ಪಂದ್ಯ ಶುರುವಾಗುವ ಮುಂಚೆ ಇಂಗ್ಲೆಂಡ್ ತಂಡದ ಮುಖದಲ್ಲಿ ನಗು ಇತ್ತು, ಆದರೆ ಪಂದ್ಯ ಮುಗಿಯೋವಾಗ ಅವರ ಮುಖ ನೋಡಬೇಕಿತ್ತು. ಚೆಂಡನ್ನ ನಿಯಂತ್ರಿಸೋದ್ರಲ್ಲೂ, ಫೀಲ್ಡಿಂಗ್ ಮಾಡೋದ್ರಲ್ಲೂ ಇಂಗ್ಲೆಂಡ್ ಹುಡುಗಿಯರು ಸಿಕ್ಕಾಪಟ್ಟೆ ಕಷ್ಟಪಟ್ಟರು. ಲಾರೆನ್ ಬೆಲ್ ಅವರು 3 ವಿಕೆಟ್ ತೆಗೆದ್ರೂ, ಅದು ಅಂಥಾ ಪರಿಣಾಮ ಬೀರಲಿಲ್ಲ. ಇನ್ನು ಎಮ್ ಆರ್ಲಾಟ್ ಮತ್ತು ಸೋಫಿ ಎಕ್ಲೆಸ್ಟೋನ್ ತಲಾ ಒಂದೊಂದು ವಿಕೆಟ್ ಪಡೆದ್ರೂ, ಅದಕ್ಕೆ ಸಿಕ್ಕಾಪಟ್ಟೆ ರನ್ ಖರ್ಚು ಮಾಡಬೇಕಾಯ್ತು.
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ನಮ್ಮ ಭಾರತದ ಹುಡುಗೀರು ಶುರು ಮಾಡಿದ್ದೇ ಅಬ್ಬರದಿಂದ. 20 ಓವರ್‌ಗಳಲ್ಲಿ ಬರೋಬ್ಬರಿ 210 ರನ್ ಪೇರಿಸಿ ಇಂಗ್ಲೆಂಡ್‌ಗೆ ದಿಗ್ಭ್ರಮೆ ಹುಟ್ಟಿಸಿದ್ರು. ಆರಂಭಿಕ ಆಟಗಾರ್ತಿಯರ ಜೋಡಿ 77 ರನ್‌ಗಳ ಭರ್ಜರಿ ಜೊತೆಯಾಟ ನೀಡಿತು. ಶಫಾಲಿ ವರ್ಮಾ ಸ್ವಲ್ಪ ಬೇಗನೇ ಔಟ್ ಆದ್ರೂ, ನಮ್ಮ ಹೆಮ್ಮೆಯ ‘ಲೇಡಿ ಸೆಹ್ವಾಗ್’ ಸ್ಮೃತಿ ಮಂದಾನಾ ಬ್ಯಾಟ್‌ನಿಂದ ರನ್‌ಗಳ ಸುರಿಮಳೆ ಸುರಿಯಿತು.
ಮಂದಾನಾ ಫಾರ್ಮ್‌ನಲ್ಲಿದ್ರೆ ಎದುರಾಳಿಗಳಿಗೆ ನಡುಕ ಶುರುವಾಗುತ್ತೆ ಅಂತ ಗೊತ್ತಿತ್ತು, ಆದ್ರೆ ಈ ರೀತಿ ಅಬ್ಬರಿಸ್ತಾರೆ ಅಂತ ಯಾರೂ ಊಹಿಸಿರಲಿಲ್ಲ. ಹರ್ಲೀನ್ ಡಿಯೋಲ್ ಜೊತೆ ಸೇರಿ 94 ರನ್‌ಗಳ ಚುರುಕಾದ ಪಾಲುದಾರಿಕೆ ನೀಡಿದ್ರು. ಹರ್ಲೀನ್ ಕೂಡಾ 43 ರನ್ ಸಿಡಿಸಿ ಮಂದಾನಾಗೆ ಒಳ್ಳೆ ಸಾಥ್ ಕೊಟ್ರು. ಇನ್ನು ಮಂದಾನಾ ಆಡಿದ್ದು ಆಡಿದ್ದೇ.
ಇದು ಅವರ ಮೊದಲ T20I ಶತಕ. ಅದೂ ಅಲ್ಲದೆ, ಮಹಿಳಾ ಕ್ರಿಕೆಟ್‌ನ ಎಲ್ಲಾ ಮಾದರಿಗಳಲ್ಲೂ ಶತಕ ಗಳಿಸಿದ ಆಟಗಾರ್ತಿಯರ ವಿಶೇಷ ಕ್ಲಬ್‌ಗೆ ಮಂದಾನಾ ಸೇರಿಕೊಂಡ್ರು. ರಿಚಾ ಘೋಷ್ ಮತ್ತು ದೀಪ್ತಿ ಶರ್ಮಾ ಕೊನೆಯಲ್ಲಿ ಕೆಲವೊಂದು ನಿರ್ಣಾಯಕ ರನ್ ಸೇರಿಸಿ ಭಾರತದ ಮೊತ್ತವನ್ನು 210ಕ್ಕೆ ತಲುಪಿಸಿದ್ರು. ಹರ್ಮನ್‌ಪ್ರೀತ್ ಕೌರ್ ಅವರ 103 ರನ್‌ಗಳ ದಾಖಲೆಯನ್ನೂ ಮಂದಾನಾ ಮುರಿದು ಹಾಕಿದ್ರು.
210 ರನ್ ಅಂದ್ರೆ ಚೇಸ್ ಮಾಡೋದು ಅಷ್ಟು ಸುಲಭವಲ್ಲ. ಅದ್ರಲ್ಲೂ ನಮ್ಮ ಬೌಲರ್‌ಗಳು ಹಾಕಿದ ಪ್ಲಾನ್ ಅಂತೂ ಸೂಪರ್ ಆಗಿತ್ತು. ಇಂಗ್ಲೆಂಡ್ ಬ್ಯಾಟರ್‌ಗಳು ಬೌಂಡರಿ ಬಾರಿಸೋಕೆ ಹೋದ್ರೆ, ಬಾಲ್ ಗಾಳಿಯಲ್ಲೇ ಕಳೆದು ಹೋಗ್ತಿತ್ತು. ಹೊಸ ಬೌಲರ್ ಶ್ರೀ ಚರಣಿ ಅಂತೂ ಅಬ್ಬರಿಸಿದ್ರು. 4 ವಿಕೆಟ್ ಕಿತ್ತು ಇಂಗ್ಲೆಂಡ್‌ಗೆ ಭಾರೀ ಹೊಡೆತ ನೀಡಿದ್ರು. ರಾಧಾ ಯಾದವ್ ಮತ್ತು ದೀಪ್ತಿ ಶರ್ಮಾ ತಲಾ 2 ವಿಕೆಟ್ ಪಡೆದು ಮಿಂಚಿದ್ರೆ, ಅಮನ್‌ಜೋತ್ ಕೌರ್ ಮತ್ತು ಅರುಂಧತಿ ರೆಡ್ಡಿ ಕೂಡಾ ಒಂದೊಂದು ವಿಕೆಟ್ ತೆಗೆದು ಇಂಗ್ಲೆಂಡ್ ಬ್ಯಾಟಿಂಗ್ ಲೈನ್ ಅಪ್‌ಗೆ ಲಗಾಮು ಹಾಕಿದ್ರು.
ಇಂಗ್ಲೆಂಡ್ ಮಹಿಳಾ ತಂಡ ಕೊನೆಗೆ 14.5 ಓವರ್‌ಗಳಿಗೆ 10 ವಿಕೆಟ್ ಕಳೆದುಕೊಂಡು 113 ರನ್ ಅಷ್ಟೇ ಗಳಿಸಿತು. ಇದರ ಮೂಲಕ ಭಾರತ ಮಹಿಳಾ ತಂಡ ಭರ್ಜರಿ 97 ರನ್‌ಗಳ ಗೆಲುವಿನ ಮೂಲಕ ಐತಿಹಾಸಿಕ ಗೆಲುವು ಕಂಡ್ರು.
ಆದ್ರೆ ಉಳಿದ ಯಾರೂ ಅವ್ರಿಗೆ ಬೆಂಬಲ ನೀಡಲಿಲ್ಲ. ಕೊನೆಗೂ ಇಂಗ್ಲೆಂಡ್ ತಂಡ ಭಾರೀ ಸೋಲನು ಅನುಭವಿಸಿತು. ನಮ್ಮ ಹುಡುಗೀರು ಫೀಲ್ಡಿಂಗ್‌ನಲ್ಲಿ ಚುರುಕಾಗಿದ್ದರು. ಸಿಕ್ಕ ಅವಕಾಶಗಳನ್ನು ಒಂದೂ ಬಿಡದೆ ಉಪಯೋಗಿಸಿಕೊಂಡರು.
ನ್ಯೂಸ್ 18 ಕನ್ನಡ ಕ್ರೀಡಾ ವಿಭಾಗದಲ್ಲಿ ಕ್ರಿಕೆಟ್ ಅಪ್ಡೇಟ್ಸ್, ಮ್ಯಾಚ್ ಅಪ್ಡೇಟ್ಸ್, ಮ್ಯಾಚ್ ರಿವೀವ್ಸ್, ಲೈವ್ ಸ್ಕೋರ್ಗಳು, ಪಂದ್ಯ ವಿಶ್ಲೇಷಣೆ, ಆಟಗಾರರ ಪ್ರೊಫೈಲ್ಗಳು ಮತ್ತು ಇತರ ಕ್ರೀಡೆಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಪಡೆಯಿರಿ. ಹೆಚ್ಚಿನ ಸುದ್ದಿಗಳಿಗಾಗಿ ನ್ಯೂಸ್ 18 ಕನ್ನಡ ಫಾಲೋ ಮಾಡಿ
June 29, 2025 7:55 AM IST