ಈ ಸಂದರ್ಭದಲ್ಲಿ ಭಾರತ ಹೆಡಿಂಗ್ಲೆಯಲ್ಲಿ ಟೆಸ್ಟ್ ಪಂದ್ಯ ಗೆಲ್ಲಲು ಎಷ್ಟು ರನ್ಗಳಿಸಿದರೆ ಉತ್ತಮ, ಹಾಗೂ ಈ ಮೈದಾನದಲ್ಲಿ ದಾಖಲಾದ ಗರಿಷ್ಠ ಚೇಸ್ ಎಷ್ಟು ಎಂಬುದನ್ನ ಈ ಸುದ್ದಿಯಲ್ಲಿ ತಿಳಿದುಕೊಳ್ಳೋಣ.
ಹೆಡಿಂಗ್ಲೆಯ ಚೇಸಿಂಗ್ ಇತಿಹಾಸ
ಹೆಡಿಂಗ್ಲೆ ಕ್ರೀಡಾಂಗಣವು ಟೆಸ್ಟ್ ಕ್ರಿಕೆಟ್ನಲ್ಲಿ ದೊಡ್ಡ ಚೇಸಿಂಗ್ಗಳಿಗೆ ಹೆಸರಾಗಿದೆ. 1948ರಲ್ಲಿ ಆಸ್ಟ್ರೇಲಿಯಾ ತಂಡವು 404 ರನ್ಗಳ ಗುರಿಯನ್ನು 7 ವಿಕೆಟ್ಗಳಿಗೆ ಯಶಸ್ವಿಯಾಗಿ ಬೆನ್ನಟ್ಟಿತ್ತು, ಇದು ಈ ಕ್ರೀಡಾಂಗಣದ ಗರಿಷ್ಠ ಚೇಸಿಂಗ್ ದಾಖಲೆಯಾಗಿದೆ. ಆ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ 496ರನ್ಗಳಿಸಿದರೆ, ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ 458 ರನ್ಗಳಿಸಿತ್ತು. ನಂತರ ಇಂಗ್ಲೆಂಡ್ 38 ರನ್ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ನಲ್ಲಿ 365 ರನ್ಗಳಿಸಿ ಡಿಕ್ಲೇರ್ ಘೋಷಿಸಿ ಆಸೀಸ್ಗೆ 404 ರನ್ಗಳ ಗುರಿ ನೀಡಿತ್ತು. ಈ ಮೊತ್ತವನ್ನ ಚೇಸ್ ಮಾಡಿದ ಕಾಂಗರೂ ಪಡೆ ಡೊನಾಲ್ಡ್ ಬ್ರಾಡ್ಮನ್ (ಅಜೇಯ 173) ಹಾಗೂ ಆರ್ಥರ್ ಮೋರಿಸ್(182) ಶತಕಗಳ ನೆರವಿನಿಂದ 6 ವಿಕೆಟ್ಗಳ ಜಯ ಸಾಧಿಸಿತ್ತು. ಇದು 77 ವರ್ಷಗಳಿಂದ ಈ ದಾಖಲೆ ಆಸ್ಟ್ರೇಲಿಯಾ ಹೆಸರಿನಲ್ಲಿಯೇ ಇದೆ.
2ನೇ ಗರಿಷ್ಠ ಚೇಸಿಂಗ್
ಇತ್ತೀಚಿನ ಚೇಸ್ ಗಮನಿಸಿದರೆ 2019ರಲ್ಲಿ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ವಿರುದ್ಧ 359ರನ್ಗಳನ್ನ ಯಶಸ್ವಿಯಾಗಿ ಚೇಸ್ ಮಾಡಿ ಗೆದ್ದಿದ್ದಾಗಿದೆ. ಆ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನಲ್ಲಿ 179ಕ್ಕೆ ಆಲೌಟ್ ಆದರೆ, ಇಂಗ್ಲೆಂಡ್ 2ನೇ ಕೇವಲ 67ಕ್ಕೆ ಆಲೌಟ್ ಆಗಿತ್ತು. ನಂತರ 2ನೇ ಇನ್ನಿಂಗ್ಸ್ನಲ್ಲಿ 112 ರನ್ಗಳ ಮುನ್ನಡೆಯೊಂದಿಗೆ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 246 ರನ್ಗಳಿಸಿ ಅತಿಥೇಯ ತಂಡಕ್ಕೆ 359ರನ್ಗಳ ಟಾರ್ಗೆಟ್ ನೀಡಿತ್ತು. ಈ ಮೊತ್ತವನ್ನ ಬೆನ್ ಸ್ಟೋಕ್ಸ್ ಸಿಡಿಸಿದ ಐತಿಹಾಸಿಕ ಅಜೇಯ ಶತಕದ (135) ನೆರವಿನಿಂದ ಇಂಗ್ಲೆಂಡ್ 1 ವಿಕೆಟ್ ಜಯ ಸಾಧಿಸಿತ್ತು. ಇದು ಟೆಸ್ಟ್ ಕ್ರಿಕೆಟ್ ಚರಿತ್ರೆಯಲ್ಲಿ ಒಂದು ಐತಿಹಾಸಿಕ ಚೇಸಿಂಗ್ ಆಗಿ ಗುರುತಿಸಿಕೊಂಡಿದೆ.
ಲೀಡ್ಸ್ನಲ್ಲಿ ಗರಿಷ್ಠ ಚೇಸಿಂಗ್ ದಾಖಲೆ ಇಲ್ಲಿವೆ
ಆಸ್ಟ್ರೇಲಿಯಾ vs ಇಂಗ್ಲೆಂಡ್ (1948)- 404 ರನ್
ಇಂಗ್ಲೆಂಡ್ vs ಆಸ್ಟ್ರೇಲಿಯಾ (2019)- 359 ರನ್
ವೆಸ್ಟ್ ಇಂಡೀಸ್ vs ಇಂಗ್ಲೆಂಡ್ (2017)- 322 ರನ್
ಇಂಗ್ಲೆಂಡ್ vs ಆಸ್ಟ್ರೇಲಿಯಾ (2001)- 315 ರನ್ಗಳು
ಇಂಗ್ಲೆಂಡ್ vs ನ್ಯೂಜಿಲೆಂಡ್ (2022)- 296 ರನ್ಗಳು
ಇಂಗ್ಲೆಂಡ್ vs ಆಸ್ಟ್ರೇಲಿಯಾ (2023)- 251 ರನ್ಗಳು
ಇಂಗ್ಲೆಂಡ್ vs ಪಾಕಿಸ್ತಾನ (1982)- 219 ರನ್ಗಳು
ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ (1929)- 184 ರನ್ಗಳು
ಪಾಕಿಸ್ತಾನ vs ಆಸ್ಟ್ರೇಲಿಯಾ (2010)- 180 ರನ್ಗಳು
ವೆಸ್ಟ್ ಇಂಡೀಸ್ vs ಇಂಗ್ಲೆಂಡ್ (1984)- 128 ರನ್ಗಳು
ಭಾರತ ಎಷ್ಟು ರನ್ಗಳಿಸಿದ್ರೆ ಸೇಫ್
ಮೇಲಿನ ಅಂಕಿ ಅಂಶಗಳನ್ನ ಗಮನಿಸಿದರೆ ಇಂಗ್ಲೆಂಡ್ ಬ್ಯಾಟಿಂಗ್ ಲೈನ್ ಅಪ್ ಬಲಿಷ್ಠವಾಗಿರುವುದರಿಂದ ಭಾರತ ತಂಡ ಈ ಪಂದ್ಯವನ್ನ ಗೆಲ್ಲಲು ಕನಿಷ್ಠ 300ರಿಂದ 320ರನ್ಗಳ ಟಾರ್ಗೆಟ ನೀಡುವ ಅಗತ್ಯವಿದೆ. ಅಲ್ಲದೆ ಬುಮ್ರಾ ಹೊರೆತುಪಡಿಸಿ ಉಳಿದ ಬೌಲರ್ ವಿಕೆಟ್ ಪಡೆಯಲು ಪರದಾಡುತ್ತಿದ್ದಾರೆ. ಜೊತೆ ರನ್ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ 300ಕ್ಕಿಂತ ಹೆಚ್ಚಿನ ಗುರಿ ನೀಡಿದರಷ್ಠೇ ಈ ಮೈದಾನದಲ್ಲಿ ಗೆಲ್ಲಲು ಅವಕಾಶ ಸಿಗುತ್ತದೆ. ಸಧ್ಯಕ್ಕೆ ಭಾರತ ತಂಡ 92ಕ್ಕೆ3 ವಿಕೆಟ್ ಕಳೆದುಕೊಂಡಿದೆ. ಇನ್ನು 200ಕ್ಕೂ ಹೆಚ್ಚು ರನ್ಗಳಿಸಬೇಕಿದೆ.
June 23, 2025 3:48 PM IST