AI Smartphone: ಗೂಗಲ್ ಪಿಕ್ಸೆಲ್ 9ಎ ಬಿಡುಗಡೆ; 49,999ರೂಗೆ ಮಿಡ್‌ರೇಂಜ್ ಎಐ ಸ್ಮಾರ್ಟ್‌ಫೋನ್‌ ಮಾರ್ಕೆಟಿಗೆ ಎಂಟ್ರಿ! | Google Pixel 9a 7 Years of Updates Available in April

AI Smartphone: ಗೂಗಲ್ ಪಿಕ್ಸೆಲ್ 9ಎ ಬಿಡುಗಡೆ; 49,999ರೂಗೆ ಮಿಡ್‌ರೇಂಜ್ ಎಐ ಸ್ಮಾರ್ಟ್‌ಫೋನ್‌ ಮಾರ್ಕೆಟಿಗೆ ಎಂಟ್ರಿ! | Google Pixel 9a 7 Years of Updates Available in April

ಹೆಚ್ಚಿನ ಫೀಚರ್‌ನೊಂದಿಗೆ ಆಗಮನ

ಪಿಕ್ಸೆಲ್ 9ಎ ತನ್ನ ಹಿಂದಿನ ಪಿಕ್ಸೆಲ್ 8ಎ ಗಿಂತ ಉನ್ನತ ಫೀಚರ್‌ಗಳೊಂದಿಗೆ ಬಂದಿದೆ. 6.3 ಇಂಚು AMOLED ಡಿಸ್‌ಪ್ಲೇ, 120Hz ರಿಫ್ರೆಶ್‌ ರೇಟ್ ಮತ್ತು 2,700 ನಿಟ್‌ ಗರಿಷ್ಟ ಹೊಳಪು ಈ ಸಾಧನದ ವೈಶಿಷ್ಟ್ಯ. ಫೋನ್ ಹಿಂಬದಿಯಲ್ಲಿ 48MP ಪ್ರೈಮರಿ ಕ್ಯಾಮೆರಾ ಹಾಗೂ 13MP ಅಲ್ಟ್ರಾ ವೈಡ್ ಲೆನ್ಸ್ ಇದೆ. ಸೆಲ್ಫಿಗಾಗಿ 13MP ಕ್ಯಾಮೆರಾ ಲಭ್ಯ.

ಪಿಕ್ಸೆಲ್ 9ಎ ತಂತ್ರಜ್ಞಾನ ವಿಭಾಗದಲ್ಲಿ ಗೂಗಲ್‌ನ ಸ್ವಂತ Tensor G4 ಚಿಪ್‌ಸೆಟ್‌ ನಿಂದ ಚಲಿಸುತ್ತದೆ. 5,100mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 23W ವೇಗದ ಚಾರ್ಜಿಂಗ್‌ ಹಾಗೂ ವೈರ್‌ಲೆಸ್‌ ಚಾರ್ಜಿಂಗ್‌ ಅನ್ನು ಬೆಂಬಲಿಸುತ್ತದೆ. ಫೋನ್‌ IP68 ರೇಟಿಂಗ್ ಹೊಂದಿದ್ದು, ನೀರು ಹಾಗೂ ಧೂಳಿಗೆ ಪ್ರತಿರೋಧಕವಾಗಿದೆ.

ಗ್ರಾಹಕರಿಗೆ ಇದು ಒಂದು ಉತ್ತಮ ಆಯ್ಕೆ

ಸಾಫ್ಟ್‌ವೇರ್‌ನಲ್ಲಿ ಗೂಗಲ್ 9ಎ, ಆಂಡ್ರಾಯ್ಡ್‌ನ ತಾಜಾ ಆವೃತ್ತಿ ಜೊತೆಗೆ Gemini AI ಮತ್ತು ಗೂಗಲ್ ಅಸಿಸ್ಟಂಟ್‌ನಂತಹ ಎಐ ಫೀಚರ್‌ಗಳನ್ನೂ ಒಳಗೊಂಡಿದೆ. ಉಲ್ಲೇಖಿಸಬೇಕಾದ್ದೆಂದರೆ, ಈ ಸಾಧನಕ್ಕೆ 7 ವರ್ಷಗಳವರೆಗೆ OS ಮತ್ತು ಸೆಕ್ಯೂರಿಟಿ ಅಪ್‌ಡೇಟ್‌ ಖಚಿತವಾಗಿದೆ. ಉನ್ನತ ಕ್ಯಾಮೆರಾ, ನವೀನ ವಿನ್ಯಾಸ, ದೀರ್ಘಮುದತಿಯ ಬೆಂಬಲದೊಂದಿಗೆ ಮಿಡ್‌ರೇಂಜ್ ಫೋನ್ ಹುಡುಕುವವರಿಗೆ ಪಿಕ್ಸೆಲ್ 9ಎ ಉತ್ತಮ ಆಯ್ಕೆ ಎನ್ನಬಹುದು.

AI ವಿಕಸನಗೊಳ್ಳುತ್ತಿದೆ

ಎಐ ಭವಿಷ್ಯವನ್ನು ರೂಪಿಸುವ ವಿಚಾರದಲ್ಲಿ ಭಾರತವು ಅಗಾಧ ಸಾಮರ್ಥ್ಯವನ್ನು ಹೊಂದಿದೆ. ಉತ್ಪನ್ನ ಅಭಿವೃದ್ಧಿಯಲ್ಲಿ ಮಾತ್ರವೇ ಅಲ್ಲ, ಜೊತೆಗೆ ಅತ್ಯಾಧುನಿಕ ಸಂಶೋಧನೆಯಲ್ಲಿಯೂ ಸಹ ಮುಂಚೂಣಿಯಲ್ಲಿದೆ. ದೇಶದ ಪ್ರತಿಭಾವಂತರ ತಂಡ ಮತ್ತು ಅತ್ಯಾಧುನಿಕ ಟೆಕ್ ಪರಿಸರ ವ್ಯವಸ್ಥೆಯ ಮೂಲಕ ಭಾರತವು ಈಗಾಗಲೇ ಗಮನಾರ್ಹ ದಾಪುಗಾಲು ಇಡುತ್ತಿದೆ. ವಿವಿಧ ರೀತಿ ಜನಸಂಖ್ಯೆಗೆ ಸೇವೆ ಸಲ್ಲಿಸುವ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಅತ್ಯಗತ್ಯವಾದ ಕ್ಷೇತ್ರಗಳಲ್ಲಿ, ವಿಶೇಷವಾಗಿ ನೈಸರ್ಗಿಕ ಭಾಷಾ ತಿಳುವಳಿಕೆಯಂತಹ ಕ್ಷೇತ್ರಗಳಲ್ಲಿ ಭಾರತದ ಎಐ ಕೊಡುಗೆ ಮಹತ್ವದ್ದಾಗಿದೆ. ಎಐ ವಿಕಸನಗೊಳ್ಳುತ್ತಲೇ ಇರುವುದರಿಂದ ಜಾಗತಿಕ ಮಟ್ಟದಲ್ಲಿ ಆವಿಷ್ಕಾರ ಕ್ಷೇತ್ರವನ್ನು ಮುನ್ನಡೆಸುವಲ್ಲಿ ಭಾರತ ಪ್ರಮುಖ ಪಾತ್ರವನ್ನು ವಹಿಸಲು ಸಿದ್ಧವಾಗಿದೆ.

ಅನೇಕ ಸಮಸ್ಯೆಗಳಿಗೆ ಇಲ್ಲಿ ಸಿಗುತ್ತೆ ಉತ್ತರ

ಮೊಬೈಲ್ ಇಂಟರ್ ನೆಟ್ ಕ್ರಾಂತಿ ಮಾಡಿದಂತೆ ಎಐನಲ್ಲಿ ಕೂಡ ದಾರಿ ತೋರುವ ಸಾಮರ್ಥ್ಯವನ್ನು ಭಾರತ ಹೊಂದಿದೆ ಎಂಬುದು ಮೆಟಾ ನಂಬಿಕೆಯಾಗಿದೆ. ನಾವು ಭಾರತದ ಬೆಳವಣಿಗೆಯಲ್ಲಿ ಜೊತೆಯಾಗಿ ನಡೆಯುತ್ತಿದ್ದೇವೆ. ಸರ್ಕಾರಿ ಇಲಾಖೆಗಳೊಂದಿಗೆ ಪಾಲುದಾರಿಕೆಯಿಂದ ಹಿಡಿದು ಲಕ್ಷಾಂತರ ಸಣ್ಣ ವ್ಯಾಪಾರಗಳನ್ನು ಬೆಳೆಸಲು ಅನುವು ಮಾಡಿಕೊಡುತ್ತಿದ್ದೇವೆ. ಎಐಯ ಅಭಿವೃದ್ಧಿಯಿಂದಾಗಿ ಒಂದು ಹಂತದಲ್ಲಿ ಅಸಾಧ್ಯವೆಂದು ಅನ್ನಿಸಿದ್ದ ಅನೇಕ ಸಮಸ್ಯೆಗಳನ್ನು ಪರಿಹರಿಸುವ ಸಾಧನಗಳು ನಮಗೆ ದೊರೆತಿವೆ. ಜೊತೆಗೆ ಓಪನ್ ಸೋರ್ಸ್ ಎಐ ಅನ್ನು ಸ್ವೀಕರಿಸಲು ಸಿದ್ಧವಾಗಿರುವ ಭಾರತದ ಸಾಮರ್ಥ್ಯವು ಈ ಬದಲಾವಣೆಯನ್ನು ಸಾಧ್ಯವಾಗಿಸಿದೆ.