Last Updated:
ಸುಮಾರು ಒಂದು ಕೆಜಿಗೂ ಹೆಚ್ಚಿನ ಬೆಳ್ಳಿಯನ್ನು ಬಳಸಿ ಈ ಗೆಜ್ಜೆ ತಯಾರಿಸಲಾಗಿದೆ. ಗೆಜ್ಜೆಯಲ್ಲಿ ಕುಸುರಿ ಕೆಲಸವನ್ನೂ ಮಾಡಲಾಗಿದ್ದು, ಒಂದೊಂದು ಕಾಲಿಗೂ ತಲಾ ಅರ್ಧ ಕೆಜಿ ಬೆಳ್ಳಿಯನ್ನು ಬಳಸಲಾಗಿದೆ.
ದಕ್ಷಿಣಕನ್ನಡ: ಹೆಸರಾಂತ ನಾಗಕ್ಷೇತ್ರ ದಕ್ಷಿಣಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದ(Kukke Subramanya) ಆನೆಗೆ ಹೊಸ ಗೆಜ್ಜೆ ಕೊಡಿಸಲಾಗಿದೆ. ಭಕ್ತರೊಬ್ಬರು ಈ ಕೊಡುಗೆ ನೀಡಿದ್ದು, ಗೆಜ್ಜೆ ಧರಿಸಿ ಯಶಸ್ವಿ ಫುಲ್ ಖುಷ್ ಆಗಿದೆ. ಸುಬ್ರಹ್ಮಣ್ಯದ ಆನೆ ಯಶಸ್ವಿ(Elephant Yashaswi) ಕ್ಷೇತ್ರದ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಕ್ಷೇತ್ರಕ್ಕೆ ಬರುವ ಪ್ರತಿಯೊಬ್ಬ ಭಕ್ತನೂ ಯಶಸ್ವಿಯನ್ನು ನೋಡದೆ, ಆಕೆಯ ಸೊಂಡಿಲಿನಿಂದ ಆಶೀರ್ವಾದ ಪಡೆಯದ ಕ್ಷೇತ್ರದಿಂದ ಹಿಂದಿರುಗಿರೋದು ಕಡಿಮೆ. ಕ್ಷೇತ್ರದ ಪ್ರತಿಯೊಂದು ಧಾರ್ಮಿಕ ಆಚರಣೆಯಲ್ಲಿ ಯಶಸ್ವಿಯ ಹಾಜರು ಇದ್ದೇ ಇರುತ್ತದೆ. ಅದರಲ್ಲೂ ಕ್ಷೇತ್ರದಲ್ಲಿ ನಡೆಯುವ ವಾರ್ಷಿಕ ಜಾತ್ರೋತ್ಸವ ಮತ್ತು ಚಂಪಾಷಷ್ಠಿಯ ಹತ್ತು ದಿನಗಳೂ ಯಶಸ್ವಿ ದೇವರ ಜೊತೆಗೇ ಇರುತ್ತೆ. ದೇವರ ಬಲಿಪೂಜೆ, ರಥೋತ್ಸವ, ಅವಭೃತ ಸ್ನಾನ ಹೀಗೆ ಎಲ್ಲಾ ಧಾರ್ಮಿಕ ವಿಧಿ-ವಿಧಾನದಲ್ಲೂ ಯಶಸ್ವಿ ಆನೆ ಪಾಲ್ಗೊಳ್ಳುತ್ತದೆ.
ಇಷ್ಟೊಂದು ಪ್ರಮುಖವಾಗಿರುವ ಆನೆಗೆ ಹಲವು ಭಕ್ತರು ಒಂದಲ್ಲ ಒಂದು ಉಡುಗೊರೆಯನ್ನು ಕೊಟ್ಟು ಹೋಗುತ್ತಾರೆ. ಜಾತ್ರೋತ್ಸವದ ಸಂದರ್ಭದಲ್ಲಿ ಯಶಸ್ವಿ ತನ್ನ ಹಣೆ ಮೇಲೆ ಹಾಕುವ ಹಣೆಪಟ್ಟಿ ಸೇರಿದಂತೆ ಹಲವು ಉಡುಗೊರೆಗಳು ಈ ಆನೆ ಬಳಿ ಇವೆ. ಈ ನಡುವೆ ಭಕ್ತರೊಬ್ಬರು ಯಶಸ್ವಿಗೆ ಬೆಳ್ಳಿಯ ಗೆಜ್ಜೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಇದನ್ನೂ ಓದಿ: Mysuru: ಮೈಸೂರು- ಬೆಂಗಳೂರು ನಡುವಿನ ಎಕ್ಸ್ಪ್ರೆಸ್ ಬಸ್ಗಳಿಗೂ ಡಿಜಿಟಲ್ ಸೇವೆ ವಿಸ್ತರಣೆ
ಬೆಳಗಾವಿ ಮೂಲದ ಅಂಬರೀಶ್ ಮತ್ತು ಸ್ನೇಹಿತರು ಈ ಗೆಜ್ಜೆಯನ್ನು ಯಶಸ್ವಿಗೆ ಕೊಡುಗೆಯಾಗಿ ಕೊಟ್ಟಿದ್ದಾರೆ. ಸುಮಾರು ಒಂದು ಕೆಜಿಗೂ ಹೆಚ್ಚಿನ ಬೆಳ್ಳಿಯನ್ನು ಬಳಸಿ ಈ ಗೆಜ್ಜೆ ತಯಾರಿಸಲಾಗಿದೆ. ಗೆಜ್ಜೆಯಲ್ಲಿ ಕುಸುರಿ ಕೆಲಸವನ್ನೂ ಮಾಡಲಾಗಿದ್ದು, ಒಂದೊಂದು ಕಾಲಿಗೂ ತಲಾ ಅರ್ಧ ಕೆಜಿ ಬೆಳ್ಳಿಯನ್ನು ಬಳಸಲಾಗಿದೆ.
ಎರಡೂ ಕಾಲಿಗೆ ಈ ಗೆಜ್ಜೆಯನ್ನು ಹಾಕಲಾಗಿದೆ. ಕಾಲನ್ನು ಯಶಸ್ವಿ ಭಕ್ತರ ಮುಂದೆ ಎತ್ತಿ ತೋರಿಸೋದು ಇದೀಗ ಸಾಮಾನ್ಯವಾಗಿದೆ. ಕಾಲನ್ನು ಅಲುಗಾಡಿಸುತ್ತಾ, ಎತ್ತಿ ತೋರಿಸುವ ಯಶಸ್ವಿಯ ಗೆಜ್ಜೆ ನೋಡಿ ಭಕ್ತರೂ ಫುಲ್ ಖುಷಿ ಪಡುತ್ತಿದ್ದಾರೆ.
Dakshina Kannada,Karnataka
December 11, 2024 12:27 PM IST