Achievement: ಈ ಯೋಜನೆ ಅಳವಡಿಸಿಕೊಂಡು ದೇಶಕ್ಕೇ ಮಾದರಿಯಾಯ್ತು ಪುತ್ತೂರು! 3 ಕೋಟಿ ವೆಚ್ಚದಲ್ಲಿ ನಡೆಯುತ್ತಿದೆ ಇಂಧನ ಕ್ರಾಂತಿ | Puttur Nagara Sabha Zero Waste project launch Indias first CNG unit | ದಕ್ಷಿಣ ಕನ್ನಡ

Achievement: ಈ ಯೋಜನೆ ಅಳವಡಿಸಿಕೊಂಡು ದೇಶಕ್ಕೇ ಮಾದರಿಯಾಯ್ತು ಪುತ್ತೂರು! 3 ಕೋಟಿ ವೆಚ್ಚದಲ್ಲಿ ನಡೆಯುತ್ತಿದೆ ಇಂಧನ ಕ್ರಾಂತಿ | Puttur Nagara Sabha Zero Waste project launch Indias first CNG unit | ದಕ್ಷಿಣ ಕನ್ನಡ

Last Updated:

ಪುತ್ತೂರು ನಗರಸಭೆ ಬನ್ನೂರು ಡಂಪಿಂಗ್ ಯಾರ್ಡ್‍ನ್ನು ಝೀರೋ ವೇಸ್ಟ್ ಪ್ರದೇಶವಾಗಿ ರೂಪಿಸಲು 3 ಕೋಟಿ ರೂಪಾಯಿಯಲ್ಲಿ CNG ಘಟಕ ಸ್ಥಾಪನೆ, ಹಳೆಯ ತ್ಯಾಜ್ಯ ಶೂನ್ಯಗೊಳಿಸುವ ಮೆಗಾ ಯೋಜನೆ ಆರಂಭವಾಗಿದೆ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ಪುತ್ತೂರು ನಗರಸಭೆ (Corporation) ಹೊಸದೊಂದು ದಾಖಲೆಗೆ (Achievement) ಮುಂದಾಗಿದೆ. ದೇಶದಲ್ಲೇ ಎಲ್ಲೂ ಇಲ್ಲದ ಹೊಸತೊಂದನ್ನು ಪ್ರಯೋಗಿಸಿ ಮಾದರಿಯಾಗಲಿದೆ! ಅದೇನು ಅಂತೀರಾ? ಇಲ್ಲಿದೆ ವಿಶೇಷ ಮಾಹಿತಿ. ಪುತ್ತೂರು ನಗರದ ಎಲ್ಲಾ  ತ್ಯಾಜ್ಯಗಳನ್ನು (Waste) ಸುರಿಯುವ ನಗರಸಭೆ ವ್ಯಾಪ್ತಿಯ ಬನ್ನೂರು ಡಂಪಿಂಗ್ ಯಾರ್ಡ್ (ಲ್ಯಾಂಡ್ ಫಿಲ್ ಸೈಟ್)ನ್ನು ಸಂಪೂರ್ಣವಾಗಿ ಝೀರೋ ವೇಸ್ಟ್ ಪ್ರದೇಶವಾಗಿ ಮಾರ್ಪಡಿಸುವ ನಿಟ್ಟಿನಲ್ಲಿ ಹಂತ ಹಂತದ ಯೋಜನೆಗಳು (Project) ಕಾರ್ಯಗತಗೊಳ್ಳುತ್ತಿವೆ.

ಹಳೆಯ ತ್ಯಾಜ್ಯ ಘಟಕದ ಕಸ ಶೂನ್ಯ ಸ್ಥಿತಿಗೆ

ಹಳೆಯ ತ್ಯಾಜ್ಯ ಘಟಕದಲ್ಲಿ 1990 ರಿಂದೀಚೆಗೆ ಸಂಗ್ರಹಗೊಂಡ ಸುಮಾರು 36775 ಟನ್ ಹಳೆಯ ತ್ಯಾಜ್ಯ ರಾಶಿಯಿದ್ದು, ಇದನ್ನು ವಿಲೇವಾರಿ ಮಾಡಲು ಮೆಗಾ ಯೋಜನೆ ಜಾರಿಗೊಳಿಸಲಾಗುತ್ತಿದೆ. ಕೇಂದ್ರ ಸರಕಾರದ ಸ್ವಚ್ಛ ಭಾರತ್ ಮಿಷನ್ 2.0 ಯೋಜನೆಯಲ್ಲಿ 3 ಕೋಟಿ ರೂಪಾಯಿ ಈಗಾಗಲೇ ಮಂಜೂರಾಗಿದೆ. ಹಳೆ ತ್ಯಾಜ್ಯವನ್ನು ಖಾಲಿ ಮಾಡುವ ಯೋಜನೆ ಆರಂಭಗೊಂಡಿದ್ದು, ಈವರೆಗೆ  3600 ಟನ್ ಹಳೆ ತ್ಯಾಜ್ಯ ಸಂಸ್ಕರಣೆ ಮಾಡಿ 3 ಹಂತದಲ್ಲಿ ಬೇರ್ಪಡಿಸಲಾಗುತ್ತಿದೆ.  ಮುಂದಿನ ಮಾರ್ಚ್ ವೇಳೆ ಹಳೆಯ ತ್ಯಾಜ್ಯ ಶೂನ್ಯ ಸ್ಥಿತಿಗೆ ಬರಲಿದೆ ಎನ್ನುವ ವಿಶ್ವಾಸದಲ್ಲಿ ನಗರಸಭೆಯ ಅಧಿಕಾರಿಗಳಿದ್ದಾರೆ.

ದೇಶದಲ್ಲೇ ಮೊದಲ ಬಾರಿಗೆ ನಗರಸಭೆಯ ವಿಶೇಷ ಪ್ರಯತ್ನ

ರೋಟರಿ ಕ್ಲಬ್ ಪುತ್ತೂರು ಪೂರ್ವ, ರೋಟರಿ ಚಾರಿಟೇಬಲ್ ಟ್ರಸ್ಟ್(ರಿ.) ಇವರ ಆಶ್ರಯದಲ್ಲಿ ಕೃಷ್ಣ ಮುಳಿಯ ಗ್ರೀನ್ ಎಲ್‍ಎಲ್‍ಪಿ ಮತ್ತು ರೀಟ್ಯಾಪ್ ಸೊಲ್ಯೂಶನ್ ಸಂಸ್ಥೆಗಳು ಜಂಟಿಯಾಗಿ ಯಾರ್ಡ್‍ನಲ್ಲಿ  ಬಯೋಗ್ಯಾಸ್ ಘಟಕ ಸ್ಥಾಪಿಸಿವೆ. ಇಲ್ಲಿಗೆ ಬರುವ ಹಸಿ ಕಸ ಬಳಸಿಕೊಂಡು ಸಿಎನ್‍ಜಿ (ಬಯೋ ಗ್ಯಾಸ್) ಉತ್ಪಾದಿಸುತ್ತಿವೆ. ದೇಶದಲ್ಲಿ ಮೊದಲ ಬಾರಿಗೆ ನಗರಸಭೆಯು ಸಿ.ಎನ್.ಜಿ ಘಟಕವನ್ನು ಸ್ಥಾಪಿಸಿದೆ. ಪೆಸೋ ಲೈಸೆನ್ಸ್ ಸಿಕ್ಕಿದ ತಕ್ಷಣ ಸಿಎನ್‍ಜಿ ಮಾರಾಟ ಇಲ್ಲಿ ಆರಂಭವಾಗಲಿದೆ.

ಸುಮಾರು 3 ಕೋಟಿ ರೂಪಾಯಿ ವೆಚ್ಚದಲ್ಲಿ ಕಾರ್ಯ

ಇದನ್ನೂ ಓದಿ: Puttur Temple: ಮತ್ತಷ್ಟು ಮೆರುಗು ಬರಲಿದೆ ಇತಿಹಾಸ ಪ್ರಸಿದ್ಧ ದೇವಸ್ಥಾನಕ್ಕೆ, ಭಕ್ತರ ಆಸೆಯೂ ಇದೆ!

ಸುಮಾರು ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಈ ಘಟಕ ಮಾಡಲಾಗಿದೆ. ದಿನಕ್ಕೆ 500 ಕಿಲೋ CNG ಉತ್ಪಾದನೆಯ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಒಣ ಕಸ ಸ್ವೀಕರಿಸಿ, ಬೇರ್ಪಡಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಎಂಆರ್‍ಎಫ್ ಘಟಕ 1.60 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಕಟ್ಟಡ ಕಾಮಗಾರಿ ಪೂರ್ತಿಗೊಂಡಿದ್ದು, ಯಂತ್ರ ಅಳವಡಿಕೆ ನಡೆಯಬೇಕಿದೆ ಎಂದು ಅಧಿಕಾರಿಗಳು ಸಂಸದರಿಗೆ ಮಾಹಿತಿ ನೀಡಿದ್ದಾರೆ. ನಗರಸಭೆ ವ್ಯಾಪ್ತಿಯಲ್ಲಿ ನಿತ್ಯ ಸಂಗ್ರಹಗೊಳ್ಳುವ ತ್ಯಾಜ್ಯ ಪ್ರಮಾಣ, ಪೌರ ಕಾರ್ಮಿಕರ ಸಂಖ್ಯೆ, ಸಂಗ್ರಹ ವ್ಯವಸ್ಥೆ ಮತ್ತಿತರ ಸಮಗ್ರ ಮಾಹಿತಿಯನ್ನು ಸಂಸದರು ಪಡೆದುಕೊಂಡಿದ್ದಾರೆ.