India vs England: ಮೊದಲ ಟೆಸ್ಟ್​​​ನಲ್ಲಿ ಮುಗ್ಗರಿಸಿದ ಟೀಮ್ ಇಂಡಿಯಾ! ದಾಖಲೆ ರನ್​ ಚೇಸ್​ ಮಾಡಿ ಗೆದ್ದು ಬೀಗಿದ ಆಂಗ್ಲರು | Duckett’s Century Powers England to Thrilling 5-Wicket Win Over India at Headingley

India vs England: ಮೊದಲ ಟೆಸ್ಟ್​​​ನಲ್ಲಿ ಮುಗ್ಗರಿಸಿದ ಟೀಮ್ ಇಂಡಿಯಾ! ದಾಖಲೆ ರನ್​ ಚೇಸ್​ ಮಾಡಿ ಗೆದ್ದು ಬೀಗಿದ ಆಂಗ್ಲರು | Duckett’s Century Powers England to Thrilling 5-Wicket Win Over India at Headingley

4ನೇ ದಿನದಂತ್ಯಕ್ಕೆ 6 ಓವರ್​ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 21 ರನ್​ಗಳಿಸಿದ್ದ ಇಂಗ್ಲೆಂಡ್ ತಂಡ ಇಂದು 90 ಒವರ್​ಗಳಲ್ಲಿ 350 ರನ್​ಗಳಿಸಬೇಕಿತ್ತು. 5ನೇ ದಿನ ಬ್ಯಾಟಿಂಗ್ ಆರಂಭಿಸಿದ ಬೆನ್ ಡಕೆಟ್ ಹಾಗೂ ಕ್ರಾಲೆ ಮೊದಲ ವಿಕೆಟ್​​ ಜೊತೆಯಾಟದಲ್ಲಿ ವಿಶ್ವದಾಖಲೆಯ 188 ರನ್​ಗಳಿಸಿದರು. ಬೆನ್ ಡಕೆಟ್ 170 ಎಸೆತಗಳಲ್ಲಿ 21 ಬೌಂಡರಿ, 1 ಸಿಕ್ಸರ್​​ ಜೊತೆಗೆ 149 ರನ್​ಗಳಿಸಿದರೆ, ಕ್ರಾಲೆ 126 ಎಸೆತಗಳಲ್ಲಿ 7 ಬೌಂಡರಿಗಳ ಸಹಿತ 65 ರನ್​ಗಳಿಸಿದರು. ಪ್ರಸಿಧ್ ಕೃಷ್ಣ ಕ್ರಾಲೆ ವಿಕೆಟ್ ಪಡೆದು ಭಾರತಕ್ಕೆ ಮೊದಲ ಬ್ರೇಕ್ ನೀಡಿದರು.

ಕ್ರಾಲೆ ವಿಕೆಟ್ ನಂತರ ಬಂದ ಮೊದಲ ಇನ್ನಿಂಗ್ಸ್​​ನಲ್ಲಿ ಶತಕ ಬಾರಿಸಿದ್ದ ಒಲಿ ಪೋಪ್ ಕೇವಲ 8 ರನ್​ಗಳಿಸಿ ಕೃಷ್ಣ ಬೌಲಿಂಗ್​​ನಲ್ಲಿ ಕ್ಲೀನ್ ಬೌಲ್ಡ್ ಆದರು. ನಂತರ ಬಂದ ರೂ ಹಾಗೂ ಡಕೆಟ್ 3ನೇ ವಿಕೆಟ್​​ ಜೊತೆಯಾಟದಲ್ಲಿ 47 ರನ್​ಗಳ ಜೊತೆಯಾಟ ನಡೆಸಿದರು. ಅಪಾಯಕಾರಿಯಾಗಿದ್ದ ಬೆನ್​​ ಡಕೆಟ್ ಜೊತೆಗೆ ಸ್ಫೋಟಕ ಬ್ಯಾಟರ್ ಹ್ಯಾರಿ ಬ್ರೂಕ್(0) ರನ್ನ ಶಾರ್ದೂಲ್ ಸತತ 2 ಎಸೆತಗಳಲ್ಲಿ ಪೆವಿಲಿಯನ್​​ಗಟ್ಟಿ ಮತ್ತೊಂದು ಬ್ರೇಕ್ ತಂದುಕೊಟ್ಟಿದ್ದರು.

ಆದರೆ ಜೋ ರೂಟ್ ಹಾಗೂ ನಾಯಕ ಬೆನ್ ಸ್ಟೋಕ್ಸ್​ ದಿಢೀರ್​ ಕುಸಿತವನ್ನ ತಡೆದರು. ಇವರಿಬ್ಬರು 49 ರನ್​ಗಳ ಜೊತೆಯಾಟ ನಡೆಸುವ ಮೂಲಕ ತಂಡವನ್ನು ಗೆಲುವಿನ ಸನಿಹ ತಂದರು. ಬೆನ್​ ಸ್ಟೋಕ್ಸ್​ 51 ಎಸೆತಗಳಲ್ಲಿ 4 ಬೌಂಡರಿಗಳ ನೆರವಿನಿಂದ 33 ರನ್​ಗಳಿಸಿ ಜಡೇಜಾ ಬೌಲಿಂಗ್​​ನಲ್ಲಿ ಗಿಲ್​ಗೆ ಕ್ಯಾಚ್ ನೀಡಿ ಪೆವಿಲಿಯನ್​​ ಸೇರಿಕೊಂಡರು. ಸ್ಟೋಕ್ಸ್​ ವಿಕೆಟ್ ಕಳೆದುಕೊಂಡಾಗ ಇಂಗ್ಲೆಂಡ್​ ಗೆಲುವಿಗೆ 69 ರನ್​ಗಳ ಅಗತ್ಯವಿತ್ತು. ಈ ಮೊತ್ತವನ್ನು ಜೋ ರೂಟ್ ಹಾಗೂ ಜೇಮೀ ಸ್ಮಿತ್ ಇಬ್ಬರು ಮುರಿಯದ 6ನೇ ವಿಕೆಟ್ ಜೊತೆಯಾಟದಲ್ಲಿ 71 ರನ್​ ಸೇರಿಸಿ ಯಶಸ್ವಿಯಾಗಿ ಚೇಸ್ ಪೂರ್ಣಗೊಳಿಸಿ ಇಂಗ್ಲೆಂಡ್ ತಂಡಕ್ಕೆ ಗೆಲುವು ತಂದುಕೊಟ್ಟರು. ರೂಟ್ 84 ಎಸೆತಗಳಲ್ಲಿ 6 ಬೌಂಡರಿಗಳ ಸಹಿತ ಅಜೇಯ 53 ರನ್​ಗಳಿಸಿದರೆ, ಜೇಮೀ ಸ್ಮಿತ್ 55 ಎಸೆತಗಳಲ್ಲಿ  4 ಬೌಂಡರಿ, 2 ಸಿಕ್ಸರ್​ಗಳ ಜೊತೆಗೆ ಅಜೇಯ 44 ರನ್​ಗಳಿಸಿದರು.

ಸ್ಕೋರ್ ವಿವರ

ಭಾರತ ತನ್ನ ಮೊದಲ ಇನ್ನಿಂಗ್ಸ್​​ನಲ್ಲಿ 113 ಓವರ್​ಗಳಲ್ಲಿ 471 ರನ್​ಗಳಿಸಿತ್ತು. ಯಶಸ್ವಿ ಜೈಸ್ವಾಲ್(101), ನಾಯಕ ಶುಭ್​ಮನ್ ಗಿಲ್(147), ರಿಷಭ್ ಪಂತ್ (134) ಶತಕ ಸಿಡಿಸಿದರೆ, ಕೆಎಲ್ ರಾಹುಲ್ 42 ರನ್​ಗಳಿಸಿದ್ದರು. ಇಂಗ್ಲೆಂಡ್ ಪರ ಬೆನ್ ಸ್ಟೋಕ್ಸ್ 66ಕ್ಕೆ4, ಜೋಶ್ ಟಂಗ್ 86ಕ್ಕೆ4 ವಿಕೆಟ್ ಪಡೆದು ಮಿಂಚಿದ್ದರು.

ನಂತರ ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡ 100.4 ಓವರ್​ಗಳಲ್ಲಿ 465 ರನ್​ಗಳಿಸಿತ್ತು. ಒಲಿ ಪೋಪ್ (106) ಶತಕ, ಹ್ಯಾರಿ ಬ್ರೂಕ್ (66) ಹಾಗೂ ಬೆನ್​ ಡಕೆಟ್(62) ಅರ್ಧಶತಕ ಸಿಡಿಸಿದ್ದರು. ಜೇಮಿ ಸ್ಮಿತ್ 40, ಕ್ರಿಸ್ ವೋಕ್ಸ್ 38, ರೂಟ್ 28 ಉಪಯುಕ್ತ ಕೊಡುಗೆ ನೀಡಿದ್ದರು. ಭಾರತದ ಪರ ಜಸ್ಪ್ರೀತ್ ಬುಮ್ರಾ 83ಕ್ಕೆ5, ಮೊಹಮ್ಮದ್ ಸಿರಾಜ್ 122ಕ್ಕೆ2, ಪ್ರಸಿಧ್ ಕೃಷ್ಣ 128ಕ್ಕೆ 3 ವಿಕೆಟ್ ಪಡೆದಿದ್ದರು.

ನಂತರ 6 ರನ್​ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡ ಕೆಎಲ್ ರಾಹುಲ್ (137) ಹಾಗೂ ರಿಷಭ್ ಪಂತ್ (118) ಸಿಡಿಸಿದ ಶತಕದ ನೆರವಿನಿಂದ 96 ಓವರ್​ಗಳಲ್ಲಿ 364 ರನ್​ಗಳಿಸಿ ಇಂಗ್ಲೆಂಡ್​ಗೆ 371 ರನ್​ಗಳ ಗುರಿ ನೀಡಿತ್ತು. ಇಂಗ್ಲೆಂಡ್ ಬೌಲರ್ಗಳ ಪೈಕಿ ಬ್ರೈಡನ್ ಕಾರ್ಸ್ 80ಕ್ಕೆ3, ಜೋಶ್ ಟಂಗ್ 72ಕ್ಕೆ3, ಶೋಯಭ್ ಬಶೀರ್ 90ಕ್ಕೆ2, ಬೆನ್ ಸ್ಟೋಕ್ಸ್ 47ಕ್ಕೆ1 ವಿಕೆಟ್ ಪಡೆದಿದ್ದರು.

371ರನ್​ಗಳ ಗುರಿಯನ್ನ ಇಂಗ್ಲೆಂಡ್ ತಂಡ ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು ತಲುಪಿತು. ಬೆನ್ ಡಕೆಟ್ (149) ಶತಕ ಸಿಡಿಸಿದರೆ, ಜಾಕ್ ಕ್ರಾಲೆ 65 ರನ್ ಹಾಗೂ ಜೋ ರೂಟ್ ಅಜೇಯ 53, ಜೇಮಿ ಸ್ಮಿತ್ ಅಜೇಯ 44 ರನ್​ಗಳಿಸಿ ಗೆಲುವಿನ ರೂವಾರಿಯಾದರು.