Last Updated:
ಈ ಸರಣಿಯ ಗೆಲುವಿನೊಂದಿಗೆ ಅಫ್ಘಾನಿಸ್ತಾನ ತನ್ನ ಐದನೇ ಸತತ ODI ಸರಣಿ ಗೆಲುವನ್ನು ಸಾಧಿಸಿದ್ದು, ಬಾಂಗ್ಲಾದೇಶದ ವಿರುದ್ಧ T20 ಸರಣಿಯ ಸೋಲಿಗೆ ಸೇಡು ತಿರುಗಿಸಿಕೊಂಡಿದೆ.
ಅಫ್ಘಾನಿಸ್ತಾನ ಕ್ರಿಕೆಟ್ ತಂಡವು ಬಾಂಗ್ಲಾದೇಶ (Afghanistan vs Bangladesh) ವಿರುದ್ಧದ 3 ODIಗಳ ಸರಣಿಯನ್ನು 3-0ರ ಅಂತರದೊಂದಿಗೆ ಗೆದ್ದು ಇತಿಹಾಸ ನಿರ್ಮಿಸಿದೆ. ಶೇಖ್ ಜಾಯದ್ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಅಂತಿಮ ODIಯಲ್ಲಿ, ಅಫ್ಘಾನಿಸ್ಥಾನ ಮೊದಲು ಬ್ಯಾಟಿಂಗ್ ಮಾಡಿ 293/9ರ ಸ್ಕೋರ್ ಮಾಡಿತು. ನಂತರ ಬಾಂಗ್ಲಾದೇಶವನ್ನು ಕೇವಲ 93 ರನ್‌ಗಳಿಗೆ ಆಲ್‌ಔಟ್ ಮಾಡುವ ಮೂಲಕ 200 ರನ್‌ಗಳ ಬೃಹತ್ ಅಂತರದೊಂದಿಗೆ ಗೆಲುವು ಸಾಧಿಸಿತು. ಇದು ಅಬುಧಾಬಿಯ ODI ಕ್ರಿಕೆಟ್‌ನಲ್ಲಿ ಅತ್ಯಂತ ದೊಡ್ಡ ಅಂತರದಿಂದ ಗೆದ್ದ ಸಾಧನೆಯಾಗಿದೆ. ಹಿಂದಿನ ದಾಖಲೆಯು ದಕ್ಷಿಣ ಆಫ್ರಿಕಾ (South Africa) ಹೆಸರಿನಲ್ಲಿದ್ದು, ಅವರು 2024ರಲ್ಲಿ ಐರ್ಲೆಂಡ್ ವಿರುದ್ಧ 174 ರನ್‌ಗಳ ಅಂತರದೊಂದಿಗೆ ಗೆದ್ದಿದ್ದರು.
ಈ ಸರಣಿಯ ಗೆಲುವಿನೊಂದಿಗೆ ಅಫ್ಘಾನಿಸ್ತಾನ ತನ್ನ ಐದನೇ ಸತತ ODI ಸರಣಿ ಗೆಲುವನ್ನು ಸಾಧಿಸಿದ್ದು, ಬಾಂಗ್ಲಾದೇಶದ ವಿರುದ್ಧ T20 ಸರಣಿಯ ಸೋಲಿಗೆ ಸೇಡು ತಿರುಗಿಸಿಕೊಂಡಿದೆ.ಅಫ್ಘಾನಿಸ್ಥಾನ ತಂಡವು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು, ಮತ್ತು 50 ಓವರ್‌ಗಳಲ್ಲಿ 9 ವಿಕೆಟ್‌ಗೆ 293 ರನ್‌ಗಳ ಸವಾಲಿನ ಮೊತ್ತ ದಾಖಲಿಸಿತು. ತಂಡದ ಓಪನರ್ ಇಬ್ರಾಹಿಮ್ ಜದ್ರಾನ್ ಅವರು ಸರಣಿಯಲ್ಲಿ ತಮ್ಮ ಫಾರ್ಮ್ ಮುಂದುವರೆಸಿ, 95 ರನ್‌ಗಳ ಉತ್ತಮ ಇನಿಂಗ್ಸ್ ಆಡಿದರು. ಮಧ್ಯಮ ಕ್ರಮದಲ್ಲಿ ಮೊಹಮ್ಮದ್ ನಬಿ ಅವರು 32 ಎಸೆತಗಳಲ್ಲಿ 67 ರನ್ ಸಿಡಿಸಿ ತಂಡಕ್ಕೆ ನೆರವಾದರು.
ಚೇಸಿಂಗ್ ಆರಂಭಿಸಿದ ಬಾಂಗ್ಲಾದೇಶ ತಂಡವು ಉತ್ತಮ ಆರಂಭ ಪಡೆದರೂ, ಅಫ್ಘಾನ್ ಬೌಲರ್‌ಗಳ ದಾಳಿಗೆ ಸಿಲುಕಿ ಕೇವಲ 93 ರನ್‌ಗಳಿಗೆ ಆಲ್‌ಔಟ್ ಆಗಿ, 200 ರನ್‌ಗಳ ಬೃಹತ್ ಮೊತ್ತದಿಂದ ಸೋಲು ಕಂಡತು. ಅಲ್ಲದೆ ಏಕದಿನ ಸರಣಿಯನ್ನು 3-0ರಿಂದ ಕಳೆದುಕೊಂಡಿತು. ಓಪನರ್ ಸೈಫ್ ಹಸನ್ 43 ರನ್‌ಗಳೊಂದಿಗೆ ಬಾಂಗ್ಲಾದೇಶದ ಅತ್ಯುನ್ನತ ಸ್ಕೋರರ್ ಆದರು. ಅಫ್ಘಾನಿಸ್ತಾನದ ಪರ ಬಿಲಾಲ್ ಸಮಿ 33ಕ್ಕೆ5, ರಶೀದ್ ಖಾನ್ 12ಕ್ಕೆ3 ವಿಕೆಟ್ ಪಡೆದು ಮಿಂಚಿದರು.
ಈ 200 ರನ್‌ಗಳ ಅಂತರದ ಗೆಲುವು ಅಬುಧಾಬಿಯಲ್ಲಿ ODI ಕ್ರಿಕೆಟ್‌ನಲ್ಲಿ ಅತಿದೊಡ್ಡ ಜಯವಾಗಿದೆ. ದಕ್ಷಿಣ ಆಫ್ರಿಕಾ 2014ರ ಇರ್ಲೆಂಡ್ ವಿರುದ್ಧ 174 ರನ್‌ಗಳ ಜಯ ಸಾಧಸಿದ್ದು ಇಲ್ಲಿಯವರೆಗಿನ ದಾಖಲೆಯಾಗಿದೆ.
ಅಫ್ಘಾನಿಸ್ತಾನ vs ಬಾಂಗ್ಲಾದೇಶ – 200 ರನ್ ಜಯ
ದಕ್ಷಿಣ ಆಫ್ರಿಕಾ vs ಐರ್ಲೆಂಡ್ – 174 ರನ್‌ಗಳ ಜಯ
ಸ್ಕಾಟ್‌ಲ್ಯಾಂಡ್ vs ಅಫ್ಘಾನಿಸ್ಥಾನ್: 150 ರನ್‌ಗಳ ಜಯ
October 15, 2025 2:56 PM IST
AFG vs BAN: ಬಾಂಗ್ಲಾದೇಶದ ವಿರುದ್ಧ 200 ರನ್ಗಳಿಂದ ಗೆದ್ದು ವಿಶ್ವದಾಖಲೆ ಸೃಷ್ಟಿಸಿದ ಅಫ್ಘಾನಿಸ್ತಾನ! ODIನಲ್ಲಿ ಇದೇ ಮೊದಲ ಬಾರಿಗೆ ಈ ಸಾಧನೆ