India vs England: ಭಾರತಕ್ಕೆ ಮತ್ತೆ ಆಸರೆಯಾದ ಕನ್ನಡಿಗ ರಾಹುಲ್! ಟೀಮ್ ಇಂಡಿಯಾಗೆ 96 ರನ್​ಗಳ ಮಹತ್ವದ ಮುನ್ನಡೆ | IND vs ENG 1st Test Day 3 rahul 47 helps India 90/2 at stumps lead by 96 runs

India vs England: ಭಾರತಕ್ಕೆ ಮತ್ತೆ ಆಸರೆಯಾದ ಕನ್ನಡಿಗ ರಾಹುಲ್! ಟೀಮ್ ಇಂಡಿಯಾಗೆ 96 ರನ್​ಗಳ ಮಹತ್ವದ ಮುನ್ನಡೆ | IND vs ENG 1st Test Day 3 rahul 47 helps India 90/2 at stumps lead by 96 runs

Last Updated:

6 ರನ್​ಗಳ ಮುನ್ನಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಭಾರತ 2ನೇ ಇನ್ನಿಂಗ್ಸ್​​ನಲ್ಲಿ ನಿರೀಕ್ಷಿತ ಆರಂಭ ಪಡೆಯುವಲ್ಲಿ ವಿಫಲವಾಯಿತು. ಮೊದಲ ಇನ್ನಿಂಗ್ಸ್​ನ ಶತಕ ವೀರ ಯಶಸ್ವಿ ಜೈಸ್ವಾಲ್ ಕೇವಲ 4 ರನ್​ಗಳಿಸಿ ಬ್ರೈಡನ್ ಕಾರ್ಸ್​ಗೆ ಬೌಲಿಂಗ್​​ನಲ್ಲಿ ವಿಕೆಟ್ ಕೀಪರ್ ಜೇಮಿ ಸ್ಮಿತ್​ಗೆ ಕ್ಯಾಚ್ ನೀಡಿ ಔಟ್ ಆದರು. ನಂತರ ಬಂದ ಸಾಯಿ ಸುದರ್ಶನ್ 2ನೇ ವಿಕೆಟ್ ಜೊತೆಯಾಟದಲ್ಲಿ 66 ರನ್​ ಸೇರಿಸಿದರು.

ಕೆಎಲ್ ರಾಹುಲ್ಕೆಎಲ್ ರಾಹುಲ್
ಕೆಎಲ್ ರಾಹುಲ್

ಭಾರತ ಮತ್ತು ಇಂಗ್ಲೆಂಡ್ (India vs England) ನಡುವೆ ನಡೆಯುತ್ತಿರುವ ಹೆಡಿಂಗ್ಲೆ ಟೆಸ್ಟ್‌ನ ( Headingley) ಮೂರನೇ ದಿನ ಮಳೆಯು ಕಾರಣ ನಿಗಧಿತ ಸಮಯಕ್ಕಿಂತ ಬೇಗ ಅಂತ್ಯವಾಗಿದೆ. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 471 ರನ್ ಗಳಿಸಿದರೆ, ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ಮೂರನೇ ದಿನದ ಆಟವನ್ನು 209/3 ಸ್ಕೋರ್‌ನೊಂದಿಗೆ ಪ್ರಾರಂಭಿಸಿ 465 ರನ್‌ಗಳಿಗೆ ಆಲೌಟ್ ಆಯಿತು. ಭಾರತ 6 ರನ್‌ಗಳ ಮುನ್ನಡೆ ಗಳಿಸಿದ್ದು, 2ನೇ ಇನ್ನಿಂಗ್ಸ್​​​ನಲ್ಲಿ ಭಾರತ ತಂಡ 23.5 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು 90 ರನ್​ಗಳಿಸಿದೆ. ಕನ್ನಡಿಗ ರಾಹುಲ್ ಅಜೇಯ 47 ರನ್, ನಾಯಕ ಗಿಲ ಅಜೇಯ 10 ರನ್​ಗಳಿಸಿ 4ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.

6 ರನ್​ಗಳ ಮುನ್ನಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಭಾರತ 2ನೇ ಇನ್ನಿಂಗ್ಸ್​​ನಲ್ಲಿ ನಿರೀಕ್ಷಿತ ಆರಂಭ ಪಡೆಯುವಲ್ಲಿ ವಿಫಲವಾಯಿತು. ಮೊದಲ ಇನ್ನಿಂಗ್ಸ್​ನ ಶತಕ ವೀರ ಯಶಸ್ವಿ ಜೈಸ್ವಾಲ್ ಕೇವಲ 4 ರನ್​ಗಳಿಸಿ ಬ್ರೈಡನ್ ಕಾರ್ಸ್​ಗೆ ಬೌಲಿಂಗ್​​ನಲ್ಲಿ ವಿಕೆಟ್ ಕೀಪರ್ ಜೇಮಿ ಸ್ಮಿತ್​ಗೆ ಕ್ಯಾಚ್ ನೀಡಿ ಔಟ್ ಆದರು. ನಂತರ ಬಂದ ಸಾಯಿ ಸುದರ್ಶನ್ 2ನೇ ವಿಕೆಟ್ ಜೊತೆಯಾಟದಲ್ಲಿ 66 ರನ್​ ಸೇರಿಸಿದರು.

ಇಂಗ್ಲೆಂಡ್​ಗೆ ಆರಂಭಿಕ ಆಘಾತ

2ನೇ ದಿನ 209ಕ್ಕೆ 3 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ 3ನೇ ದಿನ ಆ ಮೊತ್ತಕ್ಕೆ 256 ರನ್ ಸೇರಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಬ್ಯಾಟಿಂಗ್​​ ಇಳಿದ ಆರಂಭದಲ್ಲೇ ಇಂಗ್ಲೆಂಡ್ ತಂಡ ನಿನ್ನೆಯ ಶತಕವೀರ ಒಲಿ ಪೋಪ್ ವಿಕೆಟ್ ಕಳೆದುಕೊಂಡಿತು. ಪೋಪ್​ 137 ಎಸೆತಗಳಲ್ಲಿ 14 ಬೌಂಡರಿ ಸಹಿತ 106 ರನ್ ಗಳಿಸಿ ಪ್ರಸಿಧ್ ಕೃಷ್ಣಗೆ ವಿಕೆಟ್ ಒಪ್ಪಿಸಿದರು. ನಂತರ ಹ್ಯಾರಿ ಬ್ರೂಕ್ ಜೊತೆ ಸೇರಿದ ನಾಯಕ ಬೆನ್ ಸ್ಟೋಕ್ಸ್ (20) ಜೊತೆ ಸೇರಿ 51 ರನ್​ಗಳ ಜೊತೆಯಾಟ ನೀಡಿದರು. ಬೆನ್​ ಸ್ಟೋಕ್ಸ್ ಸಿರಾಜ್ ಬೌಲಿಂಗ್​​ನಲ್ಲಿ ಪಂತ್​ಗೆ ಕ್ಯಾಚ್ ನೀಡಿ ಔಟ್ ಆದರು.

ಹ್ಯಾರಿ ಬ್ರೂಕ್ ಶತಕ ಮಿಸ್

ನಂತರ ಹ್ಯಾರಿ ಬ್ರೂಕ್ ಹಾಗೂ ಜೇಮಿ ಸ್ಮಿತ್ 6ನೇ ವಿಕೆಟ್​ 73 ರನ್​ಗಳ ಜೊತೆಯಾಟ ನೀಡಿ ಚೇತರಿಕೆ ನೀಡಿದರು. ಜೇಮಿ ಸ್ಮಿತ್ 52 ಎಸೆತಗಳಲ್ಲಿ 40 ರನ್​ಗಳಿಸಿ ಪ್ರಸಿಧ್ ಕೃಷ್ಣ ಬೌಲಿಂಗ್​​​ನಲ್ಲಿ ಸಾಯಿ ಸುದರ್ಶನ್​ಗೆ ಕ್ಯಾಚ್ ನೀಡಿದರು. ಹ್ಯಾರಿ ಬ್ರೂಕ್ 112 ಎಸೆತಗಳಲ್ಲಿ 11 ಬೌಂಡರಿ, 2 ಸಿಕ್ಸರ್​ಗಳ ಸಹಿತ 99 ರನ್​ಗಳಿಸಿ ಪ್ರಸಿಧ್ ಕೃಷ್ಣ ಬೌಲಿಂಗ್​ನಲ್ಲಿ ಶಾರ್ದೂಲ್ ಠಾಕೂರ್​ಗೆ ಕ್ಯಾಚ್ ನೀಡಿ ಔಟ್ ಆದರು. ಅವರು ಔಟಾಗುವ ಮುನ್ನ ವೋಕ್ಸ್ ಜೊತೆಗೆ 49ರನ್​ಗಳ ಜೊತೆಯಾಟ ನೀಡಿದ್ದರು.

ಕೊನೆಯಲ್ಲಿ ಅಬ್ಬರಿಸಿದ ವೋಕ್ಸ್

ಬ್ರೂಕ್ ಔಟಾದಾಗ ಇಂಗ್ಲೆಂಡ್ ತಂಡ 349ಕ್ಕೆ7 ವಿಕೆಟ್ ಕಳೆದುಕೊಂಡುತ್ತು, 10-20 ರನ್​ಗಳಿಸುವಷ್ಟರಲ್ಲಿ ಆಲೌಟ್ ಎಂದೇ ಭಾವಿಸಲಾಗಿತ್ತು. ಆದರೆ 8ನೇ ವಿಕೆಟ್​ಗೆ ಒಂದಾದ ಕ್ರಿಸ್ ವೋಕ್ಸ್ (38) ಮತ್ತು ಬೆನ್ ಕಾರ್ಸ್​ (22) 55 ರನ್​ ಸೇರಿಸಿದರು. ಕಾರ್ಸ್​​ರನ್ನ ಸಿರಾಜ್ ಪೆವಿಲಿಯನ್​ಗಟ್ಟಿದರೆ, ಕೊನೆಯಲ್ಲಿ ಬುಮ್ರಾ ವೋಕ್ಸ್ ಹಾಗೂ ಜೋಶ್ ಟಂಗ್​ರನ್ನ ಕ್ಲೀನ್ ಬೌಲ್ಡ್ ಮಾಡಿದರು.

ಭಾರತದ ಪರ ಜಸ್ಪ್ರೀತ್ ಬುಮ್ರಾ 83ಕ್ಕೆ 5 ವಿಕೆಟ್ ಪಡೆದರೆ, ಪ್ರಸಿಧ್ ಕೃಷ್ಣ 128ಕ್ಕೆ 3, ಸಿರಾಜ್ 122ಕ್ಕೆ 2 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 471 ರನ್ ಗಳಿಸಿತ್ತು. ನಾಯಕ ಶುಭ್ಮ​ನ್ ಗಿಲ್ 227 ಎಸೆತಗಳಲ್ಲಿ 19 ಬೌಂಡರಿ ಮತ್ತು ಒಂದು ಸಿಕ್ಸರ್ ಸಹಾಯದಿಂದ 147 ರನ್ ಗಳಿಸಿದರು. ವಿಕೆಟ್ ಕೀಪರ್-ಬ್ಯಾಟ್ಸ್ಮನ್ ರಿಷಭ್ ಪಂತ್ 178 ಎಸೆತಗಳಲ್ಲಿ 134 ರನ್ ಗಳಿಸಿದರು. ಪಂತ್ ತಮ್ಮ ಇನ್ನಿಂಗ್ಸ್ನಲ್ಲಿ 12 ಬೌಂಡರಿ ಮತ್ತು 6 ಸಿಕ್ಸರ್ಗಳನ್ನು ಬಾರಿಸಿದರು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 159 ಎಸೆತಗಳಲ್ಲಿ 16 ಬೌಂಡರಿ ಮತ್ತು ಒಂದು ಸಿಕ್ಸರ್ ಸಹಾಯದಿಂದ 101 ರನ್ ಗಳಿಸಿದರು. ಇಂಗ್ಲೆಂಡ್ ಪರ ನಾಯಕ ಬೆನ್ ಸ್ಟೋಕ್ಸ್ ಹಾಗೂ ಜೋಶ್ ಟಾಂಗ್ ತಲಾ 4 ವಿಕೆಟ್ ಪಡೆದಿದ್ದರು.