Dakshina Kannada: ಮಂಗಳೂರಿನಲ್ಲಿ ಕಲಾಲೋಕ ಸೃಷ್ಟಿಸಿದ ಕಲಾವಿದ- ಹೇಗಿದೆ ಗೊತ್ತಾ ಈ ಮನೆ? | Dakshina Kannada An artist built his house in different way

Dakshina Kannada: ಮಂಗಳೂರಿನಲ್ಲಿ ಕಲಾಲೋಕ ಸೃಷ್ಟಿಸಿದ ಕಲಾವಿದ- ಹೇಗಿದೆ ಗೊತ್ತಾ ಈ ಮನೆ? | Dakshina Kannada An artist built his house in different way

Last Updated:

ಒಂದು ಮನೆಯನ್ನು ಕಟ್ಟಲು ಕಾರ್ಮಿಕರು ತೆಗೆದುಕೊಳ್ಳುವ ಶ್ರಮದ ದ್ಯೋತಕವಾಗಿ, ಎರಡೂ ಕಂಬಗಳಲ್ಲಿ ಕಾರ್ಮಿಕರಿಬ್ಬರು ಮನೆಯ ಭಾರವನ್ನೆಲ್ಲಾ ಹೊತ್ತುಕೊಂಡಂತೆ ಬಿಂಬಿಸಲಾಗಿದೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣಕನ್ನಡ: ಕಲಾವಿದರು(Artists) ಹೆಚ್ಚಾಗಿ ತಮ್ಮ ಕಲೆಯ ಮೇಲಿರುವ ಚಾಣಾಕ್ಷ್ಯತೆಯನ್ನು ಇತರ ವೇದಿಕೆ ಅಥವಾ ಜಾಗದಲ್ಲಿ ತೋರಿಸೋದು ಸಾಮಾನ್ಯ. ಆದರೆ ಇಲ್ಲೊಬ್ಬ ಕಲಾವಿದ ತನ್ನ ಮನೆಯಲ್ಲೇ ಕಲಾ ಲೋಕವನ್ನೇ ಸೃಷ್ಟಿಸಿ ಮಾದರಿಯಾಗಿದ್ದಾರೆ. ಚಿಕ್ಕ ಮನೆಯನ್ನು(Small House) ಯಾವ ರೀತಿ ಆಕರ್ಷಕ ಮತ್ತು ಡಿಫರೆಂಟ್ (Different) ಆಗಿ ಮಾಡಬಹುದು ಎನ್ನುವುದಕ್ಕೆ ಈ ಕಲಾವಿದನ ಮನೆಯೇ ಒಂದು ಉದಾಹರಣೆಯಂತಿದೆ.

ದಕ್ಷಿಣಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಮಡ್ಯಾರು ಎಂಬಲ್ಲಿರುವ ಕಲಾವಿದ ದಿನೇಶ್ ತನ್ನ ಆಕರ್ಷಕ ಮತ್ತು ಡಿಫರೆಂಟ್ ಮನೆಯ ಮೂಲಕ ಗುರುತಿಸಿಕೊಂಡಿದ್ದಾರೆ. ಕೇವಲ 2 ಸೆಂಟ್ಸ್ ಜಾಗದಲ್ಲಿರುವ ಈ ಮನೆಯಲ್ಲಿ ಏನಿದೆ, ಏನಿಲ್ಲ ಎಂದು ಕೇಳುವಂತಿಲ್ಲ. ಈ ಮನೆಯೊಳಗೆ ಇಡೀ ಕಲಾ ಪ್ರಪಂಚವೇ ನಿರ್ಮಾಣಗೊಂಡಿದೆ. ಮನೆಯನ್ನು ಪ್ರವೇಶಿಸುತ್ತಿದ್ದಂತೆ ಮನೆಯ ಮುಂದಿರುವ ಕಂಬಗಳೆರಡರಿಂದಲೇ ದಿನೇಶ್ ಅವರ ಕಲಾ ನೈಪುಣ್ಯತೆಯ ಅನಾವರಣಗೊಳ್ಳುತ್ತದೆ. ಒಂದು ಮನೆಯನ್ನು ಕಟ್ಟಲು ಕಾರ್ಮಿಕರು ತೆಗೆದುಕೊಳ್ಳುವ ಶ್ರಮದ ದ್ಯೋತಕವಾಗಿ, ಎರಡೂ ಕಂಬಗಳಲ್ಲಿ ಕಾರ್ಮಿಕರಿಬ್ಬರು ಮನೆಯ ಭಾರವನ್ನೆಲ್ಲಾ ಹೊತ್ತುಕೊಂಡಂತೆ ಬಿಂಬಿಸಲಾಗಿದೆ. ಮನೆಯೊಳಗೆ ಗುಹೆಯ ಮಾದರಿಯನ್ನು ನಿರ್ಮಿಸಲಾಗಿದೆ. ಇದು ಗುಹೆಯೊಳಗೇ ಮನೆ ಮಂದಿ ಕುಳಿತಂತೆ ಈ ಮನೆಯೊಳಗೆ ಭಾಸವಾಗುತ್ತದೆ.

ಇದನ್ನೂ ಓದಿ: Kukke Subramanya: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪ್ರತಿದಿನ ಅನ್ನಪ್ರಸಾದಕ್ಕೆ ಎಷ್ಟು ಬಾಳೆಎಲೆ ಬೇಕು ಗೊತ್ತೇ?

ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಹೊರಗೆ ಹೋಗಿ ಕೆಲಸ ಮಾಡಲು ಸಾಧ್ಯವಾಗದ ಸಂದರ್ಭದಲ್ಲಿ ಮನೆಯ ಕೆಲಸವನ್ನು ಆರಂಭಿಸಿದ್ದ ದಿನೇಶ್, ಮನೆಯ ಶೇಕಡಾ 75 ರಷ್ಟು ಕೆಲಸವನ್ನು ದಿನೇಶ್ ಅವರೇ ಮಾಡಿದ್ದಾರೆ. 2 ಸೆಂಟ್ಸ್ ಜಾಗದಲ್ಲಿ ಮೂರು ಎರಡು ಅಂತಸ್ತಿನ ಮನೆ ನಿರ್ಮಿಸಲಾಗಿದ್ದು, ಈ ಜಾಗದಲ್ಲೇ ಹತ್ತಕ್ಕೂ ಹೆಚ್ಚಿನ ಹಣ್ಣಿನ ಗಿಡಗಳನ್ನೂ ನೆಟ್ಟು ಬೆಳೆಸಿದ್ದಾರೆ. ಎಂಟನೇ ತರಗತಿ ಕಲಿತಿರುವ ದಿನೇಶ್, ಕಲೆಯಲ್ಲಿ ಯಾವುದೇ ವಿಶೇಷ ತರಬೇತಿಯನ್ನು ಪಡೆದಿಲ್ಲ. ಆದರೂ ಯೂಟ್ಯೂಬ್‌ನಿಂದ ಮಾಹಿತಿಯನ್ನು ಪಡೆದುಕೊಂಡು ತನ್ನ ಕಲೆಯಲ್ಲಿ ವಿಶೇಷತೆಯನ್ನು ಅಳವಡಿಸಿಕೊಂಡಿದ್ದಾರೆ.

ವಿಶೇಷ ಚೇತನ ಮಕ್ಕಳಿಗೆ ಅವರ ಆಸಕ್ತಿಗೆ ತಕ್ಕಂತೆ ಕಲಾಕೃತಿಗಳನ್ನು ನಿರ್ಮಿಸಿಕೊಡುವ ಮತ್ತು ಅವರಿಗೆ ಅದೇ ವಿಷಯದಲ್ಲಿ ತರಬೇತಿಯನ್ನು ಉಚಿತವಾಗಿ ನೀಡುತ್ತಿದ್ದಾರೆ. ಅಗತ್ಯವಿದ್ದವರಿಗೆ ಅವರಿಗೆ ಬೇಕಾದ ರೀತಿಯಲ್ಲಿ ಮನೆ ಅಥವಾ ಇತರ ಕಲಾಕೃತಿಗಳನ್ನು ನಿರ್ಮಿಸಿಕೊಡುತ್ತಾರೆ ದಿನೇಶ್. ಅಷ್ಟೇ ಅಲ್ಲದೇ, ಮೇಲುಕೋಟೆ ಹಾಗೂ ಇತರ ಕಡೆಗಳಲ್ಲಿ ತೇಲುವ ಮನೆ, ಗುಹೆಯ ಮನೆಯನ್ನು ನಿರ್ಮಿಸಿದ್ದು, ಹಲವು ಕಡೆಗಳಲ್ಲಿ ಇವರು ನಿರ್ಮಿಸಿದ ಕಲಾಕೃತಿಗಳನ್ನು ಅಳವಡಿಸಲಾಗಿದೆ.