Last Updated:
ಮಂಗಳೂರಿನಿಂದ ಎಲ್ಲಾ ಅಂತರಾಷ್ಟ್ರೀಯ ವಿಮಾನಗಳು ಮಧ್ಯಪ್ರಾಚ್ಯ ದೇಶಗಳಿಗೆ ಮಾತ್ರ ಕಾರ್ಯಾಚರಣೆ ನಡೆಸುತ್ತಿದ್ದವು. ಮಂಗಳವಾರ ಮತ್ತು ಶುಕ್ರವಾರದಂದು ಉಭಯ ನಿಲ್ದಾಣಗಳ ನಡುವೆ ವಿಮಾನಗಳು ಸಂಚಾರ ಮಾಡಲಿವೆ.
ಮಂಗಳೂರು: ಏರ್ ಇಂಡಿಯಾ ಎಕ್ಸ್ಪ್ರೆಸ್(Air India Express) ಜನವರಿ 21ರಿಂದ ಮಂಗಳೂರು ಮತ್ತು ಸಿಂಗಾಪುರ ನಡುವೆ ವಾರಕ್ಕೆ ಎರಡು ಬಾರಿ ನೇರ ವಿಮಾನ ಸೇವೆ ಆರಂಭಿಸುತ್ತಿದೆ. ಇದರೊಂದಿಗೆ ಮಂಗಳೂರಿನೊಂದಿಗೆ ವಿಮಾನ ಸಂಪರ್ಕವನ್ನು ಪಡೆಯುವ ಆಗ್ನೇಯ ಏಷ್ಯಾದ ಮೊದಲ ಅಂತಾರಾಷ್ಟ್ರೀಯ ತಾಣವಾಗಿ ಸಿಂಗಾಪುರ(Singapore) ಗುರುತಿಸಿಕೊಳ್ಳಲಿದೆ. ಈವರೆಗೆ, ಮಂಗಳೂರಿನಿಂದ ಎಲ್ಲಾ ಅಂತರಾಷ್ಟ್ರೀಯ ವಿಮಾನಗಳು ಮಧ್ಯಪ್ರಾಚ್ಯ ದೇಶಗಳಿಗೆ ಮಾತ್ರ ಕಾರ್ಯಾಚರಣೆ ನಡೆಸುತ್ತಿದ್ದವು. ಮಂಗಳವಾರ ಮತ್ತು ಶುಕ್ರವಾರದಂದು ಉಭಯ ನಿಲ್ದಾಣಗಳ ನಡುವೆ ವಿಮಾನಗಳು ಸಂಚಾರ ಮಾಡಲಿವೆ.
ಮಂಗಳೂರು ಸಿಂಗಾಪುರ ನಡುವಿನ ವಿಮಾನದ ಸಮಯ ಹೀಗಿದೆ. ವಿಮಾನ ಸಂಖ್ಯೆ IX 0862 ಮಂಗಳೂರಿನಿಂದ 5.55 ಗಂಟೆಗೆ ಹೊರಟು 13.25 ಗಂಟೆಗೆ ಸಿಂಗಾಪುರ ತಲುಪಲಿದೆ. ವಿಮಾನ ಸಂಖ್ಯೆ IX 0861 ಸಿಂಗಾಪುರದಿಂದ 14.25 ಗಂಟೆಗೆ ಹೊರಟು 16.55 ಗಂಟೆಗೆ ಮಂಗಳೂರಿಗೆ ಆಗಮಿಸಲಿದೆ.
ಇದನ್ನೂ ಓದಿ: Hubballi: ರಾಜ್ಯದಲ್ಲೇ ಮೊದಲ ಬಾರಿಗೆ ಸರ್ಕಾರಿ ಕಾಲೇಜಿನಲ್ಲಿ IVF ಕೇಂದ್ರ ಸ್ಥಾಪನೆ- ಶೀಘ್ರದಲ್ಲೇ ಕಾರ್ಯಾರಂಭ
ಮಂಗಳೂರು ದೆಹಲಿ ಮಧ್ಯೆ ಪ್ರತಿದಿನ ನೇರ ವಿಮಾನ
ಏರ್ ಇಂಡಿಯಾ ಎಕ್ಸ್ಪ್ರೆಸ್ ಫೆಬ್ರವರಿ1 ರಿಂದ ಮಂಗಳೂರು ಮತ್ತು ದೆಹಲಿ ನಡುವೆ ಪ್ರತಿ ದಿನ ನೇರ ವಿಮಾನಯಾನ ಸೇವೆ ಒದಗಿಸಲಿದೆ. ವಿಮಾನ ಸಂಖ್ಯೆ IX 1552 ಮಂಗಳೂರಿನಿಂದ 6.40 ಗಂಟೆಗೆ ಹೊರಟು 9.35 ಗಂಟೆಗೆ ದೆಹಲಿಗೆ ತಲುಪಲಿದೆ. ವಿಮಾನ ಸಂಖ್ಯೆ IX 2768 ದೆಹಲಿಯಿಂದ 6.40 ಗಂಟೆಗೆ ಹೊರಟು ಮಂಗಳೂರಿಗೆ 9.35 ಗಂಟೆಗೆ ತಲುಪಲಿದೆ.
ಮಂಗಳೂರು ಪುಣೆ ನೇರ ವಿಮಾನ ವೇಳಾಪಟ್ಟಿ
ಏರ್ ಇಂಡಿಯಾ ಎಕ್ಸ್ಪ್ರೆಸ್ ಜ.4ರಿಂದ ಮಂಗಳೂರು ಮತ್ತು ಪುಣೆ ನಡುವೆ ಎರಡು ನೇರ ವಿಮಾನಗಳನ್ನು ನಿರ್ವಹಿಸಲಿದೆ. ವಿಮಾನ ಸಂಖ್ಯೆ IX 2256 ಪುಣೆಯಿಂದ 8 ಗಂಟೆಗೆ ಹೊರಟು 9.25 ಗಂಟೆಗೆ ಪುಣೆಗೆ ತಲುಪುತ್ತದೆ. ವಿಮಾನ ಸಂಖ್ಯೆ 2257 ಪುಣೆಯಿಂದ 9.55 ಗಂಟೆಗೆ ಹೊರಟು 11.40 ಗಂಟೆಗೆ ಮಂಗಳೂರಿಗೆ ಆಗಮಿಸಲಿದೆ. ವಿಮಾನ ಸಂಖ್ಯೆ 2236 ಮಂಗಳೂರಿನಿಂದ 18.30 ಗಂಟೆಗೆ ಹೊರಟು 20.00 ಗಂಟೆಗೆ ಪುಣೆಗೆ ಮತ್ತು ವಿಮಾನ ಸಂಖ್ಯೆ 2237 ಪುಣೆಯಿಂದ 20.35 ಗಂಟೆಗೆ ಹೊರಟು 22.05 ಗಂಟೆಗೆ ಮಂಗಳೂರಿಗೆ ಆಗಮಿಸಲಿದೆ.
ಸಿಂಗಾಪುರ ಮಂಗಳೂರು ನೇರ ವಿಮಾನ ಸೇವೆ ಸಂಬಂಧ ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಸೆಪ್ಟೆಂಬರ್ನಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರಿಗೆ ಮನವಿ ಮಾಡಿದ್ದರು. ಸಿಂಗಾಪುರ ಮತ್ತು ಕರ್ನಾಟಕದ ಮಲೆನಾಡು ಹಾಗೂ ಕರಾವಳಿ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪನಿಯೊಂದರ ಮನವಿಯ ಮೇರೆಗೆ, ಚೌಟ ಅವರು ಮಂಗಳೂರು ಮತ್ತು ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣದ ನಡುವೆ ವಿಮಾನ ಸಂಚಾರ ಆರಂಭಿಸುವಂತೆ ಕೇಂದ್ರ ವಿಮಾನಯಾನ ಸಚಿವರಿಗೆ ಮನವಿ ಮಾಡಿದ್ದರು.
Mangalore,Dakshina Kannada,Karnataka
December 14, 2024 2:20 PM IST