Dakshina Kannada: ಎಳೆ ವಯಸ್ಸಿನಲ್ಲೇ ದೈವಗ‌ಳ‌ ಸೇವೆಗೆ ಇಳಿದ ಯುವಕ! | Dakshina Kannada Youth reserves his life for doing Daiva Seva

Dakshina Kannada: ಎಳೆ ವಯಸ್ಸಿನಲ್ಲೇ ದೈವಗ‌ಳ‌ ಸೇವೆಗೆ ಇಳಿದ ಯುವಕ! | Dakshina Kannada Youth reserves his life for doing Daiva Seva

Last Updated:

ಚಿತ್ತರಂಜನ್ ಕುಟುಂಬಕ್ಕೆ ಸೇರಿದ ಜಾಗದಲ್ಲೇ ಚಾಮುಂಡೇಶ್ವರಿ ದೇವಿ ಸೇರಿದಂತೆ ಪರಿವಾರ ದೈವಗಳನ್ನು ಇಲ್ಲಿ ಆರಾಧಿಸಿಕೊಂಡು ಬರಲಾಗುತ್ತಿದೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಆತ ಇನ್ನೂ 18 ವರ್ಷದ ಯುವಕ. ಈಗಲೇ ದೈವಸ್ಥಾನವೊಂದರ ಉಸ್ತುವಾರಿಯ ಜೊತೆಗೆ ದೈವಗಳ ಸೇವೆ ಮಾಡುವ ಪಾತ್ರಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. 9 ವರ್ಷದ ಹರೆಯದಲ್ಲೇ ದೈವವು ಈತನ ಮೈಮೇಲೆ ಆಹ್ವಾಹನೆಯಾದ ಹಿನ್ನಲೆಯಲ್ಲಿ ವಿದ್ಯಾಭ್ಯಾಸವನ್ನೂ(Education) ಅರ್ಧಕ್ಕೆ ಮೊಟಕುಗೊಳಿಸಿ ದೈವದ ಚಾಕರಿಯನ್ನೇ ಮುಂದುವರೆಸಿದ್ದಾನೆ ಈ ಯುವಕ.

ಹೌದು, ಇವರು ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮೂಡಾಯಿಪಲ್ಕೆ ಆದಿಲಿಂಗೇಶ್ವರ ಕ್ಷೇತ್ರದ ಉಸ್ತುವಾರಿ ಚಿತ್ತರಂಜನ್‌. ತನ್ನ 18ನೇ ವಯಸ್ಸಿನಲ್ಲಿ ಗುಳಿಗ ದೈವದ ಪಾತ್ರಿಯಾಗಿ, ಕ್ಷೇತ್ರದ ಉಸ್ತುವಾರಿಯಾಗಿ ಕಾರ್ಯಾಚರಿಸುತ್ತಿರುವ ಚಿತ್ತರಂಜನ್, ದೈವದ ಪಾತ್ರಿಯಾಗಲು ಕಾರಣವೂ ಇದೆ. ಚಿತ್ತರಂಜನ್‌ಗೆ 9 ವರ್ಷ ಇದ್ದ ಸಂದರ್ಭದಲ್ಲಿ ಹಲವು ಆರೋಗ್ಯ ಸಮಸ್ಯೆಗಳು ಕಾಡಿದ್ದವಂತೆ. ಅಲ್ಲದೇ ಪದೇ ಪದೇ ದೈವ ಮೈಮೇಲೆ ಅಹ್ವಾಹನೆಗೊಳ್ಳುತ್ತಿತ್ತಂತೆ. ಈ ಬಗ್ಗೆ ದೈವಜ್ಞರಲ್ಲಿ ಪ್ರಶ್ನೆ ಕೇಳಿದಾಗ, ಕ್ಷೇತ್ರದಲ್ಲಿ ಆರಾಧಿಸಿಕೊಂಡು ಬರುತ್ತಿರುವ ಈಶ್ವರ ಗುಳಿಗ ಮತ್ತು ನೆತ್ತರು ಗುಳಿಗನಿಗೆ ಕೋಲ ಕೊಡಬೇಕು ಎಂದು ಹೇಳಿದ್ದರಂತೆ. ಈ ಹಿನ್ನಲೆಯಲ್ಲಿ ದೈವಾರಾಧನೆಯ ಸಂಪ್ರದಾಯವನ್ನು ಮೀರಿ ದೈವಗಳನ್ನು ಸ್ವತಃ ಕಟ್ಟುವ ಮೂಲಕ ಇದೀಗ ಈ ಯುವಕ ಸುದ್ದಿಯಲ್ಲಿದ್ದಾನೆ.

ಇದನ್ನೂ ಓದಿ: Leopard Trap: ಬೋನಿಗೆ ಬಿದ್ದ 5 ವರ್ಷದ ಚಿರತೆ- ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಚಿತ್ತರಂಜನ್ ಕುಟುಂಬಕ್ಕೆ ಸೇರಿದ ಜಾಗದಲ್ಲೇ ಚಾಮುಂಡೇಶ್ವರಿ ದೇವಿ ಸೇರಿದಂತೆ ಪರಿವಾರ ದೈವಗಳನ್ನು ಇಲ್ಲಿ ಆರಾಧಿಸಿಕೊಂಡು ಬರಲಾಗುತ್ತಿದೆ. ಚಿತ್ತರಂಜನ್ ಬಾಲ್ಯದಿಂದಲೂ ಹಲವಾರು ಆರೋಗ್ಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ. ಈ ಎಲ್ಲಾ ಸಮಸ್ಯೆಗಳಿಗೆ ಕುಟುಂಬದ ಜಾಗದಲ್ಲಿ ಆರಾಧಿಸಿಕೊಂಡು ಬರುತ್ತಿದ್ದ ದೈವಗಳೇ ಕಾರಣ ಎಂದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ, ವಿದ್ಯಾಭ್ಯಾಸವನ್ನು ಅರ್ಧಕ್ಕೇ ಮೊಟಕುಗೊಳಿಸಿ ಅನಿವಾರ್ಯವಾಗಿ ಚಿತ್ತರಂಜನ್ ದೈವದ ಸೇವೆಗೆ ಬದ್ಧವಾಗಬೇಕಾಯಿತು. ಈ ನಡುವೆ ದೈವ ಕಟ್ಟುವ ವಿಚಾರದಲ್ಲಿ ನಲಿಕೆ ಸಮುದಾಯಕ್ಕೆ ಸೇರಿದ ಜನ ಚಿತ್ತರಂಜನ್ ಮೇಲೆ ಹಲ್ಲೆಗೂ ಮುಂದಾಗಿದ್ದರು. ಆ ಬಳಿಕ ದೈವದ ಕಾರ್ಯವನ್ನು ನಿಲ್ಲಿಸಿದ್ದ ಸಂದರ್ಭದಲ್ಲಿ, ಮತ್ತೆ ದೈವ ಚಿತ್ತರಂಜನ್ ಮೈಮೇಲೆ ಬಂದ ಹಿನ್ನೆಲೆ, ದೀಪಾವಳಿಯ ಪಾಡ್ಯದಂದು ಮತ್ತೆ ದೈವದ ಸೇವೆಯನ್ನು ಆರಂಭಿಸಿದ್ದಾರೆ.

ದೈವದ ಸೇವೆಯ ಜೊತೆಗೆ ಚಿತ್ತರಂಜನ್ ಸಭೆ-ಸಮಾರಂಭಗಳಲ್ಲಿ ಡಿಜೆಯನ್ನೂ ನಿರ್ವಹಿಸುತ್ತಾರೆ. ವಿಶೇಷವೆಂದರೆ ಕ್ಷೇತ್ರದಲ್ಲಿರುವ ಎಲ್ಲಾ ಗುಡಿಗಳ ನಕ್ಷೆಯನ್ನು ಸ್ವತಃ ಚಿತ್ತರಂಜನ್ ಸಿದ್ಧಪಡಿಸಿದ್ದಾರೆ. ವಾಸ್ತು ಪ್ರಕಾರವೂ ಇದ್ದು ಸರಿಯಾಗಿ ಮೂಡಿ ಬಂದಿದೆ.