Abbakka Ratha: ಇತಿಹಾಸ ಸೃಷ್ಟಿಸಿದ್ದ ‘ಅಬ್ಬಕ್ಕ’ನ ಮರೆಯುವುದು ಹೇಗೆ, ಊರು, ಊರು ಸುತ್ತಿ ಕಥೆ ಹೇಳುತ್ತೆ ರಥ! | Abbakka rathayatre grand welcome in Dakshina Kannada Puttur students | ದಕ್ಷಿಣ ಕನ್ನಡ

Abbakka Ratha: ಇತಿಹಾಸ ಸೃಷ್ಟಿಸಿದ್ದ ‘ಅಬ್ಬಕ್ಕ’ನ ಮರೆಯುವುದು ಹೇಗೆ, ಊರು, ಊರು ಸುತ್ತಿ ಕಥೆ ಹೇಳುತ್ತೆ ರಥ! | Abbakka rathayatre grand welcome in Dakshina Kannada Puttur students | ದಕ್ಷಿಣ ಕನ್ನಡ

Last Updated:

ಅಬ್ಬಕ್ಕ ರಥಯಾತ್ರೆ ದ.ಕ. ಪುತ್ತೂರಿಗೆ ತಲುಪಿದ್ದು, ವಿವೇಕಾನಂದ ಕಾಲೇಜಿನಲ್ಲಿ ಭವ್ಯ ಸ್ವಾಗತ ದೊರೆತಿದೆ. ವಿದ್ಯಾರ್ಥಿಗಳು ಪುಷ್ಪಾರ್ಚನೆ ಮಾಡಿದರು.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ಕಳೆದ ಒಂದು ವಾರದಿಂದ ವೀರರಾಣಿ ಅಬ್ಬಕ್ಕನ (Abbakka) ಸಾಹಸಗಾಥೆಯನ್ನು ರಾಜ್ಯದೆಲ್ಲೆಡೆ ಪಸರಿಸಯವ ಉದ್ಧೇಶದಿಂದ ಅಖಲ ಭಾರತೀಯ ವಿದ್ಯಾರ್ಥಿ ಪರಿಷತ್ ಈ ರಥಯಾತ್ರೆಯನ್ನು ಹಮ್ಮಿಕೊಂಡಿದೆ. ಅಬ್ಬಕ್ಕನ ಪ್ರತಿಮೆಯ ರಥ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರಿಗೆ (Puttur) ತಲುಪಿದ್ದು, ಪುತ್ತೂರಿನಲ್ಲಿ ಅಬ್ಬಕ್ಕ ರಾಣಿಯ ರಥಕ್ಕೆ ಅದ್ದೂರಿ ಸ್ವಾಗತ ದೊರೆತಿದೆ. ಪುತ್ತೂರಿನ ವಿವೇಕಾನಂದ ಕಾಲೇಜು (College) ಕ್ಯಾಂಪಸ್ ಗೆ ಬಂದಿದ್ದ ಈ ರಥಕ್ಕೆ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು ಸೇರಿ ಪುಷ್ಪಾರ್ಚನೆ ಮಾಡಿದರು.

ಮಂಗಳೂರಲ್ಲಿ ಬೂತ್ ಮೆರವಣಿಗೆ

ರಾಜ್ಯದೆಲ್ಲೆಡೆ ಎರಡು ರಥಗಳು ಸಂಚರಿಸಲಿದ್ದು, ಎರಡೂ ರಥಗಳು ಸೆಪ್ಟೆಂಬರ್ ಇಂದು ಮಂಗಳೂರಿಗೆ ಆಗಮಿಸಲಿದ್ದು, ಮಂಗಳೂರಿನಲ್ಲಿ ಬೃಹತ್ ಮೆರವಣಿಗೆಯ ಮೂಲಕ ಈ ರಥಯಾತ್ರೆ ಮುಕ್ತಾಯಗೊಳ್ಳಲಿದೆ. ವೀರರಾಣಿ ಅಬ್ಬಕ್ಕನ ಇತಿಹಾಸವನ್ನು ಮರೆಮಾಚಲಾಗಿದ್ದು, ದೇಶದ ಇತಿಹಾಸದಲ್ಲಿ ವಿದೇಶೀ ಶಕ್ತಿಗಳ ಜೊತೆ ಹೋರಾಡಿದ ಪ್ರಪ್ರಥಮ ಮಹಿಳೆ ರಾಣಿ ಅಬ್ಬಕ್ಕಳಾಗಿದ್ದಾಳೆ. ಪೋರ್ಚುಗೀಸರು ಕಪ್ಪ ನೀಡುವಂತೆ ಅಬ್ಬಕ್ಕನ ರಾಜ್ಯದಲ್ಲಿ ಪೀಡಿಸುತ್ತಿದ್ದ ಸಂದರ್ಭದಲ್ಲಿ ಅದನ್ನು ವಿರೋಧಿಸಿ ಪೋರ್ಚುಗೀಸರ ಹುಟ್ಟಡಗಿಸಿದ ವೀರ ಮಹಿಳೆ ರಾಣಿ ಅಬ್ಬಕ್ಕನ ಬಗ್ಗೆ ಎಲ್ಲರು ತಿಳಿದುಕೊಳ್ಳಬೇಕು.

ಅದರಲ್ಲೂ ವಿದ್ಯಾರ್ಥಿಗಳು ಅಬ್ಬಕ್ಕೆನ ಸಾಹಸಗಾಥೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎನ್ನುವ ಧ್ಯೇಯದೊಂದಿದೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಈ ರಥಯಾತ್ರೆಯನ್ನು ಹಮ್ಮಿಕೊಂಡಿದೆ. ರಥದಲ್ಲಿ ಅಬ್ಬಕ್ಕ ಪುತ್ಥಳಿ, ಅಬ್ಬಕ್ಕನ ಇತಿಹಾಸದ ಕೆಲವು ತುಣುಕುಗಳನ್ನು ಈ ರಥದಲ್ಲಿ ಜೋಡಿಸಲಾಗಿದೆ.