India vs England: ಇಂಗ್ಲೆಂಡ್ ನೆಲದಲ್ಲಿ ದಾಖಲೆ ಬರೆದ ಶುಭ್​ಮನ್ ಗಿಲ್! 57 ವರ್ಷದ ಹಳೆಯ ರೆಕಾರ್ಡ್ ಉಡೀಸ್! | Shubman Gill Youngest Indian Test Captain of 21st Century and also breaks the pataudi World record

India vs England: ಇಂಗ್ಲೆಂಡ್ ನೆಲದಲ್ಲಿ ದಾಖಲೆ ಬರೆದ ಶುಭ್​ಮನ್ ಗಿಲ್! 57 ವರ್ಷದ ಹಳೆಯ ರೆಕಾರ್ಡ್ ಉಡೀಸ್! | Shubman Gill Youngest Indian Test Captain of 21st Century and also breaks the pataudi World record

Last Updated:

ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾದ ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್ ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಹಾಗಿದ್ರೆ ಏನೆಲ್ಲಾ ದಾಖಲೆ ಮಾಡಿದ್ದಾರೆ ಎಂದು ನೋಡೋಣ ಬನ್ನಿ.

News18News18
News18

ಬಹುನಿರೀಕ್ಷಿತ ಇಂಗ್ಲೆಂಡ್ ಹಾಗೂ ಭಾರತ (India vs England) ನಡುವಿನ ಆಂಡರ್ಸನ್ ಹಾಗೂ ಸಚಿನ್ (Anderson-Sachin) ಟೆಸ್ಟ್ ಸರಣಿ ಇಂದು (ಜೂನ್ 20) ರಿಂದ ಲೀಡ್ಸ್‌ನ ಹೆಡಿಂಗ್ಲೆ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಿದ್ದು, ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ದುಕೊಂಡಿದೆ. ಇನ್ನೂ ಈ ಪಂದ್ಯದಲ್ಲಿ ಟೀಂ ಇಂಡಿಯಾದ (Team India) ಟೆಸ್ಟ್ ತಂಡದ ನಾಯಕ ಶುಭಮನ್ ಗಿಲ್ (Shubhman Gill) ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ರೋಹಿತ್ ಶರ್ಮಾ ನಿವೃತ್ತಿ ಬಳಿಕ ಅವರ ಸ್ಥಾನವನ್ನು ವಹಿಸಿಕೊಂಡಿರುವ ಶುಭಮನ್ ಗಿಲ್ ಅವರನ್ನು ನಾಯಕನನ್ನಾಗಿ ನೇಮಿಸಲಾಯಿತು ಮತ್ತು ರಿಷಭ್ ಪಂತ್ ಅವರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ. ಗಿಲ್ ಈ ಹಿಂದೆ ಟಿ-20 ಕ್ರಿಕೆಟ್‌ನಲ್ಲಿ ಭಾರತವನ್ನು ಮುನ್ನಡೆಸಿದ್ದರೂ ತಂಡವನ್ನು ದೀರ್ಘಾವಧಿಯ ಸ್ವರೂಪದಲ್ಲಿ ಮುನ್ನಡೆಸುತ್ತಿರುವುದು ಇದೇ ಮೊದಲು.

ದಾಖಲೆ ಬರೆದ ಶುಭಮನ್ ಗಿಲ್

ಭಾರತದ 93 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ, ಶುಭಮನ್ ಗಿಲ್ ಭಾರತದ 5ನೇ ಅತ್ಯಂತ ಕಿರಿಯ ನಾಯಕ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. ಮನ್ಸೂರ್ ಅಲಿ ಖಾನ್ ಪಟೌಡಿ, ಸಚಿನ್ ತೆಂಡೂಲ್ಕರ್,ಕಪಿಲ್ ದೇವ್ ಮತ್ತು ಕಪಿಲ್ ದೇವ್ ಇದಕ್ಕೂ ಮೊದಲ ಕಿರಿಯ ಆಟಗಾರರಾಗಿದ್ದಾರೆ.

ಭಾರತದ ಅತ್ಯಂತ ಕಿರಿಯ ಟೆಸ್ಟ್ ನಾಯಕರು

ಆಟಗಾರ ವಯಸ್ಸು ಎದುರಾಳಿ ವರ್ಷ ಸ್ಥಳ
ಮನ್ಸೂರ್ ಅಲಿ ಖಾನ್ ಪಟೌಡಿ 21 ವರ್ಷ 77 ದಿನಗಳು ವೆಸ್ಟ್ ಇಂಡೀಸ್ 1962 ಬ್ರಿಡ್ಜ್‌ಟೌನ್
ಸಚಿನ್ ತೆಂಡೂಲ್ಕರ್ 23 ವರ್ಷ 169 ದಿನಗಳು ಆಸ್ಟ್ರೇಲಿಯಾ 1996 ದೆಹಲಿ
ಕಪಿಲ್ ದೇವ್ 24 ವರ್ಷ 48 ದಿನಗಳು ವೆಸ್ಟ್ ಇಂಡೀಸ್ 1983 ಕಿಂಗ್ಸ್ಟನ್
ರವಿ ಶಾಸ್ತ್ರಿ 25 ವರ್ಷ 229 ದಿನಗಳು ವೆಸ್ಟ್ ಇಂಡೀಸ್ 1988 ಚೆನ್ನೈ
ಶುಭಮನ್ ಗಿಲ್ 25 ವರ್ಷ 285 ದಿನಗಳು ಇಂಗ್ಲೆಂಡ್ 2025 ಲೀಡ್ಸ್

ಸದ್ಯ, ಶುಭಮನ್ ಗಿಲ್ ಅವರು ವಿರಾಟ್ ಕೊಹ್ಲಿ ಅವರ ಹೆಸರಿನಲ್ಲಿದ್ದ ಇನ್ನೊಂದು ದಾಖಲೆಯನ್ನು ಕೂಡ ಇದೇ ಸಂದರ್ಭದಲ್ಲಿ ಬ್ರೇಕ್ ಮಾಡಿದ್ದಾರೆ. 21 ನೇ ಶತಮಾನದಲ್ಲಿ (2000 ರಿಂದ) ದೇಶವನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಮುನ್ನಡೆಸಿದ ಅತ್ಯಂತ ಕಿರಿಯ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. ಗಿಲ್ 21ನೇ ಶತಮಾನದಲ್ಲಿ 25 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನಲ್ಲಿ ರೆಡ್-ಬಾಲ್ ಕ್ರಿಕೆಟ್‌ನಲ್ಲಿ ರಾಷ್ಟ್ರೀಯ ತಂಡವನ್ನು ಮುನ್ನಡೆಸಿದ ಮೊದಲ ಆಟಗಾರ ಎನಿಸಿಕೊಂಡರು.

21ನೇ ಶತಮಾನದ ಅತ್ಯಂತ ಕಿರಿಯ ಭಾರತೀಯ ಟೆಸ್ಟ್ ನಾಯಕರು 

ಆಟಗಾರ * ವಯಸ್ಸು ಎದುರಾಳಿ ವರ್ಷ ಸ್ಥಳ
ಶುಭಮನ್ ಗಿಲ್ 25 ವರ್ಷ 285 ದಿನಗಳು ಇಂಗ್ಲೆಂಡ್ 2025 ಲೀಡ್ಸ್
ವಿರಾಟ್ ಕೊಹ್ಲಿ 26 ವರ್ಷ 34 ದಿನಗಳು ಆಸ್ಟರ್ಲಿಯಾ 2014 ಅಡಿಲೇಡ್
ಸಚಿನ್ ತೆಂಡೂಲ್ಕರ್ 26 ವರ್ಷ 253 ದಿನಗಳು ಆಸ್ಟ್ರೇಲಿಯಾ 2000 ವರ್ಷಗಳು ಸಿಡ್ನಿ
ಎಂಎಸ್ ಧೋನಿ 26 ವರ್ಷ 379 ದಿನಗಳು ದಕ್ಷಿಣ ಆಫ್ರಿಕಾ 2008 ಕಾನ್ಪುರ
ವೀರೇಂದ್ರ ಸೆಹ್ವಾಗ್ 27 ವರ್ಷ 59 ದಿನಗಳು ಶ್ರೀಲಂಕಾ 2006 ಅಹಮದಾಬಾದ್ 

ಮಾತ್ರವಲ್ಲ, ಶುಭಮನ್ ಗಿಲ್ ಅವರು, ಪಟೌಡಿ ಅವರ 57 ವರ್ಷಗಳ ಹಳೆಯ ದಾಖಲೆಯನ್ನು ಮುರಿದ್ದಾರೆ. ಇಂಗ್ಲಿಷ್ ನೆಲದಲ್ಲಿ ಟೆಸ್ಟ್ ಪಂದ್ಯವೊಂದರಲ್ಲಿ ತಂಡವನ್ನು ಮುನ್ನಡೆಸಿದ ಅತ್ಯಂತ ಕಿರಿಯ ಭಾರತೀಯ ನಾಯಕ ಎಂಬ ಕೀರ್ತಿಗೆ ಅವರು ಪಾತ್ರರಾದರು. 37ನೇ ಭಾರತ ತಂಡದ ನಾಯಕ 25 ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನಲ್ಲಿ ಇಂಗ್ಲೆಂಡ್‌ನಲ್ಲಿ ರಾಷ್ಟ್ರೀಯ ತಂಡವನ್ನು ಮುನ್ನಡೆಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇಂಗ್ಲೆಂಡ್‌ನಲ್ಲಿ ಭಾರತವನ್ನು ಮುನ್ನಡೆಸಿದ ಅತ್ಯಂತ ಕಿರಿಯ ಟೆಸ್ಟ್ ನಾಯಕರು

ಆಟಗಾರ ವಯಸ್ಸು ಎದುರಾಳಿ ವರ್ಷ ಸ್ಥಳ
ಶುಭಮನ್ ಗಿಲ್ 25 ವರ್ಷ 285 ದಿನಗಳು ಇಂಗ್ಲೆಂಡ್ 2025 ಲೀಡ್ಸ್
ಮನ್ಸೂರ್ ಅಲಿ ಖಾನ್ ಪಟೌಡಿ 26 ವರ್ಷ 154 ದಿನಗಳು ಇಂಗ್ಲೆಂಡ್ 1967 ಲೀಡ್ಸ್
ಕಪಿಲ್ ದೇವ್ 27 ವರ್ಷ 150 ದಿನಗಳು ಇಂಗ್ಲೆಂಡ್ 1986 ಲಾರ್ಡ್ಸ್
ಮೊಹಮ್ಮದ್ ಅಜರುದ್ದೀನ್ 27 ವರ್ಷ 168 ದಿನಗಳು ಇಂಗ್ಲೆಂಡ್ 1990 ಲಾರ್ಡ್ಸ್
ಜಸ್ಪ್ರೀತ್ ಬುಮ್ರಾ 27 ವರ್ಷ 178 ದಿನಗಳು ಇಂಗ್ಲೆಂಡ್ 2022 ಬರ್ಮಿಂಗ್ಹ್ಯಾಮ್

ಒಟ್ಟಾರೆಯಾಗಿ, ಗಿಲ್ ಭಾರತ ತಂಡದ 37ನೇ ಟೆಸ್ಟ್ ನಾಯಕರಾಗಿದ್ದು, ನಾಯಕನಾಗಿ ತಮ್ಮ ಮೊದಲ ಪಂದ್ಯದಲ್ಲೇ ಇತಿಹಾಸ ಸೃಷ್ಠಿಸಿದ್ದಾರೆ. ಸದ್ಯ, 25 ವರ್ಷದ ಅವರು ತಮ್ಮ ಬ್ಯಾಟಿಂಗ್ ಸ್ಥಾನವನ್ನು ಸಹ ಬದಲಾಯಿಸಿಕೊಂಡಿದ್ದಾರೆ ಮತ್ತು ವಿರಾಟ್ ಕೊಹ್ಲಿಯವರು ದೀರ್ಘ ಸ್ವರೂಪಕ್ಕೆ ವಿದಾಯ ಹೇಳಿದ ನಂತರ ಖಾಲಿಯಾಗಿರುವ 4ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ.