Achievement: ವೇಗದ ಡ್ರೋನ್‌ ತಯಾರಿಸಿ ವಿಶ್ವ ದಾಖಲೆ ಬರೆದ ಕುಡ್ಲದ ಬಾಲಕ! ಆರನೇ ತರಗತಿ ಹುಡುಗನ ಅಪ್ರತಿಮ ಸಾಧನೆ | Mangaluru Eshan Palthadi unveils 150 kmph drone record | ದಕ್ಷಿಣ ಕನ್ನಡ

Achievement: ವೇಗದ ಡ್ರೋನ್‌ ತಯಾರಿಸಿ ವಿಶ್ವ ದಾಖಲೆ ಬರೆದ ಕುಡ್ಲದ ಬಾಲಕ! ಆರನೇ ತರಗತಿ ಹುಡುಗನ ಅಪ್ರತಿಮ ಸಾಧನೆ | Mangaluru Eshan Palthadi unveils 150 kmph drone record | ದಕ್ಷಿಣ ಕನ್ನಡ

Last Updated:

ಮಂಗಳೂರಿನ ಈಶಾನ್ ವಿಕ್ರಮ್ ಪಾಲ್ತಾಡಿ 150 ಕಿ.ಮೀ ವೇಗದ ಡ್ರೋನ್ ತಯಾರಿಸಿ International Book Of Recordನಲ್ಲಿ ದಾಖಲೆ ಬರೆದಿದ್ದಾರೆ, ಸೂಪರ್ ಟ್ಯಾಲೆಂಟೆಡ್ ಕಿಡ್ ಗೌರವ ಪಡೆದಿದ್ದಾರೆ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ಮಂಗಳೂರಿನ ಹನ್ನೊಂದರ ಹರೆಯದ ಪೋರ (Boy) ಅತೀ ವೇಗದ ಡ್ರೋನ್ ತಯಾರಿ ಮಾಡುವ ಮೂಲಕ ವಿಶ್ವ ದಾಖಲೆ ಮಾಡಿದ್ದಾರೆ. ಸುರತ್ಕಲ್ಡೆಲ್ಲಿ ಪಬ್ಲಿಕ್ ಸ್ಕೂಲ್‌ನ (School) ಆರನೇ ತರಗತಿ ವಿದ್ಯಾರ್ಥಿ ಈಶಾನ್ ವಿಕ್ರಮ್ ಪಾಲ್ತಾಡಿ ಸಾಧನೆ ಮಾಡಿದವರು. ವಿಶ್ವದ ಅತೀ ವೇಗದ ಡ್ರೋನ್ (Drone) ತಯಾರಿಸಿ ಈಶಾನ್ ಇಂಟರ್ ನ್ಯಾಶನಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ (Record) ತನ್ನ ಹೆಸರನ್ನು ದಾಖಲಿಸಿಕೊಂಡಿದ್ದಾರೆ.

ಬಾಲ್ಯದಿಂದಲೇ ವೈಜ್ಞಾನಿಕ ಆಸಕ್ತಿ

ಮಂಗಳೂರಿನ‌ ಎಂಆರ್‌ಪಿಎಲ್‌ನ ಉದ್ಯೋಗಿಯಾಗಿರುವ ವಿಕ್ರಮ ಆಚಾರ್ಯ ಪಾಲ್ತಾಡಿ ಹಾಗೂ ಸುಷ್ಪಾ ದಂಪತಿಗಳ ಪುತ್ರ ಈಶಾನ್, ಬಾಲ್ಯದಿಂದಲೇ ಅವಿಷ್ಕರಣೆ ಮಾಡೋ ಉತ್ಸಾಹ ಹೊಂದಿದ್ದ. ಮನೆಯಲ್ಲಿದ್ದ ಆಟಿಕೆ ವಸ್ತುಗಳನ್ನು ಬಿಚ್ಚಿ ಜೋಡಿಸೋದು, ಮೊಬೈಲ್, ರಿಮೋಟ್‌ಗಳನ್ನು ಜೋಡಿಸೋ ಕಾರ್ಯ ಮಾಡುತ್ತಿದ್ದ. ಡ್ರೋನ್ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ. ಇದೀಗ ಗೂಗಲ್‌ ಸಹಾಯದಿಂದ ತನ್ನದೇ ವಿಶೇಷ ಪರಿಕಲ್ಪನೆಯಡಿಯಲ್ಲಿ  ಈಶಾನ್ ಡ್ರೋನ್ ತಯಾರು ಮಾಡಿದ್ದಾನೆ.

150 ಕಿಲೋಮೀಟರ್‌ ವೇಗದಲ್ಲಿ ಸಾಗುತ್ತೆ ಈ ಡ್ರೋನ್

ಈ ಡ್ರೋನ್‌ಗಾಗಿ ವಿದೇಶದಿಂದಲೂ ಬಿಡಿಭಾಗಗಳನ್ನು ತರಿಸಲಾಗಿದೆ. ಕಂಪ್ಯೂಟರ್ ಸಹಾಯದಿಂದ  FPV ಡ್ರೋನ್ ಸಿದ್ಧಪಡಿಸಿದ್ದಾನೆ ಈಶಾನ್ ಪಾಲ್ತಾಡಿ. ಈಶಾನ್ ತಯಾರಿಸಿದ ಡ್ರೋನ್ ಗಂಟೆಗೆ 150 ಕಿ.ಮೀ. ವೇಗದಲ್ಲಿ ಹಾರಬಲ್ಲದು. ಬೈಕ್ ರೇಸ್, ಡ್ರೋನ್ ರೇಸ್‌ಗೂ ಈ ಡ್ರೋನ್ ಅನ್ನು‌ ಬಳಸಬಹುದು. ಈ ಡ್ರೋನ್‌ನ ವೇಗವನ್ನು ಗಮನಿಸಲು ಮೂರು ಕಿ.ಮೀ. ದೂರದವರೆಗೂ ಡ್ರೋನ್ ಚಲನೆ ಗಮನಿಸುವ ಗಾಗಲ್ ಅನ್ನು ಈಶಾನ್ ತಯಾರಿಸಿರೋದು ವಿಶೇಷ.

ದೇಶಕ್ಕೆ ಸಹಕಾರಿ ಆಗೋ ಬಯಕೆ

ಇದನ್ನೂ ಓದಿ: Weather Report: ಮಂಗಳೂರಿನಲ್ಲಿ ಅತ್ಯಾಧುನಿಕ ರಾಡಾರ್ ಅಳವಡಿಕೆ, ಅಪಾಯಕ್ಕೂ ಮುಂಚೆ ಸಿಗುತ್ತೆ ಮುನ್ಸೂಚನೆ!

ಈಶಾನ್ ಈ ಸಾಧನೆ ಸೆಪ್ಟೆಂಬರ್ 8, 2025ರಂದು ಇಶಾನ್ ಸಾಧನೆ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್‌ಗೆ ಅಧಿಕೃತವಾಗಿ ದಾಖಲಾಗಿದೆ. ಸೆಪ್ಟೆಂಬರ್ 19ರಂದು International Book Of Record ಮೂಲಕ “ಸೂಪರ್ ಟ್ಯಾಲೆಂಟೆಡ್ ಕಿಡ್” ಮತ್ತು “ವನ್ ಇನ್ ಮಿಲಿಯನ್” ಎಂಬ ಗೌರವವನ್ನು ಈಶಾನ್  ಪಡೆದಿದ್ದಾರೆ. ತನ್ನೂರಿನ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೂ ಕಲಿಸಿಕೊಡಬೇಕು, ಮುಂದಿನ ದಿನಗಳಲ್ಲಿ ದೇಶದ ಸೈನ್ಯಕ್ಕೆ ಸಹಾಯವಾಗುವಂಥ ಡ್ರೋನ್ ನಿರ್ಮಿಸಬೇಕು ಎಂಬ ಹಂಬಲವನ್ನು ಈಶಾನ್ ಹೊಂದಿದ್ದಾನೆ.