ಮೇಳ ಹೊರಡುವ ದಿನದ ಸಂಜೆ ದೇವಿಯ ಸನ್ನಿಧಿಯಲ್ಲಿ ಎಲ್ಲಾ ಆರು ಮೇಳಗಳ ಪ್ರಧಾನ ಭಾಗವತರು ದೇವಸ್ತುತಿ ಭಾಗವತಿಕೆ ನಡೆಸಿದ್ದಾರೆ. ಈ ವೇಳೆ ಆರಂಭ ಸಂಭ್ರಮದ ಸೇವೆಯಾಟಕ್ಕೆ ಪೂರ್ವಭಾವಿಯಾಗಿ ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಅವರ ಸಮಕ್ಷಮ ಆರು ಮೇಳಗಳ ತಲಾ ಇಬ್ಬರಂತೆ 12 ಕಲಾವಿದರಿಗೆ ಗೆಜ್ಜೆ ಹಸ್ತಾಂತರಿಸಲಾಗಿದೆ. ಈ ವೇಳೆ ದೇಗುಲದ ಅನುವಂಶಿಕ ಮೊಕ್ತೇಸ್ವರ ಹಾಗೂ ಅರ್ಚಕ ವಾಸುದೇವ ಅಸ್ರಣ್ಣ, ಆಡಳಿತ ಸಮಿತಿ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು ಸಾಕ್ಷಿಯಾಗಿದ್ದರು.
ಗೆಜ್ಜೆ ಕಟ್ಟಿದ ಕಲಾವಿದರು ಹಿಮ್ಮೇಳ ಸಹಿತ ಎಲ್ಲಾ ಮೇಳಗಳ ಭಾಗವತರ ಸ್ತುತಿಗೆ ಶ್ರೀದೇವಿ ಹಾಗೂ ಮಹಾಗಣಪತಿಯ ಸನ್ನಿಧಿ ಎದುರು ಹೆಜ್ಜೆ ಹಾಕಿ ನಾಟ್ಯ ಸೇವೆ ಮಾಡಿದ್ದಾರೆ. ದೇವಳದ ಎದುರು ಆರು ಮಂಟಪಗಳಲ್ಲಿ ಆರು ಮೇಳಗಳ ಪೂರ್ವರಂಗ ಪ್ರದರ್ಶನ ಮತ್ತು ಸೂರ್ಯೋದಯದವರೆಗೆ ಪಾಂಡಪಾಶ್ವಮೇಧ ಪ್ರಸಂಗ ನಡೆದಿದೆ. ಕಟೀಲು ಆರು ಮೇಳದ ಯಕ್ಷಗಾನ ಮುಂದಿನ ಇಪ್ಪತ್ತು ವರ್ಷದವರೆಗೆ ಈಗಾಗಲೇ ಬುಕ್ಕಿಂಗ್ ಆಗಿದೆ. ಸುಮಾರು 600 ರಷ್ಟು ಶ್ರಿದೇವಿ ಮಹಾತ್ಮೆ ಪ್ರಸಂಗಗಳೇ ನಡೆಯುವುದು ವಿಶೇಷ..
ಶ್ರೀ ದೇವಿ ಮಹಾತ್ಮೆ ಪ್ರಸಂಗದ ಪ್ರಮುಖ ಪಾತ್ರಗಳು ಈ ವರ್ಷ ಈ ರೀತಿಯಾಗಿದೆ.
ಒಂದನೇ ಮೇಳ
ದೇವಿ-ರಾಜೇಶ್ ಬೆಳ್ಳಾರೆ
ಮಹಿಷಾಸುರ-ಸುರೇಶ್ ಕುಪ್ಪೆಪದವು
ರಕ್ತಬೀಜ-ಗಣೇಶ್ ಶೆಟ್ಟಿ ಕನ್ನಡಿಕಟ್ಟೆ
ಇದನ್ನೂ ಓದಿ: Cauvery Arati: ತಲಕಾಡಿನ ನಿಸರ್ಗಧಾಮದಲ್ಲಿ ನಡೆದ ಕಾವೇರಿ ಆರತಿ- ಕಣ್ತುಂಬಿಕೊಂಡ ಸಾವಿರಾರು ಭಕ್ತರು
ಎರಡನೇ ಮೇಳ
ದೇವಿ-ಪ್ರಶಾಂತ್ ಶೆಟ್ಟಿ ನೆಲ್ಯಾಡಿ
ಮಹಿಷಾಸುರ-ಉಮೇಶ್ ಕುಪ್ಪೆಪದವು
ರಕ್ತಬೀಜ-ಜನಾರ್ದನ ಕೊಕ್ಕಡ
ಮೂರನೇ ಮೇಳ
ದೇವಿ-ಗುರುತೇಜ ಶೆಟ್ಟಿ
ಮಹಿಷಾಸುರ-ಹರಿನಾರಾಯಣ ಭಟ್
ರಕ್ತಬೀಜ-ಅಮ್ಮುಂಜೆ ಮೋಹನ್
ನಾಲ್ಕನೇ ಮೇಳ
ದೇವಿ-ಸಂದೀಪ್ ಕೊಳ್ಯೂರು
ಮಹಿಷಾಸುರ-ನಗ್ರಿ ಮಹಾಬಲ ರೈ
ರಕ್ತಬೀಜ-ಗಣೇಶ್ ಚಂದ್ರಮಂಡಲ
ಐದನೇ ಮೇಳ
ದೇವಿ-ಮಹೇಶ್ ಸಾಣೂರು
ಮಹಿಷಾಸುರ-ಯಶೋಧರ ಗೌಡ
ರಕ್ತ ಬೀಜ-ಸುಣ್ಣಂಬಳ ವಿಶ್ವೇಶ್ವರ ಭಟ್
ಆರನೇ ಮೇಳ
ದೇವಿ-ಅರುಣ್ ಕೋಟ್ಯಾನ್
ಮಹಿಷಾಸುರ-ಬಾಲಕೃಷ್ಣ ಮಿಜಾರ್
ರಕ್ತಬೀಜ-ಅರಳ ಗಣೇಶ್ ಶೆಟ್ಟಿ
Dakshina Kannada,Karnataka
November 27, 2024 5:06 PM IST