Kannada Nudi Habba: ಕನ್ನಡ ಭುವನೇಶ್ವರಿ ರಥಕ್ಕೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭವ್ಯ ಸ್ವಾಗತ! |Kannada Nudi Habba grand welcome for Kannada ratha in Dakshina Kannada

Kannada Nudi Habba: ಕನ್ನಡ ಭುವನೇಶ್ವರಿ ರಥಕ್ಕೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭವ್ಯ ಸ್ವಾಗತ! |Kannada Nudi Habba grand welcome for Kannada ratha in Dakshina Kannada

Last Updated:

Dakshina Kannada Habbaಭವ್ಯವಾಗಿ ನಿರ್ಮಿಸಿರುವ ಈ ರಥದಲ್ಲಿ ಕನ್ನಡದ ಪ್ರಮುಖ ಸಾಹಿತಿಗಳ, ಪ್ರಮುಖ ಕ್ಷೇತ್ರಗಳ ಭಾವಚಿತ್ರಗಳಿವೆ. ರಥದ ಹಿಂಭಾಗದಲ್ಲಿ ಗದ್ದೆ ಉಳುವ ಎತ್ತು ಮತ್ತು ರೈತನ ಕಲಾಕೃತಿ ಇದೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣಕನ್ನಡ: ಡಿಸೆಂಬರ್ 20,21,22 ರಂದು ಮಂಡ್ಯದಲ್ಲಿ(Mandya) ನಡೆಯುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ(87th All India Kannada Literary Conference) ಕನ್ನಡ ಭುವನೇಶ್ವರಿಯ ರಥ ದಕ್ಷಿಣಕನ್ನಡ ಜಿಲ್ಲೆಯನ್ನು(Dakshina Kannada District) ಪ್ರವೇಶಿಸಿದೆ. ಉತ್ತರಕನ್ನಡದ ಶಿರಸಿಯ ಮಾರಿಕಾಂಬ ದೇವಸ್ಥಾನ ಪುಣ್ಯಭೂಮಿಯಿಂದ ಹೊರಟ ಈ ಭುವನೇಶ್ವರಿ ರಥ ಹಲವು ಜಿಲ್ಲೆಗಳನ್ನು ದಾಟಿ ದಕ್ಷಿಣಕನ್ನಡ ಜಿಲ್ಲೆ ಪ್ರವೇಶಿಸಿದೆ. ಜಿಲ್ಲೆಗೆ ಪ್ರವೇಶಿಸಿದ ಈ ಕನ್ನಡ ರಥವನ್ನು ಅಧಿಕಾರಿಗಳು, ಜನಪ್ರತಿನಿಧಿಗಳು, ಸಂಘಸಂಸ್ಥೆಗಳು, ಸಾರ್ವಜನಿಕರು ಸೇರಿ ಅತ್ಯಂತ ಗೌರವಯುತವಾಗಿ ಬರಮಾಡಿಕೊಳ್ಳಲಾಯಿತು.

ಭವ್ಯವಾಗಿ ನಿರ್ಮಿಸಿರುವ ಈ ರಥದಲ್ಲಿ ಕನ್ನಡದ ಪ್ರಮುಖ ಸಾಹಿತಿಗಳ, ಪ್ರಮುಖ ಕ್ಷೇತ್ರಗಳ ಭಾವಚಿತ್ರಗಳಿವೆ. ರಥದ ಹಿಂಭಾಗದಲ್ಲಿ ಗದ್ದೆ ಉಳುವ ಎತ್ತು ಮತ್ತು ರೈತನ ಕಲಾಕೃತಿ, ರಥದ ಮುಂಭಾಗದಲ್ಲಿ ಕನ್ನಡ ಭುವನೇಶ್ವರಿಯ ಭವ್ಯ ಮೂರ್ತಿ, ರಾಜರ್ಷಿ ನಾಲ್ವರು ಕೃಷ್ಣರಾಜ ಒಡೆಯರ್ ಮತ್ತು ವಿಶ್ವೇಶ್ವರಯ್ಯ ಪ್ರತಿಮೆಗಳು ಅಳವಡಿಸಲಾಗಿದೆ.

ಇದನ್ನೂ ಓದಿ: Mysuru: ಕಲಾವಿದನ ಕೈಚಳಕದಲ್ಲಿ ಅರಳಿದ ಕಲಾಕೃತಿಗಳು- ಪ್ರೇಕ್ಷಕರು ಫುಲ್‌ ಫಿದಾ!

ಮೂರು ದಿನಗಳ ಕಾಲ ಮಂಡ್ಯದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದ ಪ್ರಚಾರದ ಅಂಗವಾಗಿ ಈ ರಥವು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸಲಿದೆ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿಗೆ ಆಗಮಿಸಿದ ಈ ಭುವನೇಶ್ವರಿ ರಥ ಪುತ್ತೂರಿನಿಂದ ನೇರವಾಗಿ ಬೆಳ್ತಂಗಡಿ ತೆರಳಿ, ಅಲ್ಲಿಂದ ಧರ್ಮಸ್ಥಳಕ್ಕೆ ತೆರಳಲಿದೆ.

ಧರ್ಮಸ್ಥಳದಿಂದ ನೇರವಾಗಿ ಕಡಬ ತಾಲೂಕಿಗೆ ತೆರಳಿ ಅಲ್ಲಿಂದ ರಥ ಸುಳ್ಯ ಮೂಲಕ ಕೊಡಗು ಜಿಲ್ಲೆಯಲ್ಲಿ ಪ್ರವೇಶಿಸಲಿದೆ. ಕನ್ನಡ ಭುವನೇಶ್ವರಿಯ ಈ ರಥಕ್ಕೆ ಎಲ್ಲಾ ಕಡೆಗಳಲ್ಲಿ ಸರಕಾರಿ ಗೌರವವನ್ನೂ ಸಲ್ಲಿಸಲಾಗುತ್ತಿದ್ದು, ಎಲ್ಲಾ ಸ್ತರದ ಅಧಿಕಾರಿಗಳು,ಸಿಬ್ಬಂಧಿಗಳು ಈ ರಥ ಭೇಟಿ ನೀಡುವ ಪ್ರದೇಶದಲ್ಲಿ ಹಾಜರಿದ್ದು ಗೌರವ ಸಲ್ಲಿಸಲಿದ್ದಾರೆ.