Last Updated:
ಇಂಟರ್ನೆಟ್ ಮತ್ತು ಸ್ಮಾರ್ಟ್ಫೋನ್ ಬಳಕೆ ಹೆಚ್ಚಿದಂತೆ ಮಾಲ್ವೇರ್ ಅಪಾಯವೂ ಹೆಚ್ಚಾಗಿದೆ. ಸುರಕ್ಷತೆಗಾಗಿ ಸಾಫ್ಟ್ವೇರ್ ಅಪ್ಡೇಟ್ ಮಾಡುವುದು, ಲಿಂಕ್ಗಳನ್ನು ಪರಿಶೀಲಿಸುವುದು ಮುಖ್ಯ.
ಸದ್ಯದ ಪರಿಸ್ಥಿತಿಯಲ್ಲಿ ಜನರು ಊಟ-ತಿಂಡಿ ಬೇಕಾದರೂ ಬಿಟ್ಟಿರುತ್ತಾರೆ ಇಂಟರ್ನೆಟ್ (Internet) ಮತ್ತು ಸ್ಮಾರ್ಟ್ಫೋನ್ (Smartphone) ಮಾತ್ರ ಬಿಟ್ಟಿರಲು ಸಾಧ್ಯವಿಲ್ಲ. ಮಾನವನ ಮೂಲ ಅಗತ್ಯತೆಗಳಾದ ಆಶ್ರಯ, ಊಟ (Meals), ಬಟ್ಟೆ ಜತೆಯಲ್ಲಿ ಮೊಬೈಲ್ (Mobile) ಮತ್ತು ಇಂಟರ್ನೆಟ್ ಸೇರಿ ಬಹಳಷ್ಟು ವರ್ಷಗಳಾಗಿವೆ. ಇನ್ನು ಎಲ್ಲರೂ ಇಂಟರ್ನೆಟ್ ಸುರಕ್ಷಿತ ಎಂದು ಭಾವಿಸುತ್ತಾರೆ. ನಾವು ವಿಸಿಟ್ ಮಾಡುವ ವೆಬ್ಸೈಟ್, ಬಳಸುವ ಅಪ್ಲಿಕೇಶನ್ ಎಲ್ಲವೂ ಸಹ ಸುರಕ್ಷಿತ, ಪ್ರಮಾಣಿಕ ಎಂದೇ ಭಾವಿಸುವುದು ಎಲ್ಲರ ಮನಸ್ಥಿತಿ. ಆ ಸಮಯಕ್ಕೆ ತಕ್ಕಂತೆ ಬಳಕೆ ಆದರೂ ಸಾಕು. ಯಾವುದರ ಬಗ್ಗೆಯೂ ಏನು ತಲೆಕೆಡಿಸಿಕೊಳ್ಳದ ಮನಸ್ಥಿತಿಯಲ್ಲಿ ಇರುತ್ತಾರೆ. ಆದರೆ ಈ ನಂಬಿಕೆಗಳೆಲ್ಲವನ್ನು ಅಲ್ಲಗಳೆಯುವ, ಸುಳ್ಳು ಮಾಡುವ ಆನ್ಲೈನ್ ಕ್ರಿಮಿನಲ್ಗಳು, ಹ್ಯಾಕರ್ಗಳು ಸಮಾಜದಲ್ಲಿ ಇದ್ದಾರೆ. ಈ ಸಾಲಿನಲ್ಲಿ ಇರುವುದೇ ಮಾಲ್ವೇರ್.
ಮಾಲ್ವೇರ್ನಿಂದ ಸ್ಮಾರ್ಟ್ಫೋನ್, ಕಂಪ್ಯೂಟರ್ ಮಾತ್ರವಲ್ಲದೇ ನೀವು ನಿಮ್ಮನ್ನು ಸುರಕ್ಷಿತಗೊಳಿಸಿಕೊಳ್ಳಬೇಕು ಎಂದರೆ ಮಾಲ್ವೇರ್ ಎಂದರೇನು, ಅದು ಹೇಗೆ ನಿಮಗೆ ಹಂಚಲ್ಪಡುತ್ತದೆ, ಮಾಲ್ವೇರ್ ಹರಡುವುದನ್ನು ತಡೆಗಟ್ಟುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಬೇಕು. ಮಾಲ್ವೇರ್ ಎಂಬುದು ಒಂದು ರೀತಿಯ ಸಾಫ್ಟ್ವೇರ್. ಇದನ್ನು ಕಂಪ್ಯೂಟರ್, ಲ್ಯಾಪ್ಟಾಪ್, ಸ್ಮಾರ್ಟ್ಫೋನ್, ಟ್ಯಾಬ್, ಹೀಗೆ ಹಲವು ರೀತಿಯ ಸಾಫ್ಟ್ವೇರ್ ಆಧಾರಿತ ಗ್ಯಾಜೆಟ್ಗಳಿಗೆ ಸಮಸ್ಯೆಯೊಡ್ಡಲು ಡೆವಲಪ್ ಮಾಡಲಾಗಿದೆ. ಮಾಲ್ವೇರ್ಗಳು ನಿಮ್ಮ ಯಾವುದೇ ಈ ಇಲೆಕ್ಟ್ರಾನಿಕ್ಸ್ ಗ್ಯಾಜೆಟ್ಗಳಲ್ಲಿನ ಸೂಕ್ಷ್ಮ ವಿಚಾರಗಳನ್ನು ಕದಿಯಬಹುದು.
ವೈರಸ್ – ಹಾನಿಕಾರಕ ಕಂಪ್ಯೂಟರ್ ಪ್ರೋಗ್ರಾಮ್. ಇದು ಸಿಸ್ಟಮ್ನಲ್ಲಿನ ಡಾಟಾ ಕಾಪಿ ಮಾಡಿಕೊಳ್ಳಬಲ್ಲದು, ಕಂಪ್ಯೂಟರ್ಗೆ ಹಾನಿ ಮಾಡಬಲ್ಲದು. Worm – ದುರುದ್ದೇಶಪೂರಿತ ಕಂಪ್ಯೂಟರ್ ಪ್ರೋಗ್ರಾಮ್ ಆಗಿದ್ದು, ಇತರೆ ಕಂಪ್ಯೂಟರ್ಗಳಿಗೆ ಕಾಪಿಗಳನ್ನು ಕಳುಹಿಸಬಲ್ಲದು. ಸ್ಪೈವೇರ್ – ಕಂಪ್ಯೂಟರ್ನಲ್ಲಿ ನಿಮಗೆ ಗೊತ್ತಿಲ್ಲದಂತೆ ಸೂಕ್ಷ್ಮ ಡಾಟಾ ಸಂಗ್ರಹಿಸಬಲ್ಲದು.
ಇಂಟರ್ನೆಟ್ನಲ್ಲಿ ಉಚಿತ ಸಾಫ್ಟ್ವೇರ್ ಗಳ ಮೂಲಕ ಸೀಕ್ರೇಟ್ ಆಗಿ ಮಾಲ್ವೇರ್ ಬರಬಹುದು. ಸಾಫ್ಟ್ವೇರ್ಗಳ ಗುಂಪುಗಳೊಂದಿಗೆ ಮಾಲ್ವೇರ್ ಬರಬಹುದು. ಮಾಲ್ವೇರ್ನಿಂದ ಹಾನಿಗೊಳಗಾದ ವೆಬ್ಸೈಟ್ಗೆ ಭೇಟಿ ನೀಡುವುದರಿಂದ ಮಾಲ್ವೇರ್ ಬರಬಹುದು. ಫೇಕ್ ಎರರ್ ಮೆಸೇಜ್ ಅಥವಾ ಪಾಪಪ್ ವಿಂಡೋ ಮೇಲೆ ಕ್ಲಿಕ್ ಮಾಡುವ ಮೂಲಕ ಮಾಲ್ವೇರ್ ಡೌನ್ಲೋಡ್ ಆಗಬಹುದು. ಮಾಲ್ವೇರ್ ಇರುವ ಇಮೇಲ್ ಅಟ್ಯಾಚ್ಮೆಂಟ್ ಓಪನ್ ಮಾಡುವುದರಿಂದ ಮಾಲ್ವೇರ್ ಹರಡುತ್ತದೆ.
ನಿಮ್ಮ ಕಂಪ್ಯೂಟರ್, ಸ್ಮಾರ್ಟ್ಫೋನ್ ಅನ್ನು ಹಾಗೂ ಅವುಗಳಲ್ಲಿನ ಸಾಫ್ಟ್ವೇರ್ಗಳನ್ನು ಅಪ್ಡೇಟ್ ಮಾಡುತ್ತಿರಿ. ಕೆಲವು ಓಎಸ್ಗಳು ಮಲ್ಟಿಪಲ್ ಅಕೌಂಟ್ಗಳನ್ನು ಬಳಕೆ ಮಾಡಲು ಅವಕಾಶ ನೀಡುತ್ತವೆ. ಒಂದೊಂದು ಅಕೌಂಟ್ಗೆ ಒಂದೊಂದು ರೀತಿ ಸೆಟ್ಟಿಂಗ್ ಮಾಡಿಕೊಳ್ಳಬಹುದು. ಇದನ್ನು ಪ್ರಯತ್ನ ಮಾಡಿರಿ. ನಾನ್ ಅಡ್ಮಿನಿಸ್ಟ್ರೇಟರ್ ಅಕೌಂಟ್ ಬಳಕೆ ಮಾಡಿ. ಹಾಗೆಯೇ ಯಾವುದೇ ಲಿಂಕ್ ಕ್ಲಿಕ್ ಮಾಡುವ ಮೊದಲು, ಸಾಫ್ಟ್ವೇರ್, ಅಪ್ಲಿಕೇಶನ್ ಡೌನ್ಲೋಡ್ ಮಾಡುವ ಮೊದಲು ಪರಿಶೀಲಿಸಿ, ಯೋಚಿಸಿ. ಇಮೇಲ್ ಹಾಗೂ ಇಮೇಜ್ ಅಟ್ಯಾಚ್ಮೆಂಟ್ಗಳನ್ನು ಓಪನ್ ಮಾಡುವ ಮೊದಲು ಎಚ್ಚರವಾಗಿರಿ. ಪಾಪಪ್ ಆಗುವ ವಿಂಡೋಗಳು, ಸಾಫ್ಟ್ವೇರ್ ಡೌನ್ಲೋಡ್ ಮಾಡಲು ಕೇಳುವ ಲಿಂಕ್ಗಳನ್ನು ನಂಬಬೇಡಿ.
ನ್ಯೂಸ್ 18 ಕನ್ನಡ ಟೆಕ್ನಾಲಜಿ ವಿಭಾಗದಲ್ಲಿ ಸ್ಮಾರ್ಟ್ಫೋನ್ ಬಿಡುಗಡೆ ಮಾಹಿತಿ, ಮೊಬೈಲ್ ವಿಮರ್ಶೆಗಳು, ಗ್ಯಾಜೆಟ್ಗಳು, ತಂತ್ರಜ್ಞಾನ ಸಲಹೆಗಳು, ಇ-ಕಾಮರ್ಸ್ ಮಾರಾಟ, ಆನ್ಲೈನ್ ಶಾಪಿಂಗ್, ಅಪ್ಲಿಕೇಶನ್ಗಳು, ವಾಟ್ಸಾಪ್ ಅಪ್ಡೇಟ್ಸ್, ಎಲೆಕ್ಟ್ರಿಕ್ ವಾಹನಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಪಡೆಯಬಹುದಾಗಿದೆ. ಹೆಚ್ಚಿನ ಸುದ್ದಿಗಳಿಗಾಗಿ ನ್ಯೂಸ್ 18 ಕನ್ನಡ ಫಾಲೋ ಮಾಡಿ
June 27, 2025 12:22 PM IST