Last Updated:
ಕರಾವಳಿಯ ಯುವಕರೇ ಸೇರಿ ನಿರ್ಮಿಸಿರುವ ಈ ಚಿತ್ರದ ಚಿತ್ರೀಕರಣವನ್ನು ಕಳೆದ ಮಾರ್ಚ್ ತಿಂಗಳಿನಲ್ಲಿ ಆರಂಭಿಸಲಾಗಿತ್ತು. ಚಿತ್ರೀಕರಣ ಆರಂಭಿಸಿದ 10 ತಿಂಗಳಲ್ಲೇ ಚಿತ್ರದ ಎಡಿಟಿಂಗ್, ಡಬ್ಬಿಂಗ್ ಎಲ್ಲಾ ಮುಗಿಸಿ ತೆರೆಗೆ ಸಿದ್ಧಗೊಂಡಿದೆ.
ದಕ್ಷಿಣಕನ್ನಡ: ತುಳುಚಿತ್ರರಂಗಕ್ಕೆ(Tulu Cinema Industry) ಮತ್ತೊಂದು ಚಿತ್ರ ಸೇರ್ಪಡೆಯಾಗಿದೆ. ʼದಸ್ಕತ್ʼ(Daskat Movie) ಎನ್ನುವ ಹೆಸರಿನ ತುಳುಚಿತ್ರ ಡಿಸೆಂಬರ್ 13 ರಂದು ತೆರೆ ಕಾಣಲಿದೆ. ಕಾಮಿಡಿ ಕಿಲಾಡಿಗಳು ಶೋನ ಕಲಾವಿದ ಅನೀಶ್ ಕುಮಾರ್ ವೇಣೂರು ನಿರ್ದೇಶನದಲ್ಲಿ ಈ ಚಿತ್ರ ನಿರ್ಮಾಣಗೊಂಡಿದೆ. ಈ ಸಿನಿಮಾದಲ್ಲಿ ಕನ್ನಡ ಚಲನಚಿತ್ರ ನಟ ಮೋಹನ್ ಶೇಣಿ, ಸಿರಿಯಲ್ ನಟಿ ಭವ್ಯ ಪೂಜಾರಿ, ಹಾಸ್ಯ ನಟ ದೀಪಕ್ ರೈ ಪಾಣಾಜೆ ಸೇರಿದಂತೆ ಹಲವು ಹಿರಿಯ ಮತ್ತು ಹೊಸ ಮುಖಗಳು ಈ ಚಿತ್ರದಲ್ಲಿ ನಟಿಸಿದ್ದಾರೆ. ದಸ್ಕತ್ ಸಿನಿಮಾವು ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ(Release).
ಮಾಜಿ ಸಚಿವ ಕೃಷ್ಣ ಪಾಲೇಮಾರ್ ಅರ್ಪಿಸುವ ಈ ತುಳುಚಿತ್ರವನ್ನು ರಾಘವೇಂದ್ರ ಕುಡ್ವ ಈ ಚಿತ್ರವನ್ನು ನಿರ್ಮಿಸಿದ್ದಾರೆ. ತುಳುನಾಡಿನ ಬದುಕು, ಸಂಸ್ಕೃತಿ, ಸಂಘರ್ಷವನ್ನೇ ಕಥಾನಕವನ್ನಾಗಿ ಹೊಂದಿರುವ ಈ ಚಿತ್ರದಲ್ಲಿ ತುಳುನಾಡಿನ ದೈವವ ನಂಬಿಕೆಯನ್ನೂ ಬಿಂಬಿಸಲಾಗಿದೆ.
ಇದನ್ನೂ ಓದಿ: Dakshina Kannada: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಂಭ್ರಮದ ಸ್ವಾಮಿಯ ಅವಭೃತ ಸ್ನಾನ!
ಕರಾವಳಿಯ ಯುವಕರೇ ಸೇರಿ ನಿರ್ಮಿಸಿರುವ ಈ ಚಿತ್ರದ ಚಿತ್ರೀಕರಣವನ್ನು ಕಳೆದ ಮಾರ್ಚ್ ತಿಂಗಳಿನಲ್ಲಿ ಆರಂಭಿಸಲಾಗಿತ್ತು. ಚಿತ್ರೀಕರಣ ಆರಂಭಿಸಿದ 10 ತಿಂಗಳಲ್ಲೇ ಚಿತ್ರದ ಎಡಿಟಿಂಗ್, ಡಬ್ಬಿಂಗ್ ಎಲ್ಲಾ ಮುಗಿಸಿ ತೆರೆಗೆ ಸಿದ್ಧಗೊಂಡಿದೆ.
ಹೊಸ ಮುಖಗಳನ್ನೇ ಹೆಚ್ಚಾಗಿ ಪರಿಚಯಿಸಲಾಗಿದೆ. ನಾಟಕೀಯ ಅಭಿನಯಕ್ಕೆ ಗುಡ್ ಬೈ ಹೇಳಿ, ಕೇವಲ ನ್ಯಾಚುರಲ್ ನಟನೆಗೆ ಮಾತ್ರ ಈ ಚಿತ್ರದಲ್ಲಿ ಪ್ರಾಮುಖ್ಯತೆ ನೀಡಲಾಗಿದೆ. ಚಿತ್ರದ ಛಾಯಾಗ್ರಹಣವನ್ನು ಸಂತೋಷ್ ಆಚಾರ್ಯ ಗುಂಪಲಾಜೆ ಮಾಡಿದ್ದಾರೆ.
Dakshina Kannada,Karnataka
December 10, 2024 5:46 PM IST