WBBL Draft: 15 ಭಾರತೀಯರಿದ್ದ ಬಿಬಿಎಲ್ ಡ್ರಾಫ್ಟ್​​ನಲ್ಲಿ ಆಯ್ಕೆಯಾಗಿದ್ದು ಮಾತ್ರ ಏಕೈಕ ಪ್ಲೇಯರ್!

WBBL Draft: 15 ಭಾರತೀಯರಿದ್ದ ಬಿಬಿಎಲ್ ಡ್ರಾಫ್ಟ್​​ನಲ್ಲಿ ಆಯ್ಕೆಯಾಗಿದ್ದು ಮಾತ್ರ ಏಕೈಕ ಪ್ಲೇಯರ್!

ಬ್ರಿಸ್ಬೇನ್ ಹೀಟ್‌ ತಂಡಕ್ಕೆ ಜೆಮಿಮಾ

ಭಾರತೀಯ ಮಧ್ಯಮ ಕ್ರಮಾಂಕದ ಬ್ಯಾಟರ್ ಜೆಮಿಮಾ ರೊಡ್ರಿಗ್ಸ್‌ರನ್ನು ಬ್ರಿಸ್ಬೇನ್ ಹೀಟ್ ತಂಡವು ರಿಟೆನ್ಶನ್ ಹಕ್ಕನ್ನು ಬಳಸಿಕೊಂಡು ತಂಡಕ್ಕೆ ಸೇರಿಸಿಕೊಂಡಿದೆ. ಜೆಮಿಮಾ ಜೊತೆಗೆ ವೆಸ್ಟ್ ಇಂಡೀಸ್‌ನ ಚಿನೆಲ್ಲಿ ಹೆನ್ರಿ (ಸಿಲ್ವರ್ ಬ್ಯಾಂಡ್) ಮತ್ತು ದಕ್ಷಿಣ ಆಫ್ರಿಕಾದ ನಡಿನ್ ಡಿ ಕ್ಲರ್ಕ್ (ಬ್ರಾಂಜ್ ಬ್ಯಾಂಡ್) ಅವರನ್ನು ಸಹ ಬ್ರಿಸ್ಬೇನ್ ಆಯ್ಕೆ ಮಾಡಿದೆ. “ಜೆಮಿಮಾ ಅಭಿಮಾನಿಗಳನ್ನು ಮೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ತಂಡಕ್ಕೆ ಅವರ ಉತ್ಸಾಹ ಮತ್ತು ಕೌಶಲ್ಯವು ಶಕ್ತಿ ತುಂಬಲಿದೆ” ಎಂದು ಬ್ರಿಸ್ಬೇನ್ ಹೀಟ್‌ನ ಮ್ಯಾನೇಜ್​ಮೆಂಟ್ ತಿಳಿಸಿದೆ.

ಈ ಋತುವು ಜೆಮಿಮಾ ಅವರ ನಾಲ್ಕನೇ WBBL ಸೀಸನ್ ಆಗಲಿದೆ. ಈ ಹಿಂದೆ, ಅವರು 2021–22ರಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್, 2022–23ರಲ್ಲಿ ಮೆಲ್ಬೋರ್ನ್ ಸ್ಟಾರ್ಸ್, ಮತ್ತು 2024–25ರಲ್ಲಿ ಬ್ರಿಸ್ಬೇನ್ ಹೀಟ್ ಪರ ಆಡಿದ್ದರು. ಒಟ್ಟಾರೆಯಾಗಿ, WBBLನಲ್ಲಿ 30 ಪಂದ್ಯಗಳನ್ನು ಆಡಿರುವ ಜೆಮಿಮಾ 644 ರನ್‌ಗಳನ್ನು ಗಳಿಸಿದ್ದಾರೆ, ಇದರಲ್ಲಿ ಮೂರು ಅರ್ಧಶತಕಗಳು ಸೇರಿವೆ.

WBBL 2025 ಡ್ರಾಫ್ಟ್‌ನಲ್ಲಿ ಆಯ್ಕೆಯಾದ ಆಟಗಾರ್ತಿಯರ ಪಟ್ಟಿ

ಡ್ರಾಫ್ಟ್‌ನಲ್ಲಿ ಒಟ್ಟು 12 ಇಂಗ್ಲೆಂಡ್ ಆಟಗಾರ್ತಿಯರು, 5 ದಕ್ಷಿಣ ಆಫ್ರಿಕಾದವರು, ತಲಾ 2 ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ಆಟಗಾರ್ತಿಯರು, ಹಾಗೂ ಒಬ್ಬ ಶ್ರೀಲಂಕಾದ ಆಟಗಾರ್ತಿ ಆಯ್ಕೆಯಾಗಿದ್ದಾರೆ. ಪ್ರತಿ ತಂಡದ ಆಯ್ಕೆಯ ವಿವರ ಈ ಕೆಳಗಿನಂತಿದೆ:

ಬ್ರಿಸ್ಬೇನ್ ಹೀಟ್:

ಜೆಮಿಮಾ ರೊಡ್ರಿಗ್ಸ್ (ಭಾರತ, ಪ್ಲಾಟಿನಂ)

ಚಿನೆಲ್ಲಿ ಹೆನ್ರಿ (ವೆಸ್ಟ್ ಇಂಡೀಸ್, ಸಿಲ್ವರ್)

ನಡಿನ್ ಡಿ ಕ್ಲರ್ಕ್ (ದಕ್ಷಿಣ ಆಫ್ರಿಕಾ, ಬ್ರಾಂಜ್)

ಸಿಡ್ನಿ ಥಂಡರ್:

ಹೀದರ್ ನೈಟ್ (ಇಂಗ್ಲೆಂಡ್, ಪ್ಲಾಟಿನಂ)

ಚಮರಿ ಅಟಪಟ್ಟು (ಶ್ರೀಲಂಕಾ, ಪ್ಲಾಟಿನಂ)

ಶಬ್ನಮ್ ಇಸ್ಮಾಯಿಲ್ (ದಕ್ಷಿಣ ಆಫ್ರಿಕಾ, ಗೋಲ್ಡ್)

ಸಿಡ್ನಿ ಸಿಕ್ಸರ್ಸ್:

ಸೋಫಿಯಾ ಡಂಕ್ಲಿ (ಇಂಗ್ಲೆಂಡ್, ಪ್ಲಾಟಿನಂ)

ಅಮೆಲಿಯಾ ಕೆರ್ (ನ್ಯೂಜಿಲೆಂಡ್, ಪ್ಲಾಟಿನಂ)

ಮ್ಯಾಡಿ ವಿಲಿಯರ್ಸ್ (ಇಂಗ್ಲೆಂಡ್, ಬ್ರಾಂಜ್)

ಅಡಿಲೇಡ್ ಸ್ಟ್ರೈಕರ್ಸ್:

ಸೋಫಿ ಎಕ್ಲೆಸ್ಟೋನ್ (ಇಂಗ್ಲೆಂಡ್, ಪ್ಲಾಟಿನಂ)

ಲಾರಾ ವಾಲ್ವಾರ್ಡ್‌ಟ್ (ದಕ್ಷಿಣ ಆಫ್ರಿಕಾ, ಗೋಲ್ಡ್)

ಟಾಮಿ ಬ್ಯೂಮಾಂಟ್ (ಇಂಗ್ಲೆಂಡ್, ಬ್ರಾಂಜ್)

ಮೆಲ್ಬೋರ್ನ್ ಸ್ಟಾರ್ಸ್:

ಆಮಿ ಜೋನ್ಸ್ (ಇಂಗ್ಲೆಂಡ್, ಪ್ಲಾಟಿನಂ)

ಮರಿಜಾನ್ನೆ ಕಪ್ (ದಕ್ಷಿಣ ಆಫ್ರಿಕಾ, ಪ್ಲಾಟಿನಂ)

ಡ್ಯಾನಿ ಗಿಬ್ಸನ್ (ಇಂಗ್ಲೆಂಡ್, ಗೋಲ್ಡ್)

ಪರ್ತ್ ಸ್ಕಾರ್ಚರ್ಸ್:

ಸೋಫಿ ಡಿವೈನ್ (ನ್ಯೂಜಿಲೆಂಡ್, ಪ್ಲಾಟಿನಂ)

ಪೇಜ್ ಸ್ಕೋಲ್‌ಫೀಲ್ಡ್ (ಇಂಗ್ಲೆಂಡ್, ಗೋಲ್ಡ್)

ಕ್ಲೋಯ್ ಟ್ರಯಾನ್ (ದಕ್ಷಿಣ ಆಫ್ರಿಕಾ, ಸಿಲ್ವರ್)

ಹೋಬಾರ್ಟ್ ಹರಿಕೇನ್ಸ್:

ಡೇನಿಯಲ್ ವ್ಯಾಟ್-ಹಾಡ್ಜ್ (ಇಂಗ್ಲೆಂಡ್, ಪ್ಲಾಟಿನಂ)

ನಟಾಲೀ ಸಿವರ್-ಬ್ರಂಟ್ (ಇಂಗ್ಲೆಂಡ್, ಪ್ಲಾಟಿನಂ)

ಲಿನ್‌ಸೆ ಸ್ಮಿತ್ (ಇಂಗ್ಲೆಂಡ್, ಸಿಲ್ವರ್)

ಮೆಲ್ಬೋರ್ನ್ ರೆನೆಗೇಡ್ಸ್:

ಡಿಯಾಂಡ್ರಾ ಡಾಟಿನ್ (ವೆಸ್ಟ್ ಇಂಡೀಸ್, ಪ್ಲಾಟಿನಂ)

ಆಲಿಸ್ ಕ್ಯಾಪ್ಸೆ (ಇಂಗ್ಲೆಂಡ್, ಗೋಲ್ಡ್)