IPL 2025: ಪಿಎಸ್​​ಎಲ್​ ಬಿಟ್ಟು ಐಪಿಎಲ್​​ಗೆ ಜಂಪ್! ಪಿಸಿಬಿಯ ಲೀಗಲ್​​ ನೋಟಿಸ್​​ಗೆ ಕಾರ್ಬಿನ್ ಬಾಷ್ ಉತ್ತರವೇನು? | Corbin Bosch Responds to PCB s Legal Action After Snubbing PSL for IPL

IPL 2025: ಪಿಎಸ್​​ಎಲ್​ ಬಿಟ್ಟು ಐಪಿಎಲ್​​ಗೆ ಜಂಪ್! ಪಿಸಿಬಿಯ ಲೀಗಲ್​​ ನೋಟಿಸ್​​ಗೆ ಕಾರ್ಬಿನ್ ಬಾಷ್ ಉತ್ತರವೇನು? | Corbin Bosch Responds to PCB s Legal Action After Snubbing PSL for IPL

Last Updated:

ಐಪಿಎಲ್ 2025 ಆರಂಭಕ್ಕೆ ದಿನಗಣನೆ ಶುರುವಾಗಿದೆ. ಕಾರ್ಬಿನ್ ಬಾಷ್ ಮುಂಬೈ ಇಂಡಿಯನ್ಸ್ ಆಫರ್ ಸ್ವೀಕರಿಸಿ ಪಿಎಸ್‌ಎಲ್‌ನಿಂದ ಹಿಂದೆ ಸರಿದಿದ್ದಾರೆ. ಪಿಸಿಬಿ ಕಾನೂನು ನೋಟಿಸ್ ಜಾರಿ ಮಾಡಿದೆ.

ಕಾರ್ಬಿನ್ ಬಾಷ್ಕಾರ್ಬಿನ್ ಬಾಷ್
ಕಾರ್ಬಿನ್ ಬಾಷ್

ಐಪಿಎಲ್ 2025 (IPL 2025) ಆರಂಭಕ್ಕೆ ದಿನಗಣನೆ ಶುರುವಾಗಿರುವಾಗ, ದಕ್ಷಿಣ ಆಫ್ರಿಕಾದ ವೇಗಿ ಕಾರ್ಬಿನ್ ಬಾಷ್ (Corbin Bosch ) ಮುಂಬೈ ಇಂಡಿಯನ್ಸ್‌ನಿಂದ (IPL) ಆಫರ್ ಪಡೆದ ಬಳಿಕ ಪಾಕಿಸ್ತಾನ ಸೂಪರ್ ಲೀಗ್ (PSL)ನಿಂದ ಹಿಂದೆ ಸರಿದಿದ್ದಾರೆ. ಈ ನಿರ್ಧಾರದಿಂದ ಕೆಂಡಮಂಡಲವಾದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಬಾಷ್‌ಗೆ ಕಾನೂನು ನೋಟಿಸ್ ಜಾರಿ ಮಾಡಿದೆ. ಬಾಷ್ ಇತ್ತೀಚೆಗೆ ಈ ವಿವಾದಕ್ಕೆ ಪ್ರತಿಕ್ರಿಯಿಸಿದ್ದು, ” ಪಿಎಸ್‌ಎಲ್‌ಗೆ ಅಗೌರವ ತೋರಿಸುವ ಉದ್ದೇಶ ನನ್ನದಲ್ಲ. ಮುಂಬೈ ಇಂಡಿಯನ್ಸ್ ಬಲಿಷ್ಠ ಐಪಿಎಲ್ ತಂಡವಷ್ಟೇ ಅಲ್ಲ, ಇತರ ಲೀಗ್‌ಗಳಲ್ಲಿ ಫ್ರಾಂಚೈಸಿಗಳನ್ನು ಹೊಂದಿದೆ. ಇಂತಹ ಆಫರ್ ತಿರಸ್ಕರಿಸಿದರೆ ನನ್ನ ವೃತ್ತಿಜೀವನಕ್ಕೆ ತೊಂದರೆಯಾಗುತ್ತಿತ್ತು. ಐಪಿಎಲ್ ನನ್ನ ಭವಿಷ್ಯಕ್ಕೆ ಗಮನಾರ್ಹ ಪ್ರಯೋಜನ ನೀಡುತ್ತದೆ,” ಎಂದು ಸ್ಪಷ್ಟಪಡಿಸಿದ್ದಾರೆ.

ಪೇಶಾವರ್ ಝಲ್ಮಿ ಸೇರಿದ್ದ ಬಾಷ್

ಪಿಎಸ್‌ಎಲ್ ಫ್ರಾಂಚೈಸಿ ಪೇಶಾವರ್ ಝಲ್ಮಿ ಹರಾಜಿನಲ್ಲಿ ಬಾಷ್‌ನನ್ನು ಖರೀದಿಸಿತ್ತು. ಆದರೆ, ಐಪಿಎಲ್‌ನಲ್ಲಿ ಆರಂಭಿಕ ಹರಾಜಿನಲ್ಲಿ ಆಯ್ಕೆಯಾಗದ ಬಾಷ್, ತಂಡದ ಸಹ ಆಟಗಾರ ಲಿಜಾಡ್ ವಿಲಿಯಮ್ಸ್ ಗಾಯಗೊಂಡಾಗ ಮುಂಬೈ ಇಂಡಿಯನ್ಸ್‌ನಿಂದ ಕರೆ ಪಡೆದರು. ಈ ಅವಕಾಶವನ್ನು ಬಳಸಿಕೊಂಡ ಅವರು ಪಿಎಸ್‌ಎಲ್‌ಗೆ ಗುಡ್​ ಬೈ ಹೇಳಿದರು. ಬಾಷ್‌ನ ವಿವರಣೆಯ ನಂತರವೂ ಪಿಸಿಬಿ ಐಪಿಎಲ್ ಮಾದರಿಯಲ್ಲಿ ಎರಡು ವರ್ಷಗಳ ನಿಷೇಧವನ್ನು ಪರಿಗಣಿಸಿತು. ಆದರೆ, ಇಂತಹ ಕ್ರಮವು ವಿದೇಶಿ ಆಟಗಾರರನ್ನು ಪಿಎಸ್‌ಎಲ್‌ನಿಂದ ದೂರವಿಡಬಹುದು ಎಂಬ ಆತಂಕವೂ ಇದೆ.

ಇದನ್ನೂ ಓದಿ: IPL 2025: ಐಪಿಎಲ್ ನಾಯಕರಿಗೆ ಗುಡ್​​ನ್ಯೂಸ್​​! ಇನ್ಮೇಲೆ ಆ ತಪ್ಪಿಗೆ ನಿಷೇಧದ ಶಿಕ್ಷೆ ಇರಲ್ಲ!

ಐಪಿಎಲ್ vs ಪಿಎಸ್​​ಎಲ್ ಮುಖಾಮುಖಿ

ಈ ವಿವಾದಕ್ಕೆ ಪಿಸಿಬಿಯ ನಿರ್ಧಾರವೇ ಮೂಲ ಕಾರಣ ಎನ್ನಲಾಗಿದೆ. ಯಾವಾಗಲೂ ಐಪಿಎಲ್‌ನೊಂದಿಗೆ ಘರ್ಷಣೆ ತಪ್ಪಿಸಿ ವೇಳಾಪಟ್ಟಿ ರೂಪಿಸುತ್ತಿದ್ದ ಪಿಎಸ್‌ಎಲ್, ಈ ಬಾರಿ ಐಪಿಎಲ್ ದಿನಾಂಕಗಳ ಸುತ್ತ ತನ್ನ ಋತುವನ್ನು ನಿಗದಿಪಡಿಸಿದೆ. ಐಪಿಎಲ್ 2025 ಮಾರ್ಚ್ 22 ರಿಂದ ಮೇ 25 ರವರೆಗೆ ನಡೆಯಲಿದ್ದರೆ, ಪಿಎಸ್‌ಎಲ್ ಏಪ್ರಿಲ್ 11 ರಿಂದ ಮೇ 25 ರವರೆಗೆ ಆಯೋಜನೆಗೊಂಡಿದೆ. ಈ ಘರ್ಷಣೆಯಿಂದಾಗಿ ಅನೇಕ ವಿದೇಶಿ ಆಟಗಾರರು ಐಪಿಎಲ್‌ಗೆ ಆದ್ಯತೆ ನೀಡಿದ್ದಾರೆ. ಐಪಿಎಲ್ ಖ್ಯಾತಿ ಮತ್ತು ಆರ್ಥಿಕ ಲಾಭವನ್ನು ನೀಡುತ್ತದೆ ಎಂಬ ನಂಬಿಕೆಯಿಂದ ಪಿಎಸ್‌ಎಲ್‌ನಲ್ಲಿ ಈ ಬಾರಿ ವಿದೇಶಿ ಸ್ಟಾರ್​​ಗಳ ಕೊರತೆ ಎದುರಾಗಬಹುದು.

ಬಾಷ್ ಈಗಾಗಲೇ ದಕ್ಷಿಣ ಆಫ್ರಿಕಾದ ಟಿ20 ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ಒಡೆತನದ ಎಂಐ ಕೇಪ್ ಟೌನ್ ಪರ ಆಡಿದ್ದರು. 2025ರ ಋತುವಿನಲ್ಲಿ ಈ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಬಾಷ್ 8 ಪಂದ್ಯಗಳಲ್ಲಿ 11 ವಿಕೆಟ್‌ಗಳನ್ನು ಪಡೆದು ತಂಡದ ಯಶಸ್ಸಿಗೆ ಪ್ರಮುಖ ಕೊಡುಗೆ ನೀಡಿದರು. ಇದೀಗ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿರುವ ಅವರು ಮಾರ್ಚ್ 23 ರಂದು ಚೆನ್ನೈನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಐಪಿಎಲ್ 2025ರ ಮೊದಲ ಪಂದ್ಯ ಆಡಲಿದ್ದಾರೆ.

ಇದನ್ನೂ ಓದಿ: 18ನೇ ಆವೃತ್ತಿಯಲ್ಲಿ ಧೋನಿ, ಕೊಹ್ಲಿ, ರೋಹಿತ್ ಶರ್ಮಾ ಬ್ರೇಕ್ ಮಾಡಲಿರುವ 10 ದಾಖಲೆಗಳಿವು

ಮುಂಬೈ ಇಂಡಿಯನ್ಸ್ ತಂಡ

ರೋಹಿತ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ನಮನ್ ಧೀರ್, ಬೆವನ್ ಜಾಕೋಬ್ಸ್, ರಾಜ್ ಬಾವಾ, ವಿಲ್ ಜಾಕ್ಸ್, ಹಾರ್ದಿಕ್ ಪಾಂಡ್ಯ (ನಾಯಕ), ವಿಘ್ನೇಶ್ ಪುತ್ತೂರು, ಸತ್ಯನಾರಾಯಣ ರಾಜು, ಕಾರ್ಬಿನ್ ಬಾಷ್, ಮಿಚೆಲ್ ಸ್ಯಾಂಟ್ನರ್, ಅರ್ಜುನ್ ತೆಂಡೂಲ್ಕರ್, ರಯಾನ್ ರಿಕಲ್ಟನ್, ಕೃಷ್ಣನ್ ಶ್ರೀಜಿತ್, ರಾಬಿನ್ ಮಿಂಗೆ, ಜಸ್ಪ್ರೀತ್ ಬುಮ್ರಾ, ಅಶ್ವಿನಿ ಕುಮಾರ್, ಕರ್ಣ್ ಶರ್ಮಾ, ಟ್ರೆಂಟ್ ಬೌಲ್ಟ್, ದೀಪಕ್ ಚಾಹರ್, ಮುಜೀಬ್ ಉರ್ ರೆಹಮಾನ್