Last Updated:
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಯುವ ಬ್ಯಾಟರ್ ಅಭಿಷೇಕ್ ಶರ್ಮಾ 25 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಅತಿ ಹೆಚ್ಚು ಬಾರಿ 50 ಪ್ಲಸ್ ಸ್ಕೋರ್ ಗಳಿಸಿದ ದಾಖಲೆ ಮಾಡಿದ್ದಾರೆ.
ಮೆಲ್ಬೋರ್ನ್(Melbourne) ಅಂಗಳದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತ(India) ತಂಡವನ್ನು ಆಸ್ಟ್ರೇಲಿಯಾ(Australia) 4 ವಿಕೆಟ್‌ಗಳಿಂದ ಸೋಲಿಸಿತು. ಆಸ್ಟ್ರೇಲಿಯಾ 13.2 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 126 ರನ್‌ಗಳ ಗುರಿಯನ್ನು ತಲುಪಿತು. ಈ ಗೆಲುವಿನೊಂದಿಗೆ, ಕಾಂಗರೂ ಪಡೆ 5 ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮೊದಲ ಟಿ20 ಪಂದ್ಯ ಮಳೆಯಿಂದಾಗಿ ರದ್ದಾಯಿತು. ಮೂರನೇ ಟಿ20ಐ ಈಗ ನವೆಂಬರ್ 2 ರಂದು ನಡೆಯಲಿದೆ. ಆಸ್ಟ್ರೇಲಿಯಾ ವಿರುದ್ಧ ಭಾರತ ಪಂದ್ಯ ಸೋತರೂ, ಅಭಿಷೇಕ್ ಶರ್ಮಾ(Abhishek Sharma) ವಿಶ್ವ ದಾಖಲೆ ಮಾಡಿದ್ದಾರೆ.
ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ನಿರೀಕ್ಷೆಗೆ ತಕ್ಕಂತೆ ಬೌಲಿಂಗ್ ಮಾಡಿದ ಆಸೀಸ್ ಬೌಲರ್ಸ್ ಭಾರತ ತಂಡದ ಆಗ್ರ ಕ್ರಮಾಂಕದ ಬ್ಯಾಟರ್ಸ್ ಅನ್ನು ಔಟ್ ಮಾಡಿದರು. ಆದರೆ ಆಸ್ಟ್ರೇಲಿಯಾ ಬೌಲರ್ಸ್ ವಿರುದ್ಧ ಅಭಿಷೇಕ್ ಶರ್ಮಾ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಭಾರತ ತಂಡದ ಪರ ಭರ್ಜರಿ ಅರ್ಧಶತಕ ಸಿಡಿಸಿದ ಅಭಿಷೇಕ್ ಶರ್ಮಾ ದಾಖಲೆ ಮಾಡಿದರು.
ಟಿ20 ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ನಾಲ್ಕು ವರ್ಷಗಳಲ್ಲಿ ಸಾಧಿಸಿದ್ದನ್ನು ಅಭಿಷೇಕ್ ಶರ್ಮಾ ಒಂದೇ ವರ್ಷದಲ್ಲಿ ಮಾಡಿ ತೋರಿಸಿದ್ದಾರೆ. ಆಸ್ಟ್ರೇಲಿಯಾದ ಬೌಲಿಂಗ್ ದಾಳಿಗೆ ಸಿಲುಕಿದ ಟೀಮ್ ಇಂಡಿಯಾ ಸಂಕಷ್ಟದ ಸ್ಥಿತಿಯಲ್ಲಿತ್ತು. ಟೀಮ್ ಇಂಡಿಯಾ 9 ಬ್ಯಾಟರ್ಸ್ ಎರಡಂಕಿ ರನ್ ಗಳಿಸುವಲ್ಲಿ ವಿಫಲರಾದರು.
ಅಭಿಷೇಕ್ ಶರ್ಮಾ ವಿಶ್ವ ದಾಖಲೆ
ಟೀಮ್ ಇಂಡಿಯಾದ ಯುವ ಸ್ಪೋಟಕ ಬ್ಯಾಟರ್ ಅಭಿಷೇಕ್ ಶರ್ಮಾ 25 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಬಾರಿ 50 ಪ್ಲಸ್ ಸ್ಕೋರ್ ಗಳಿಸಿದ ಬ್ಯಾಟರ್ಸ್ ಪಟ್ಟಿಗೆ ಸೇರಿದ್ದಾರೆ. ಈ ದಾಖಲೆ ಪಟ್ಟಿಯಲ್ಲಿ ಅಭಿಷೇಕ್ ಅವರು ಸೂರ್ಯಕುಮಾರ್ ಯಾದವ್, ಫಿಲ್ ಸಾಲ್ಟ್ ಮತ್ತು ಎವಿನ್ ಲೂಯಿಸ್ ಅವರನ್ನು ಸರಿಗಟ್ಟಿದ್ದಾರೆ. ಅಭಿಷೇಕ್ ಕೇವಲ ಒಂದು ವರ್ಷದಲ್ಲಿ ಈ ಅನುಭವಿಗಳ ದಾಖಲೆಯನ್ನು ಸರಿಗಟ್ಟಿದ್ದಾರೆ.
ಅಭಿಷೇಕ್ ಶರ್ಮಾ ಅವರು ಟಿ20 ಕ್ರಿಕೆಟ್ನಲ್ಲಿ ಇಲ್ಲಿಯವರೆಗೆ ಎಂಟು ಬಾರಿ 50 ಪ್ಲಸ್ ಸ್ಕೋರ್ ಕಲೆ ಹಾಕಿದ್ದಾರೆ. ಅದರಲ್ಲಿ ಏಳು ಬಾರಿ 25 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ. ಇದರೊಂದಿಗೆ ಒಂದು ವರ್ಷದಲ್ಲಿ ಅತಿಹೆಚ್ಚು ಬಾರಿ 25 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಗಳಿಸಿದ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.
25 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಗಳಿಸಿದವರು
ಅಭಿಷೇಕ್ ಶರ್ಮಾ(ಭಾರತ): 8 ಪಂದ್ಯಗಳು– 7 ಬಾರಿ
ಫಿಲ್ ಸಾಲ್ಟ್(ಇಂಗ್ಲೆಂಡ್): 11 ಪಂದ್ಯಗಳು– 7 ಬಾರಿ
ಎವಿನ್ ಲೆವಿಸ್(ವೆಸ್ಟ್ ಇಂಡೀಸ್): 15 ಪಂದ್ಯಗಳು– 7 ಬಾರಿ
ಸೂರ್ಯಕುಮಾರ್ ಯಾದವ್(ಭಾರತ): 25 ಪಂದ್ಯಗಳು– 7 ಬಾರಿ
October 31, 2025 5:37 PM IST