Last Updated:
ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್ 22ರಿಂದ ಶುರುವಾಗುತ್ತಿದೆ. ಎರಡು ತಿಂಗಳಿಗಿಂತ ಹೆಚ್ಚು ಕಾಲ ನಡೆಯುವ ಕ್ರೀಡಾಕೂಟದಲ್ಲಿ 10 ಕ್ರಿಕೆಟ್ ತಂಡಗಳು ಭಾಗಿಯಾಗಲಿವೆ. ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಕ್ರಿಕೆಟ್ ಅಭಿಮಾನಿಗಳು ಉತ್ಸುಕರಾಗಿದ್ದಾರೆ.
ಬೆಂಗಳೂರು: ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್-2025 ಇನ್ನೆರಡು ದಿನಗಳಲ್ಲಿ ಪ್ರಾರಂಭವಾಗಲಿದೆ. ಕ್ರಿಕೆಟ್ ಮೇನಿಯ ಫೀವರ್ ಹೆಚ್ಚಿಸುವ IPL ಪಂದ್ಯಗಳ ಟಿಕೆಟ್ಗೆ ಭಾರೀ ಡಿಮ್ಯಾಂಡ್ ಬಂದಿದೆ. ಹೌದು, ಐಪಿಎಲ್ ಕ್ರಿಕೆಟ್ ಹಬ್ಬ ಶುರುವಾಗುವ ಮುನ್ನವೇ ಟಿಕೆಟ್ ದರ ಏರಿಕೆಯ ಬಿಸಿ ಜೋರಾಗಿದೆ. ಟಿಕೆಟ್ ದರ ನೋಡಿದ ಕ್ರಿಕೆಟ್ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್ 22ರಿಂದ ಶುರುವಾಗುತ್ತಿದೆ. ಎರಡು ತಿಂಗಳಿಗಿಂತ ಹೆಚ್ಚು ಕಾಲ ನಡೆಯುವ ಕ್ರೀಡಾಕೂಟದಲ್ಲಿ 10 ಕ್ರಿಕೆಟ್ ತಂಡಗಳು ಭಾಗಿಯಾಗಲಿವೆ. ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಕ್ರಿಕೆಟ್ ಅಭಿಮಾನಿಗಳು ಉತ್ಸುಕರಾಗಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಗಳ ಟಿಕೆಟ್ ದರ ಗಗನಕ್ಕೇರಿದೆ. ಕನಿಷ್ಠ 2300 ರೂಪಾಯಿಯಿಂದ ಗರಿಷ್ಠ 42,000 ರೂಪಾಯಿವರೆಗೆ ಟಿಕೆಟ್ ದರ ನಿಗದಿ ಮಾಡಲಾಗಿದೆ. ಇದು ಸಾಮಾನ್ಯ ಕ್ರಿಕೆಟ್ ಅಭಿಮಾನಿಗಳಿಗೆ ನಿಲುಕದ ದರ ಎಂದು ಕನ್ನಡ ಚಳವಳಿ ಕೇಂದ್ರ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ: ರಾಜ್ಯದ ಜನರಿಗೆ ಕರೆಂಟ್ ಶಾಕ್! ಪ್ರತಿ ಯೂನಿಟ್ನ ದರ ಎಷ್ಟು ಏರಿಕೆ ಗೊತ್ತಾ? ಇಲ್ಲಿದೆ ದರಪಟ್ಟಿ
ಟಿಕೆಟ್ ದರ ದುಬಾರಿಯಾಗಿದ್ದು, ಕೂಡಲೇ ಕಡಿಮೆ ಮಾಡಬೇಕೆಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಅಧ್ಯಕ್ಷರಿಗೆ ಕನ್ನಡ ಚಳವಳಿ ಕೇಂದ್ರ ಸಮಿತಿ ಮನವಿ ಮಾಡಿದೆ. ಸಮಿತಿಯ ಅಧ್ಯಕ್ಷ ಗುಗುರುದೇವ್ ನಾರಾಯಣಕುಮಾರ್ ಮಾತನಾಡಿ, ಬೆಂಗಳೂರು ಕ್ರಿಕೆಟ್ ಪ್ರೇಮಿಗಳ ನೆಲೆವೀಡು. ಹಲವಾರು ದಿಗ್ಗಜರಿಗೆ ಚಿನ್ನಸ್ವಾಮಿ ಕ್ರೀಡಾಂಗಣ ಸಾಕ್ಷಿಯಾಗಿದೆ. ವಿಶ್ವದರ್ಜೆಯ ಆಟಗಾರರನ್ನೂ ಕಂಡ ನೆಲ ಇದು. ಐಪಿಎಲ್ ಆರಂಭವಾದಾಗಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅಪಾರ ಅಭಿಮಾನಿ ಬಳಗವಿದೆ. ಸಾಮಾನ್ಯ ಅಭಿಮಾನಿ ಕೂಡ ಕ್ರೀಡಾಂಗಣದಲ್ಲೇ ಪಂದ್ಯ ವೀಕ್ಷಿಸಬೇಕೆಂಬ ಆಸೆ ಹೊಂದಿರುತ್ತಾನೆ. ಹೀಗಾಗಿ, ಟಿಕೆಟ್ ದರ ಕಡಿಮೆ ಮಾಡಿ, ಅಭಿಮಾನಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಆರ್ಸಿಬಿ ತಂಡದ ಆಡಳಿತ ಮಂಡಳಿ ಮತ್ತು ಮಾಲೀಕರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Water Problem: ಬೇಸಿಗೆ ಬಂತೆಂದು ನೀರಿನ ಟ್ಯಾಂಕ್ ಹಾಕಿಸಿಕೊಳ್ತಿದ್ದೀರಾ? ಚಿಂತೆ ಬಿಡಿ, ಈ ವ್ಯಕ್ತಿಯ ಐಡಿಯಾ ಕೇಳಿ
ಸಾಮಾನ್ಯವಾಗಿ ಟಿಕೆಟ್ ಬೆಲೆ ಎಷ್ಟಿದೆ?
- ಕೆಐಎ ವೈರ್ಗಳು ಮತ್ತು ಕೇಬಲ್ಗಳು ಎ ಸ್ಟ್ಯಾಂಡ್: 2,300 ರೂ.
- ಬೋಟ್ ಸಿ ಸ್ಟ್ಯಾಂಡ್ – 3,300ರೂ.
- ಪೂಮಾ ಬಿ ಸ್ಟ್ಯಾಂಡ್ 3,300ರೂ.
- ಟಿಕೆಟಿ ಜಿಟಿ ಅನೆಕ್ಸ್ – 4,000 ರೂ.
- ಕತಾರ್ ಏರ್ವೇಸ್ ಜಾವಗಲ್ ಶ್ರೀನಾಥ್ ಸ್ಟ್ಯಾಂಡ್ – 10,000 ರೂ.
- ಬಿರ್ಲಾ ಎಸ್ಟೇಟ್ ಬಿಎಸ್ ಚಂದ್ರಶೇಖರ್ ಸ್ಟ್ಯಾಂಡ್ – 15,000 ರೂ.
ಇನ್ನು ಬೆಂಗಳೂರಿನಲ್ಲಿ ಯಾವ ದಿನದಂದು ಪಂದ್ಯ ನಡೆಯಲಿವೆ?
- RCB vs GT: ಏಪ್ರಿಲ್ 2
- RCB vs DC: ಏಪ್ರಿಲ್ 10
- RCB vs PBKS: ಏಪ್ರಿಲ್ 18
- RCB vs RR: ಏಪ್ರಿಲ್ 24
- RCB vs CSK: ಮೇ 3
- RCB vs SRH: ಮೇ 13
- RCB vs KKR: ಮೇ 17
(ವರದಿ: ರಂಜನ್ ನ್ಯೂಸ್ 18 ಕನ್ನಡ ಬೆಂಗಳೂರು)
Bangalore,Karnataka
March 20, 2025 11:57 AM IST
IPL 2025: ಕ್ರಿಕೆಟ್ ಪ್ರೇಮಿಗಳಿಗೆ ಶಾಕಿಂಗ್ ನ್ಯೂಸ್! ಐಪಿಎಲ್ ಮೊದಲ ಪಂದ್ಯದ ಟಿಕೆಟ್ ರೇಟ್ ಕೇಳಿದ್ರೆ ತಲೆ ತಿರುಗೋದ ಗ್ಯಾರಂಟಿ