ಪ್ಯಾಟ್ ಕಮಿನ್ಸ್ಪ್ಯಾಟ್ ಕಮಿನ್ಸ್
ಪ್ಯಾಟ್ ಕಮಿನ್ಸ್

ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ (Lords Stadium) ಜೂನ್ 14, 2025 ರಂದು ದಕ್ಷಿಣ ಆಫ್ರಿಕಾ (South Africa) ತಂಡವು ತನ್ನ 27 ವರ್ಷಗಳ ಐಸಿಸಿ ಪ್ರಶಸ್ತಿಯ ಬರವನ್ನು ಕೊನೆಗೊಳಿಸಿತು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC 2025) 2025 ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು (Australia) 5 ವಿಕೆಟ್‌ಗಳಿಂದ ಮಣಿಸಿ, ದಕ್ಷಿಣ ಆಫ್ರಿಕಾ ತನ್ನ ಮೊದಲ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದುಕೊಂಡಿತು. I282 ರನ್​ಗಳ ಕಠಿಣ ಗುರಿ ನೀಡಿಯೂ ಆಸ್ಟ್ರೇಲಿಯಾ ಡಿಫೆಂಡ್ ಮಾಡಿಕೊಳ್ಳುವಲ್ಲಿ ವಿಫಲವಾಯಿತು. ಈ ಸೋಲಿಗೆ ಐಡೆನ್ ಮಾರ್ಕ್ರಾಮ್ ಮತ್ತು ಟೆಂಬಾ ಬವುಮಾ ಅವರ ಅಸಾಧಾರಣ ಬ್ಯಾಟಿಂಗ್‌ ಕಾರಣ ಎಂದು ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ಹೇಳಿದ್ದಾರೆ.

ಚೋಕರ್ಸ್ ಹಣಪಟ್ಟ ಅಳಿಸಿದ ದಕ್ಷಿಣ ಆಫ್ರಿಕಾ

ಶನಿವಾರ ನಡೆದ 2025 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾ ವಿರುದ್ಧ 5 ವಿಕೆಟ್‌ಗಳಿಂದ ಸೋತಿತು. ಈ ಗೆಲುವಿನೊಂದಿಗೆ, ದಕ್ಷಿಣ ಆಫ್ರಿಕಾ 27 ವರ್ಷಗಳ ಕನಸನ್ನು ನನಸಾಗಿಸಿತು. ಹಲವು ವರ್ಷಗಳಿಂದ ಸೆಮಿಫೈನಲ್​ ಹಂತದಲ್ಲೇ ನಿರ್ಗಮಿಸಿ ಐಸಿಸಿ ಪ್ರಶಸ್ತಿಯನ್ನು ಕಳೆದುಕೊಳ್ಳುತ್ತಿದ್ದ ದಕ್ಷಿಣ ಆಫ್ರಿಕಾ ತಂಡ ಈ ಗೆಲುವಿನೊಂದಿಗೆ, ತಮ್ಮ ಮೇಲೆ ಬಿದ್ದಿದ್ದ ಚೋಕರ್ಸ್ ಎಂಬ ಹೆಗ್ಗುರುತನ್ನ ಅಳಿಸಿಹಾಕಿದರು. ಈ ಪಂದ್ಯದ ನಂತರ ಮಾತನಾಡಿದ ಪ್ಯಾಟ್ ಕಮ್ಮಿನ್ಸ್, ದಕ್ಷಿಣ ಆಫ್ರಿಕಾ ತಂಡದ ಮೇಲೆ ಹೊಗಳಿಕೆಯ ಸುರಿಮಳೆಗೈದರು. ಅವರು ಈ ಗೆಲುವಿಗೆ ಸಂಪೂರ್ಣವಾಗಿ ಅರ್ಹರು ಎಂದು ಹೇಳಿದರು. ತಮ್ಮ ತಂಡವು ಕೆಲವು ವಿಭಾಗಗಳಲ್ಲಿ ವಿಫಲವಾಗಿದೆ ಅಲ್ಲದೆ ಮಾರ್ಕ್ರಮ್ ಮತ್ತು ಬವುಮಾ ತಮಗೆ ಪಂದ್ಯದಲ್ಲಿ ಉಳಿಯುವ ಯಾವುದೇ ಅವಕಾಶ ನೀಡಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ಅವರಿಬ್ಬರಿಂದಲೇ ಸೋಲು

“ಈ ಪಂದ್ಯದಲ್ಲಿ ಹಲವು ಬಾರಿ ಏರಿಳಿತಳು ಸಂಭವಿಸಿದರೂ, ಗೆಲುವು ನಮ್ಮ ಟ್ರ್ಯಾಕ್​​ನಲ್ಲಿಯೇ ಇತ್ತು. ಆದರೆ ಅದನ್ನು ಉಳಿಸಿಕೊಳ್ಳುವುದಕ್ಕೆ ನಾವು ಉತ್ತಮವಾಗಿ ಕಾರ್ಯನಿರ್ವಹಿಸಲಿಲ್ಲ. ಮೊದಲ ಇನ್ನಿಂಗ್ಸ್ ಮುನ್ನಡೆಯ ನಂತರ ನಾವು ಉತ್ತಮವಾಗಿ ಬ್ಯಾಟಿಂಗ್ ಮಾಡಲಿಲ್ಲ. ದಕ್ಷಿಣ ಆಫ್ರಿಕಾ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ನಮಗೆ ಪಂದ್ಯದಲ್ಲಿ ಉಳಿಯುವ ಯಾವುದೇ ಅವಕಾಶವನ್ನ ನೀಡಲಿಲ್ಲ. ನಮ್ಮ ಟಾಪ್-7 ನಲ್ಲಿ ಕೆಲವು ಸಮಸ್ಯೆಗಳಿದ್ದವು. ಕಳೆದ ಎರಡು ವರ್ಷಗಳಲ್ಲಿ ನಮ್ಮ ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಪಂದ್ಯದಲ್ಲೂ ಮೊದಲ ಎರಡು ದಿನಗಳಲ್ಲಿ ನಮ್ಮ ಬೌಲರ್‌ಗಳು ಅದ್ಭುತ ಬೌಲಿಂಗ್ ಮಾಡಿದರು, ಆದರೆ 3ನೇ ದಿನವೂ ನಮ್ಮಿಂದಾದದ್ದೆಲ್ಲಾ ಪ್ರಯತ್ನಿಸಿದೆವಾದರೂ ಅವರಿಬ್ಬರು ನಮಗೆ ಚಾನ್ಸ್ ನೀಡಲಿಲ್ಲ” ಎಂದರು.

ಅದ್ಭುತ ಪಯಣ

” ಈ ಪಂದ್ಯದಲ್ಲಿ ನೇಥನ್ ಲಿಯಾನ್ ಚೆನ್ನಾಗಿ ಬೌಲಿಂಗ್ ಮಾಡಿದರು. ಆದರೆ ಅವರು ವಿಕೆಟ್ ಪಡೆಯಲಾಗಲಿಲ್ಲ. ದಕ್ಷಿಣ ಆಫ್ರಿಕಾ ತಮ್ಮ ಸಾಮರ್ಥ್ಯವೇನೆಂಬುದನ್ನ ತೋರಿಸಿತು. ಅವರು ಈ ಗೆಲುವಿಗೆ ಸಂಪೂರ್ಣವಾಗಿ ಅರ್ಹರು. ಪಂದ್ಯದ ಕೊನೆಯವರೆಗೂ ಅವರು ನಮಗೆ ಯಾವುದೇ ಚಾನ್ಸ್​ ಬಿಟ್ಟುಕೊಡಲಿಲ್ಲ. ನನಗೆ ಟೆಸ್ಟ್ ಕ್ರಿಕೆಟ್ ತುಂಬಾ ಇಷ್ಟ. ಫೈನಲ್ ತಲುಪುವುದು ಒಂದು ದೊಡ್ಡ ಸಾಧನೆ. ಕೇವಲ ಒಂದು ಪಂದ್ಯದೊಂದಿಗೆ ಶೂಟೌಟ್‌ನಲ್ಲಿ ಎರಡು ವರ್ಷಗಳ ಟೂರ್ನಮೆಂಟ್ ಅನ್ನು ನಿರ್ಧರಿಸುವುದು ಅದ್ಭುತವಾಗಿದೆ. ಫಲಿತಾಂಶ ನಮ್ಮ ಪರವಾಗಿರಲಿಲ್ಲ. ಆದರೆ ಇದು ಉತ್ತಮ ವಾರವಾಗಿತ್ತು,” ಎಂದು ಪ್ಯಾಟ್ ಕಮ್ಮಿನ್ಸ್ ಹೇಳಿದರು.

ಮಾರ್ಕ್ರಮ್ ಶತಕದ ವೈಭವ

ನಾಲ್ಕು ದಿನಗಳ ಪಂದ್ಯವನ್ನು 213/2 ಸ್ಕೋರ್‌ನೊಂದಿಗೆ ಆರಂಭಿಸಿದ ದಕ್ಷಿಣ ಆಫ್ರಿಕಾ, 85 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 283 ರನ್ ಗಳಿಸುವ ಮೂಲಕ ಜಯ ಸಾಧಿಸಿತು. ಮಾರ್ಕ್ರಮ್ (207 ಎಸೆತಗಳಲ್ಲಿ 14 ಬೌಂಡರಿಗಳೊಂದಿಗೆ 136) ಶತಕದೊಂದಿಗೆ ಸಫಾರಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಟೆಂಬಾ ಬವುಮಾ (134 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ 66) ಮತ್ತು ಡೇವಿಡ್ ಬೆಡಿಂಗ್ಹ್ಯಾಮ್ (49 ಎಸೆತಗಳಲ್ಲಿ 4 ಬೌಂಡರಿಗಳೊಂದಿಗೆ 21 ನಾಟ್ ಔಟ್) ಅವರಿಗೆ ಬೆಂಬಲ ನೀಡಿದರು. ಆಸ್ಟ್ರೇಲಿಯಾದ ಬೌಲರ್‌ಗಳಲ್ಲಿ ಮಿಚೆಲ್ ಸ್ಟಾರ್ಕ್ ಮೂರು ವಿಕೆಟ್ ಪಡೆದರು. ಪ್ಯಾಟ್ ಕಮ್ಮಿನ್ಸ್ ಮತ್ತು ಜೋಶ್ ಹ್ಯಾಜಲ್‌ವುಡ್ ತಲಾ ಒಂದು ವಿಕೆಟ್ ಪಡೆದರು.