Last Updated:
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಡಬ್ಲ್ಯೂಟಿಸಿ 2023 ರ ಫೈನಲ್ ಪಂದ್ಯದಲ್ಲಿ, ಟ್ರಾವಿಸ್ ಹೆಡ್ ಮತ್ತು ಸ್ಟೀವ್ ಸ್ಮಿತ್ ಶತಕಗಳನ್ನು ಸಿಡಿಸಿದ್ದರು. ಇದೀಗ ಆಸ್ಟ್ರೇಲಿಯಾ ವಿರುದ್ಧ ಮೂರು ಅಂಕಿಗಳನ್ನು ತಲುಪಿದ ಐಡೆನ್ ಮಾರ್ಕ್ರಮ್, ಡಬ್ಲ್ಯೂಟಿಸಿ ಫೈನಲ್ನಲ್ಲಿ ಶತಕ ಗಳಿಸಿದ ಮೂರನೇ ಆಟಗಾರರಾದರು.
ಆಸ್ಟ್ರೇಲಿಯಾ (Australia vs South Africa) ವಿರುದ್ಧ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ (World test Championship) ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಐಡೆನ್ ಮಾರ್ಕ್ರಮ್ ಭರ್ಜರಿ ಶತಕ ಬಾರಿಸಿ ಗೆಲುವಿನ ರೂವಾರಿಯಾದರು. 282 ರನ್ಗಳ ಗುರಿಯನ್ನ ಬೆನ್ನಟ್ಟುವ ವೇಳೆ ಒತ್ತಡದಲ್ಲಿ ಬ್ಯಾಟಿಂಗ್ ಮಾಡಲು ಬಂದ ಮಾರ್ಕ್ರಮ್ ಶತಕದೊಂದಿಗೆ ತಂಡವನ್ನು ಗೆಲುವಿನ ಹತ್ತಿರಕ್ಕೆ ಕೊಂಡೊಯ್ದರು. ಈ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಶೂನ್ಯಕ್ಕೆ ಔಟಾದ ಐಡೆನ್ ಮಾರ್ಕ್ರಮ್ ಎರಡನೇ ಇನ್ನಿಂಗ್ಸ್ನಲ್ಲಿ ಅದ್ಭುತ ಪ್ರದರ್ಶನ ನೀಡಿದರು. 159 ಎಸೆತಗಳಲ್ಲಿ ಅಜೇಯ 102 ರನ್ ಗಳಿಸುವ ಮೂಲಕ ಅವರು ಅನೇಕ ದಾಖಲೆಗಳನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡರು. ಈ ಮೂಲಕ ವೃತ್ತಿಜೀವನದಲ್ಲಿ ಆಡಿದ ಶ್ರೇಷ್ಠ ಇನ್ನಿಂಗ್ಸ್ ಆಗಿದೆ.
WTC ಫೈನಲ್ನಲ್ಲಿ ಶತಕ ಬಾರಿಸಿದ ಮೂರನೇ ಬ್ಯಾಟ್ಸ್ಮನ್
ಪ್ರಸ್ತುತ ಡಬ್ಲ್ಯೂಟಿಸಿ ಫೈನಲ್ ಮೂರನೇ ಪಂದ್ಯವಾಗಿದೆ. ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿದ್ದು ಇದೇ ಮೊದಲು. ಕಡಿಮೆ ಸ್ಕೋರ್ ಪಂದ್ಯದಲ್ಲಿ ಒಂದೇ ಒಂದು ಶತಕವೂ ದಾಖಲಾಗಿರಲಿಲ್ಲ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಡಬ್ಲ್ಯೂಟಿಸಿ 2023 ರ ಫೈನಲ್ ಪಂದ್ಯದಲ್ಲಿ, ಟ್ರಾವಿಸ್ ಹೆಡ್ ಮತ್ತು ಸ್ಟೀವ್ ಸ್ಮಿತ್ ಶತಕಗಳನ್ನು ಸಿಡಿಸಿದ್ದರು. ಇದೀಗ ಆಸ್ಟ್ರೇಲಿಯಾ ವಿರುದ್ಧ ಮೂರು ಅಂಕಿಗಳನ್ನು ತಲುಪಿದ ಐಡೆನ್ ಮಾರ್ಕ್ರಮ್, ಡಬ್ಲ್ಯೂಟಿಸಿ ಫೈನಲ್ನಲ್ಲಿ ಶತಕ ಗಳಿಸಿದ ಮೂರನೇ ಆಟಗಾರರಾದರು. ಆದರೆ ಸ್ಮಿತ್ ಮತ್ತು ಹೆಡ್ ಮೊದಲ ಇನ್ನಿಂಗ್ಸ್ನಲ್ಲಿ ಶತಕಗಳನ್ನು ಗಳಿಸಿದರೆ, ಐಡೆನ್ ಮಾರ್ಕ್ರಮ್ ನಾಲ್ಕನೇ ಇನ್ನಿಂಗ್ಸ್ನಲ್ಲಿ ಈ ಸಾಧನೆ ಮಾಡಿದರು. ಈ ಮೂಲಕ ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಚೇಸಿಂಗ್ ವೇಳೆ ಶತಕ ಸಿಡಿಸಿದ ಮೊದಲಿಗ ಎನಿಸಿಕೊಂಡರು.
6ನೇ ವಿದೇಶಿ ಆಟಗಾರ
ಮೊದಲ ಇನ್ನಿಂಗ್ಸ್ನಲ್ಲಿ ಶೂನ್ಯಕ್ಕೆ ಔಟಾಗಿದ್ದ ಪ್ರೋಟಿಯಸ್ ಆಟಗಾರ, ತಮ್ಮ ಎರಡನೇ ಇನ್ನಿಂಗ್ಸ್ನಲ್ಲಿ ಶತಕ ಗಳಿಸುವ ಮೂಲಕ ಮತ್ತೊಂದು ದಾಖಲೆಯನ್ನು ಸಾಧಿಸಿದರು. ಲಾರ್ಡ್ಸ್ನಲ್ಲಿ ನಾಲ್ಕನೇ ಇನ್ನಿಂಗ್ಸ್ನಲ್ಲಿ ಶತಕ ಗಳಿಸಿದ ಆರನೇ ವಿದೇಶಿ ಆಟಗಾರರಾದರು. ಒಟ್ಟಾರೆಯಾಗಿ ಹಾಗೆ ಮಾಡಿದ 9 ನೇ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ವಿಕೆಟ್ ಪಡೆದು, ಶತಕ
ಇಂಗ್ಲಿಷ್ ನೆಲದಲ್ಲಿ ಟೆಸ್ಟ್ನಲ್ಲಿ ಕನಿಷ್ಠ ಒಂದು ವಿಕೆಟ್ ಪಡೆದು ಶತಕ ಗಳಿಸಿದ ದಕ್ಷಿಣ ಆಫ್ರಿಕಾದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆಗೆ ಐಡೆನ್ ಮಾರ್ಕ್ರಾಮ್ ಪಾತ್ರರಾದರು. ಈ ಪಟ್ಟಿಯಲ್ಲಿ ಮೊದಲು ಬ್ರೂಸ್ ಮಿಚೆಲ್ (1935), ಗ್ರೇಮ್ ಪೊಲಾಕ್ (1965) ಮತ್ತು ಜಾಕ್ವೆಸ್ ಕಾಲಿಸ್ (1998, 2012) ಈ ಸಾಧನೆ ಮಾಡಿದ್ದರು.
June 14, 2025 10:56 PM IST