Last Updated:
ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ಬುಮ್ರಾ (Jasprit Bumrah), ಪ್ರಸಿದ್ಧ್ ಕೃಷ್ಣ ಹೊರತುಪಡಿಸಿ ಬೇರೆ ಯಾವ ಬೌಲರ್ಗಳು ಪ್ರಭಾವ ಬೀರಲಿಲ್ಲ. ಈ ನಡುವೆ ತಂಡದಿಂದ ಸ್ಟಾರ್ ಬೌಲರ್ ಒಬ್ಬರನ್ನು ಕೈಬಿಡಲಾಗಿದೆ.
ಇಂಗ್ಲೆಂಡ್‌ನಲ್ಲಿ (England vs India) ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ತಾನೇ ಎಸಗಿದ ಪ್ರಮಾದಗಳಿಂದ ಸೋಲು ಕಂಡಿದೆ. ಬ್ಯಾಟಿಂಗ್‌ನಲ್ಲಿ ಅಗ್ರ ಕ್ರಮಾಂಕದವರು ಮಾತ್ರ ಉತ್ತಮ ಪ್ರದರ್ಶನ ನೀಡಿದರು. ಆದ್ರೆ, ಮದ್ಯಮ ಕ್ರಮಾಂಕದ ಬ್ಯಾಟರ್‌ಗಳಿಂದ ಉತ್ತಮ ಪ್ರದರ್ಶನ ಮೂಡಿ ಬರಲಿಲ್ಲ. ಬೌಲಿಂಗ್‌ನಲ್ಲಿ ಬುಮ್ರಾ (Jasprit Bumrah), ಪ್ರಸಿದ್ಧ್ ಕೃಷ್ಣ (Prasidh Krishna) ಹೊರತುಪಡಿಸಿ ಬೇರೆ ಯಾವ ಬೌಲರ್ಗಳು ಪ್ರಭಾವ ಬೀರಲಿಲ್ಲ. ಈ ನಡುವೆ ತಂಡದಿಂದ ಸ್ಟಾರ್ ಬೌಲರ್ ಒಬ್ಬರನ್ನು ಕೈಬಿಡಲಾಗಿದೆ.
ಟೀಂ ಇಂಡಿಯಾ ಇಂಗ್ಲೆಂಡ್ ಹೋದಮೇಲೆ ಕರಸಿಕೊಂಡು ಹಾಗೇ ವಾಪಾಸ್
ಹೌದು, ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಗೆ ಆರಂಭದಲ್ಲಿ 18 ಜನ ಆಟಗಾರರ ತಂಡವನ್ನು ಆಯ್ಕೆ ಮಾಡಿ ಇಂಗ್ಲೆಂಡ್‌ಗೆ ಕಳಿಸಲಾಗಿತ್ತು. ಇದಾದ ಬಳಿಕ ಇನ್ನೇನು ಮೊದಲ ಪಂದ್ಯ ಆರಂಭವಾಗಬೇಕು ಎನ್ನುವಷ್ಟರಲ್ಲಿ, ಐಪಿಎಲ್‌ನಲ್ಲಿ ಕೊಲ್ಕತಾ ನೈಟ್ ರೈಡರ್ಸ್ ತಂಡದ ಪರ ಆಡಿದ್ದ ಹರ್ಷಿತ್ ರಾಣಾ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಯಿತು. ಆದ್ರೆ, ಈಗ ಅವರನ್ನು ಯಾವುದೇ ಪಂದ್ಯ ಆಡಿಸದೆ ತಂಡದಿಂದ ಹೊರಹಾಕಲಾಗಿದೆ.
ಹೌದು, ಮೊದಲ ಟೆಸ್ಟ್ ಪಂದ್ಯದ ಸೋಲಿನಲ್ಲಿ ಅವರ ಪಾತ್ರ ಏನು ಇಲ್ಲ. ಹಾಗಿದ್ರೂ ಕೂಡ ಅವರನ್ನು ತಂಡದಿಂದ ಕೈಬಿಡಲು ಅಸಲಿ ಕಾರಣ ಏನು ಎಂಬುದನ್ನು ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಆಗಲಿ, ಆಯ್ಕೆ ಸಮಿತಿ ಆಗಲಿ ಯಾವುದೇ ಮಾಹಿತಿ ನೀಡಿಲ್ಲ. ಆದ್ರೆ, ಕ್ರಿಕೆಟ್ ಅಭಿಮಾನಿಗಳು ಮಾತ್ರ ಇದು ಸ್ಟಾರ್ ಬೌಲರ್‌ಗೆ ಮಾಡಿದ ಅಪಮಾನ ಎಂದು ತಂಡದ ಮ್ಯಾನೆಜ್‌ಮೆಂಟ್ ವಿರುದ್ಧ ಕಿಡಿಕಾರುತ್ತಿದ್ದಾರೆ.
ಅಭಿಮಾನಿಗಳ ಆಕ್ರೋಶ
ಅವರನ್ನು ಹೀಗೆ ವಿನಾಕಾರಣ ತಂಡಕ್ಕೆ ಸೇರಿಸಿಕೊಂಡು ಕೈಬಿಡುವುದಾದ್ರೆ ಅವರನ್ನು ಯಾವ ಕಾರಣಕ್ಕೆ ಆಯ್ಕೆ ಮಾಡಬೇಕಿತ್ತು ಎಂದು ಪ್ರಶ್ನಿಸುತ್ತಿದ್ದಾರೆ. ಹೆಡಿಂಗ್ಲಿಯಲ್ಲಿಯ ಲೀಡ್ಸ್ ಸೋಲಿನ ಬಳಿಕ ಟೀಂ ಇಂಡಿಯಾಗೆ ಬುಮ್ರಾ ಅವರಿಗೆ ಸಾಥ್ ನೀಡಬಲ್ಲ ಅನುಭವಿ ವೇಗಿಯನ್ನು ಕರೆತರುವ ನಿರ್ಧಾರ ಏನಾದ್ರು ಟೀಂ ಮ್ಯಾನೆಜ್‌ಮೆಂಟ್ ಕಡೆಯಿಂದ ನಡೆಯುತ್ತಿದೆಯಾ ಎಂಬ ಪ್ರಶ್ನೆಗಳು ಉಂಟಾಗಿದೆ.
ಮೊಹಮ್ಮದ್ ಶಮಿ ಫಿಟ್ ಆದ್ರಾ?
ಸದ್ಯ, ಗಾಯಗೊಂಡಿದ್ದ ಹಿರಿಯ ಅನುಭವಿ ವೇಗಿ ಮೊಹಮ್ಮದ್ ಶಮಿ ಬಹುತೇಕ ಚೇತರಿಸಿಕೊಂಡಿದ್ದಾರೆ. ಅವರು ಫಿಟ್ ಆಗಿದ್ದು, ಅವರನ್ನೇ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಾಧ್ಯತೆಗಳು ಇದೆಯಾ? ಎಂಬುದನ್ನು ಕಾದುನೋಡಬೇಕಿದೆ. ಒಂದುವೇಳೆ ಅವರು ಸಂಪೂರ್ಣ ಫಿಟ್ ಆಗಿದ್ದು, ಅವರನ್ನೇ ರಾಣಾ ಬದಲು ಆಯ್ಕೆ ಮಾಡಿದ್ರೆ, ಮುಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಆಡುವುದು ನಿಶ್ಚಿತ.
ನ್ಯೂಸ್ 18 ಕನ್ನಡ ಕ್ರೀಡಾ ವಿಭಾಗದಲ್ಲಿ ಕ್ರಿಕೆಟ್ ಅಪ್ಡೇಟ್ಸ್, ಮ್ಯಾಚ್ ಅಪ್ಡೇಟ್ಸ್, ಮ್ಯಾಚ್ ರಿವೀವ್ಸ್, ಲೈವ್ ಸ್ಕೋರ್ಗಳು, ಪಂದ್ಯ ವಿಶ್ಲೇಷಣೆ, ಆಟಗಾರರ ಪ್ರೊಫೈಲ್ಗಳು ಮತ್ತು ಇತರ ಕ್ರೀಡೆಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಪಡೆಯಿರಿ. ಹೆಚ್ಚಿನ ಸುದ್ದಿಗಳಿಗಾಗಿ ನ್ಯೂಸ್ 18 ಕನ್ನಡ ಫಾಲೋ ಮಾಡಿ
June 25, 2025 10:48 PM IST