Last Updated:
ಪಡುಮಲೆ ಮಹಿಳಾ ತಂಡವು ತಮಿಳುನಾಡಿನ ಕೊಯಮುತ್ತೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ತ್ರೋಬಾಲ್ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದು, ಈಶ ಫೌಂಡೇಶನ್ನಿಂದ 5 ಲಕ್ಷ ಬಹುಮಾನ ಮತ್ತು ಊರಿನ ಅದ್ದೂರಿ ಸನ್ಮಾನ ಪಡೆದಿದೆ.
ದಕ್ಷಿಣ ಕನ್ನಡ: ತೆರೆದ ಜೀಪಿನ (Jeep) ಮೆರವಣಿಗೆ, ಜೈಕಾರ, ಹೂಮಾಲೆಗಳಿಂದ ಕೂಡಿರುವ ಹೆಂಗಸರ ಕೊರಳು, ಕಣ್ಣಲ್ಲಿ ಆನಂದ (Joy) ಭಾಷ್ಪ, ಊರಿಗೆ ಜೈಕಾರ ಹೇಳುತ್ತಾ ಸಾಗುತ್ತಿರುವ ಜನರು (People) ಇದೆಲ್ಲಾ ಒಂದು ಗ್ರಾಮದ ಒಗ್ಗಟ್ಟನ್ನು (Unity) ಪ್ರತಿನಿಧಿಸುವ ಸಂಭ್ರಮ! ಊರಿನ ಕಿರಿ-ಹಿರಿಯರು ಪಟಾಕಿ, ಉದ್ಘೋಷ, ಬ್ಯಾನರ್ ಹಿಡಿದು ಸಾಗುತ್ತಿರುವ ಈ ಸಂಭ್ರಮವೇನು? ಹಾಗಾದರೆ ಇಲ್ಲಿ ಆಗಿದ್ದೇನು? ತಿಳಿಯೋಣ ಬನ್ನಿ.
ಈಶ ಗ್ರಾಮ ಉತ್ಸವದ ಅಂಗವಾಗಿ ತಮಿಳುನಾಡಿನ ಕೊಯಮುತ್ತೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ ಸಾರ್ವಜನಿಕ ಗೌರವ ಸಲ್ಲಿಸಲಾಗಿತ್ತು. ಗೆದ್ದ ತಂಡಕ್ಕೆ ಈಶ ಫೌಂಡೇಶನ್ ವತಿಯಿಂದ 5 ಲಕ್ಷ ರೂಪಾಯಿಗಳ ಬಹುಮಾನ ಗೆದ್ದ ಶಾಸ್ತಾರ ಪಡುಮಲೆ ಮಹಿಳಾ ತಂಡವನ್ನು ಊರಿನ ಜನ ಅದ್ದೂರಿ ಮೆರವಣಿಗೆಯೊಂದಿಗೆ ಗೌರವ ಸಮರ್ಪಿಸಿದರು.
ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕೌಡಿಚಾರ್ ಜಂಕ್ಷನ್ನಿಂದ ಎರಡು ತೆರೆದ ಜೀಪುಗಳಲ್ಲಿ ಕ್ರೀಡಾಳುಗಳನ್ನು ವಾಹನಗಳ ಮೆರವಣಿಗೆಯ ಮೂಲಕ ಸುಮಾರು 5 ಕಿಲೋಮೀಟರ್ ದೂರದ ಪಟ್ಟೆ ವಿದ್ಯಾಸಂಸ್ಥೆ ತನಕ ಕರೆತರಲಾಯಿತು. ಸಂಸ್ಥೆಯ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಬಹುಮಾನ ಗೆದ್ದ ತಂಡದ ಎಲ್ಲಾ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪಡುಮಲೆ ತಂಡಕ್ಕೆ ದೇಶಮಟ್ಟದ ಗೌರವ
Dakshina Kannada,Karnataka
October 14, 2025 9:38 AM IST