Airtel-Google: ಏರ್‌ಟೆಲ್-ಗೂಗಲ್ ಒಪ್ಪಂದ; ಗ್ರಾಹಕರಿಗೆ 6 ತಿಂಗಳ ಉಚಿತ 100GB ಕ್ಲೌಡ್ ಸ್ಟೋರೇಜ್! | Airtel Google Deal 6 Months Free 100GB Cloud Storage

Airtel-Google: ಏರ್‌ಟೆಲ್-ಗೂಗಲ್ ಒಪ್ಪಂದ; ಗ್ರಾಹಕರಿಗೆ 6 ತಿಂಗಳ ಉಚಿತ 100GB ಕ್ಲೌಡ್ ಸ್ಟೋರೇಜ್! | Airtel Google Deal 6 Months Free 100GB Cloud Storage

ಇದನ್ನು ಪಡೆಯೋದು ಹೇಗೆ?

ಈ ಅವಕಾಶವನ್ನು ಪಡೆಯಲು ಗ್ರಾಹಕರು ಕೇವಲ Airtel Thanks App ಅನ್ನು ಓಪನ್ ಮಾಡಿ ಸಬ್ಸ್ಕ್ರಿಪ್ಶನ್‌ ಆಕ್ಟಿವೇಟ್ ಮಾಡಬೇಕು. ಆಕ್ಟಿವೇಶನ್ ಆದ ದಿನದಿಂದಲೇ ಆರು ತಿಂಗಳ ಕಾಲ ಯಾವುದೇ ಶುಲ್ಕವಿಲ್ಲದೆ ಸೇವೆ ಲಭ್ಯವಾಗುತ್ತದೆ. ಆರು ತಿಂಗಳ ನಂತರ, ಈ ಸೇವೆಯನ್ನು ಮುಂದುವರಿಸಲು ಗ್ರಾಹಕರು ₹125 ಮಾಸಿಕ ಶುಲ್ಕ ಪಾವತಿಸಬೇಕು. ಇಚ್ಛೆಯಿದ್ದರೆ ಬಳಕೆದಾರರು ಸಬ್‌ಸ್ಕ್ರಿಪ್ಷನ್ ನಿಲ್ಲಿಸಬಹುದಾಗಿದೆ.

ಈ ಬಗ್ಗೆ ಏರ್‌ಟೆಲ್‌ನ ಮಾರ್ಕೆಟಿಂಗ್ ನಿರ್ದೇಶಕ ಸಿದ್ಧಾರ್ಥ್ ಶರ್ಮಾ ಹೇಳಿದ್ದಾರೆ: “ಈ ದಶಕದಲ್ಲಿ ಸ್ಮಾರ್ಟ್‌ಫೋನ್‌ಗಳು ವೈಯಕ್ತಿಕ ಮತ್ತು ವೃತ್ತಿಪರ ಡೇಟಾ ನಿರ್ವಹಣೆಗೆ ಅತಿ ಮುಖ್ಯವಾದ ಸಾಧನಗಳಾಗಿ ಪರಿಣಮಿಸುತ್ತಿವೆ. ನಮ್ಮ ಗ್ರಾಹಕರಿಗೆ ಸುಲಭ, ಸುರಕ್ಷಿತ ಹಾಗೂ ನಂಬಿಕೆಬದ್ಧ ಸ್ಟೋರೇಜ್ ಪರಿಹಾರ ಒದಗಿಸಲು ಗೂಗಲ್‌ನೊಂದಿಗೆ ಕೈಜೋಡಿಸಿದ್ದೇವೆ.”

ಗೂಗಲ್‌ನ ಉಪಾಧ್ಯಕ್ಷ ಕರೆನ್ ಟಿಯೋ ಅವರು, “ಭಾರತದ ಲಕ್ಷಾಂತರ ಜನರಿಗೆ ಗೂಗಲ್ ವನ್ ಸೌಲಭ್ಯವನ್ನು ಒದಗಿಸಲು ಏರ್‌ಟೆಲ್‌ ಜೊತೆಗೆ ಸಹಕರಿಸಲು ಹೆಮ್ಮೆಪಡುತ್ತಿದ್ದೇವೆ” ಎಂದಿದ್ದಾರೆ.

ಗೂಗಲ್ ವನ್ ಸೇವೆಯು ಗೌಣ ಉಪಯೋಗಗಳೊಂದಿಗೆ ಫೋಟೋಗಳು, ವೀಡಿಯೋಗಳು, ಡಾಕ್ಯುಮೆಂಟ್‌ಗಳು, ಜಿಮೇಲ್ ಹಾಗೂ ಡ್ರೈವ್‌ ಡೇಟಾಗಳನ್ನು ಕ್ಲೌಡ್‌ನಲ್ಲಿ ಸುರಕ್ಷಿತವಾಗಿ ಸ್ಟೋರ್‌ ಮಾಡುವುದು, ನವೀನ ಫೋನ್‌ಗಳಿಗೆ ಡೇಟಾ ಸ್ಥಳಾಂತರ ಮಾಡುವುದು, ಹಾಗೂ ವಾಟ್ಸಾಪ್‌ ಚಾಟ್‌ಗಳನ್ನು ಬ್ಯಾಕಪ್‌ ಮಾಡುವುದು ಸೇರಿದಂತೆ ಹಲವಾರು ಉಪಯೋಗಗಳನ್ನು ಒಳಗೊಂಡಿದೆ. ಈ ಮೂಲಕ, ಗೂಗಲ್ ವನ್ ಮತ್ತು ಏರ್‌ಟೆಲ್ ಸಂಧಾನವು ಡಿಜಿಟಲ್ ಯುಗದಲ್ಲಿ ಸ್ಟೋರೇಜ್ ಸಮಸ್ಯೆಗೆ ಉತ್ತಮ ಪರಿಹಾರವಾಗಿ ಕಾರ್ಯನಿರ್ವಹಿಸಲಿದೆ.

ಗೂಗಲ್ ವನ್ ಕುರಿತು

ಗೂಗಲ್ ವನ್ ಎಂಬುದು ಒಂದು ಸಬ್‌ಸ್ಕ್ರಿಪ್ಶನ್‌ ಸದಸ್ಯತ್ವವಾಗಿದ್ದು ಇದು ಬಳಕೆದಾರರು ಗೂಗಲ್‌ನಿಂದ ಹೆಚ್ಚಿನದ್ದನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಗೂಗಲ್ ವನ್ ಪ್ಲ್ಯಾನ್‌ಗಳು ಬಳಕೆದಾರರಿಗೆ ಗೂಗಲ್‌ ಫೋಟೋಸ್‌, ಗೂಗಲ್ ಡ್ರೈವ್ ಹಾಗೂ ಜಿಮೇಲ್‌ನಲ್ಲಿ ಹೆಚ್ಚಿನದ್ದನ್ನು ಸಂಗ್ರಹಿಸುವುದಕ್ಕೆ ಅವಕಾಶ ನೀಡುವ ಮೂಲಕ ಅವರ ಫೋಟೋಗಳು, ವಿಡಿಯೋಗಳು, ಫೈಲ್‌ಗಳು ಮತ್ತು ಹೆಚ್ಚಿನವುಗಳಿಗೆ ಕ್ಲೌಡ್‌ ಸ್ಟೋರೇಜ್‌ ಅನ್ನು ಒದಗಿಸುತ್ತದೆ. ಗೂಗಲ್ ವನ್ ಸದಸ್ಯರು ತಮ್ಮ ಸ್ಟೋರೇಜ್‌ ಅನ್ನು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಐದು ಜನರೊಂದಿಗೆ ಹಂಚಿಕೊಳ್ಳಬಹುದು. ಗೂಗಲ್ ವನ್ ಸುರಕ್ಷಿತ ಸಂಗ್ರಹಣೆಯ ಜೊತೆಗೆ ಬಳಕೆದಾರರಿಗೆ ಗೂಗಲ್ ಎಐನ ಉತ್ತಮತೆಯನ್ನು ತಲುಪಿಸುವ ಯೋಜನಗಳನ್ನು ಕೂಡಾ ಒದಗಿಸುತ್ತದೆ.