Last Updated:
ಕರಾವಳಿ ಉತ್ಸವದ ಅಂಗವಾಗಿ ಜಿಲ್ಲಾಡಳಿತದಿಂದ ಇದೇ ಪ್ರಥಮ ಬಾರಿಗೆ ಮಂಗಳೂರಿನಲ್ಲಿ ರೋಬೋಟಿಕ್ ಬಟರ್ ಫ್ಲೈ ಶೋ ಆಯೋಜನೆಗೊಂಡಿದೆ. ಡಿಸೆಂಬರ್ 22ರಿಂದ ಜನವರಿ 19ರವರೆಗೆ 1 ತಿಂಗಳವರೆಗೆ ಸಂಜೆ 4ರಿಂದ ರಾತ್ರಿ 9ರವರೆಗೆ ಪ್ರದರ್ಶನವಿರಲಿದೆ.
ಮಂಗಳೂರು: ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ(Mangaluru) ‘ರೋಬೋಟಿಕ್ ಬಟರ್ ಫ್ಲೈ ಶೋ'(Robotic Butterfly Show) ನಡೆಯುತ್ತಿದೆ. ಕರಾವಳಿ ಉತ್ಸವಕ್ಕೆ ಜಿಲ್ಲಾಡಳಿತದಿಂದ ಆಯೋಜನೆ ಮಾಡಿದ್ದು,ಇದೇ ಮೊದಲ ಬಾರಿಗೆ ರೋಬೊಟಿಕ್ ಬಟರ್ ಫ್ಲೈ ಶೋ ನಡೆಯುತ್ತಿದೆ. ಚಿಟ್ಟೆ, ಮಿಡತೆ, ಜೀರುಂಡೆ, ಜೇನುಹುಳು, ಏರೋಪ್ಲೇನ್ ಚಿಟ್ಟೆ, ಚೇಳು, ಹಾರುವ ಇರುವೆ ಹೀಗೆ ವಿಭಿನ್ನ ಕೀಟಗಳು ಮಂಗಳೂರಿನ ಕದ್ರಿ ಪಾರ್ಕ್ನಲ್ಲಿ(Kadri Park) ಬೀಡು ಬಿಟ್ಟಿವೆ. ಬೃಹದಾಕಾರದ ರೂಪದಲ್ಲಿರುವ ಈ ಕೀಟಗಳನ್ನು(Insects) ನೋಡಿದವರೆಲ್ಲಾ ಬೆರಗಾದರು. ಅಷ್ಟಕ್ಕೂ ಇವೆಲ್ಲಾ ಜೀವಂತ ಚಿಟ್ಟೆಗಳಲ್ಲ. ರೋಬೊಟಿಕ್ ಮಾದರಿಯವು.
ಕರಾವಳಿ ಉತ್ಸವದ ಅಂಗವಾಗಿ ಜಿಲ್ಲಾಡಳಿತದಿಂದ ಇದೇ ಪ್ರಥಮ ಬಾರಿಗೆ ಮಂಗಳೂರಿನಲ್ಲಿ ರೋಬೋಟಿಕ್ ಬಟರ್ ಫ್ಲೈ ಶೋ ಆಯೋಜನೆಗೊಂಡಿದೆ. ಡಿಸೆಂಬರ್ 22ರಿಂದ ಜನವರಿ 19ರವರೆಗೆ 1 ತಿಂಗಳವರೆಗೆ ಸಂಜೆ 4ರಿಂದ ರಾತ್ರಿ 9ರವರೆಗೆ ಪ್ರದರ್ಶನವಿರಲಿದೆ.
ಇದನ್ನೂ ಓದಿ: 2025 Yearly Horoscope: ಹೊಸ ವರ್ಷಕ್ಕೆ ಕ್ಷಣಗಣನೆ- ಇಲ್ಲಿದೆ 2025ರ ಭವಿಷ್ಯ!
ಸಾಧಾರಣವಾಗಿ ನೋಡಲು ಸಿಗದ ವೈವಿಧ್ಯಮಯ ಕೀಟಗಳನ್ನು ರೋಬೊಟಿಕ್ ಮಾದರಿಯಲ್ಲಿ ಕಂಡು ನಗರವಾಸಿಗಳು ಸಂಭ್ರಮಪಟ್ಟರು. ಮಕ್ಕಳೊಂದಿಗೆ ಹಿರಿಯರೂ ರೋಬೋಟಿಕ್ ಬಟರ್ ಫ್ಲೈ ಶೋ ವೀಕ್ಷಿಸಿ, ಮೊಬೈಲ್ನಲ್ಲಿ ವೀಡಿಯೋ ಸೆರೆಹಿಡಿದು ಸಂತೋಷ ಪಡುತ್ತಿದ್ದಾರೆ. ಜೊತೆಗೆ ಸೆಲ್ಫಿ ಸ್ಪಾಟ್ಗಳನ್ನು ಅಳವಡಿಸಲಾಗಿದ್ದು, ಎಲ್ಲರೂ ಸೆಲ್ಫಿ ತೆಗೆದು ಸಂಭ್ರಮಿಸುತ್ತಿರುವುದು ಕಂಡು ಬರುತ್ತಿದೆ.
ಇನ್ನೂ ನೀವು ರೋಬೊಟಿಕ್ ಬಟರ್ ಫ್ಲೈ ಶೋ ನೋಡಿಲ್ಲವೇ, ಇನ್ನೇಕೆ ತಡ ಇಂದೇ ಕದ್ರಿ ಪಾರ್ಕ್ಗೆ ಭೇಟಿ ನೀಡಿ.
Dakshina Kannada,Karnataka
December 28, 2024 12:43 PM IST