ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ರಾಹುಲ್ ಆಟವನ್ನ ಹೊಗಳಿದ್ದಾರೆ. “ಕೆಎಲ್ ರಾಹುಲ್ ಒಬ್ಬ ಸಮಗ್ರ ಆಟಗಾರ. ತಂಡಕ್ಕೆ ಯಾವಾಗ, ಯಾವ ಕ್ರಮಾಂಕದಲ್ಲಾದರೂ ಅವರು ಕೊಡುಗೆ ನೀಡುತ್ತಾರೆ,” ಎಂದು ಅವರು ಹೇಳಿದರು. ರಾಹುಲ್ ಆರಂಭಿಕರಾಗಿಯೂ, ಮಧ್ಯಮ ಕ್ರಮಾಂಕದಲ್ಲಿಯೂ ಬ್ಯಾಟಿಂಗ್ ಮಾಡಬಲ್ಲರು, ಇದು ತಂಡದ ಸಂಯೋಜನೆಗೆ ದೊಡ್ಡ ಕೊಡುಗೆ ನೀಡಲು ಸಹಾಯಕವಾಗಿದೆ ಎಂದು ತಿಳಿಸಿದರು.