Dakshina Kannada: ಹೆಚ್ಚಾದ ಬಿಸಿಲು- ವಿದ್ಯಾರ್ಥಿಗಳಿಂದ ಪಕ್ಷಿಗಳಿಗೆ ನೀರುಣಿಸುವ ಕಾರ್ಯ! | Dakshina Kannada students offer water to the birds in summer season

Dakshina Kannada: ಹೆಚ್ಚಾದ ಬಿಸಿಲು- ವಿದ್ಯಾರ್ಥಿಗಳಿಂದ ಪಕ್ಷಿಗಳಿಗೆ ನೀರುಣಿಸುವ ಕಾರ್ಯ! | Dakshina Kannada students offer water to the birds in summer season

Last Updated:

ಪರಿಸರ ಸ್ನೇಹಿ ನೀರುಣಿಸುವ ಹಾಗೂ ಆಹಾರ ಇಡುವ ಪಾತ್ರೆಗಳನ್ನು ತಯಾರಿಸಿ ಶಾಲಾ ಪರಿಸರ, ವಿದ್ಯಾರ್ಥಿಗಳ ಮನೆಗಳ ಸುತ್ತ ಹಾಗೂ ನೆರೆಹೊರೆಯ ಮನೆಗಳ ಸುತ್ತ ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರುಣಿಸುವುದರ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ(Dakshina Kannada District) ಸುಡುಬಿಸಿಲು ಜನರ ನೆತ್ತಿ ಸುಡುತ್ತಿದೆ. ಮಧ್ಯಾಹ್ನ ಬೆಂಕಿಯುಗುಳುವ ಬಿಸಿಲು ಜನರನ್ನು ಹೈರಾಣಾಗಿಸುತ್ತಿದೆ. ಮನುಷ್ಯರ ಸ್ಥಿತಿ ಹೀಗಾದ್ರೆ, ಇನ್ನು ಪ್ರಾಣಿ- ಪಕ್ಷಿಗಳ‌ ಸ್ಥಿತಿ ಹೇಳೋದೇ ಬೇಡ. ಬಿಸಿಲಿನ ತಾಪ ‌ಪ್ರಾಣಿ -ಪಕ್ಷಿಗಳ(Animals and Birds) ಜೀವಕ್ಕೆ ಸಂಚಕಾರ ತಂದಿದೆ. ಪಕ್ಷಿಗಳಿಗೆ ನೀರು ಉಣಿಸುವ ವಿಶೇಷ ಪ್ರಯತ್ನ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಮೊಡಂಕಾಪುನಲ್ಲಿ ನಡೆದಿದೆ. ವಿದ್ಯಾರ್ಥಿಗಳಿಗೆ(Students) ಪಕ್ಷಿ ವೀಕ್ಷಣೆಯ ಹವ್ಯಾಸ ಬೆಳೆಸುವ ಜತೆಗೆ ಪಕ್ಷಿಗಳ ಕುರಿತು ಕುತೂಹಲ ಮೂಡಿಸುವ ನಿಟ್ಟಿನಲ್ಲಿ ಬಿ.ಸಿ.ರೋಡಿನ ಮೊಡಂಕಾಪು ಕಾರ್ಮೆಲ್ ಪ್ರೌಢಶಾಲೆಯಲ್ಲಿ ʼಚಿಂವ್ ಚಿಂವ್ʼ ಅಭಿಯಾನ ನಡೆದಿದೆ.

ಈ ಅಭಿಯಾನದ ಮೂಲಕ ಪಕ್ಷಿಗಳಿಗೆ ನೀರು ಕುಡಿಯಲು ಶೂನ್ಯ ಖರ್ಚಿನಲ್ಲಿ ಪರಿಸರ ಸ್ನೇಹಿ ನೀರು-ಆಹಾರ ಘಟಕಗಳನ್ನು ರಚಿಸಲಾಗುತ್ತಿದೆ. ಈ ಬಾರಿ 5ನೇ ವರ್ಷದಲ್ಲಿ ಶಾಲೆಯ 117 ವಿದ್ಯಾರ್ಥಿಗಳು ತೆಂಗಿನ ಗೆರಟೆಯನ್ನು ಉಪಯೋಗಿಸಿ 252 ನೀರುಣಿಸುವ ಪಾತ್ರೆಗಳನ್ನು ಮಾಡಿ ಮರಗಿಡಗಳಲ್ಲಿ ಅಳವಡಿಸುವ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: Cancer: ನೆಚ್ಚಿನ ಶಿಕ್ಷಕನಿಗೆ ಮಾರಕ ಕ್ಯಾನ್ಸರ್- ‌ ನೆರವಿಗಾಗಿ ಬೀದಿಗಿಳಿದ ವಿದ್ಯಾರ್ಥಿಗಳು & ಶಿಕ್ಷಕ ವೃಂದ

ಶಾಲೆಯ ಹಸಿರು ಭವಿಷ್ಯ ಪರಿಸರ ಸಂಘದ ಮಾರ್ಗದರ್ಶಿ ಶಿಕ್ಷಕ ರೋಶನ್ ಪಿಂಟೋ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯ ನಡೆಯುತ್ತಿದೆ. ಪರಿಸರ ಸ್ನೇಹಿ ನೀರುಣಿಸುವ ಹಾಗೂ ಆಹಾರ ಇಡುವ ಪಾತ್ರೆಗಳನ್ನು ತಯಾರಿಸಿ ಶಾಲಾ ಪರಿಸರ, ವಿದ್ಯಾರ್ಥಿಗಳ ಮನೆಗಳ ಸುತ್ತ ಹಾಗೂ ನೆರೆಹೊರೆಯ ಮನೆಗಳ ಸುತ್ತ ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರುಣಿಸುವುದರ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಈ ಚಟುವಟಿಕೆಯ ಜತೆಗೆ ವಿದ್ಯಾರ್ಥಿಗಳಿಗೆ ಪಕ್ಷಿ ವೀಕ್ಷಣೆ, ಅದರ ಕುರಿತು ಕುತೂಹಲ ಮೂಡಿಸಲು ಘಟಕಗಳಲ್ಲಿ ಪಕ್ಷಿಗಳು ನೀರು, ಆಹಾರವನ್ನು ತಿನ್ನುವಾಗ ಫೋಟೋಗಳನ್ನು ತೆಗೆಯುವ ಸ್ಪರ್ಧೆಯನ್ನೂ ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಗುತ್ತಿದೆ.

ಶಾಲಾ ಶಿಕ್ಷಕ-ವಿದ್ಯಾರ್ಥಿಗಳ ಈ ಪ್ರಯತ್ನ ಬಲುದೊಡ್ಡ ಪರಿಣಾಮವನ್ನು ಬೀರಿದ್ದು, ಶಾಲಾ ಪರಿಸರದ ಮರಗಳಲ್ಲಿ ಅಳವಡಿಸಿರುವ ನೀರಿನ ಘಟಕದಲ್ಲಿ ಹೆಚ್ಚಿನ ಪಕ್ಷಿಗಳು ಬಂದು ನೀರು ಕುಡಿಯುವ ದೃಶ್ಯಗಳು ಕಂಡುಬಂದಿದೆ. ಶಾಲೆಯ ಹಸಿರು ಭವಿಷ್ಯ ಪರಿಸರ ಸಂಘ ಆಯೋಜಿಸಿದ್ದ ಈ ಬಾರಿಯ ಚಿಂವ್ ಚಿಂವ್ ಅಭಿಯಾನದ ಮೂಲಕ ಹವಾಮಾನ ಬದಲಾವಣೆ ಹಾಗೂ ತಾಪಮಾನ ಹೆಚ್ಚಾದಂತೆ ಪಕ್ಷಿಗಳು ತಮ್ಮ ಆಹಾರ ಮತ್ತು ವಲಸೆಯ ನಡವಳಿಕೆಯನ್ನು ಬದಲಾಯಿಸುತ್ತವೆ. ಅವುಗಳ ನಡವಳಿಕೆಗಳನ್ನು ಅಧ್ಯಯನ ಮಾಡಿದಾಗ ಹವಾಮಾನ ಬದಲಾವಣೆಯ ಅರಿವಾಗುವ ಉದ್ದೇಶವನ್ನು ಹೊಂದಲಾಗಿದೆ‌.