Last Updated:
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನವಿ ಮುಂಬೈಗೆ ಡಿಸೆಂಬರ್ 25ರಿಂದ ಇಂಡಿಗೋ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ದೈನಂದಿನ 5 ನೇರ ವಿಮಾನ ಸೇವೆ ಆರಂಭವಾಗಲಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Airport) ಮತ್ತು ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಡಿಸೆಂಬರ್ 25 ರಿಂದ ನೇರ ದೈನಂದಿನ (Daily) ವಿಮಾನ ಸೇವೆ ಆರಂಭವಾಗಲಿದೆ. ಈ ಸೇವೆಯನ್ನು ದೇಶದ ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೋ (Indigo) ನಡೆಸಲಿದೆ.
ಈ ಹೊಸ ಮಾರ್ಗದಲ್ಲಿ ಮಂಗಳೂರು – ನವಿ ಮುಂಬೈ ಒಟ್ಟು 5 ದೈನಂದಿನ ವಿಮಾನಗಳು ಸಂಚಾರ ಆರಂಭಿಸಲಿವೆ. ಅದರಲ್ಲಿ 4 ಇಂಡಿಗೋ ಸಂಸ್ಥೆಯ ವಿಮಾನಗಳಾಗಿವೆ. ಒಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಯದು.
ವೇಳಾಪಟ್ಟಿಯ ವಿವರ ಹೀಗಿದೆ
- ನವಿ ಮುಂಬೈ – ಮಂಗಳೂರು (6E 865) ನಡುವೆ ಬೆಳಗ್ಗೆ 10:40 ಮತ್ತು ಮಧ್ಯಾಹ್ನ 12:10ಕ್ಕೆ ಪ್ರತಿದಿನವೂ ವಿಮಾನ ಸಂಚಾರ ನಡೆಯಲಿದೆ.
- ಮಂಗಳೂರು – ನವಿ ಮುಂಬೈ (6E 866) ನಡುವೆ ಸೋಮವಾರ ಮತ್ತು ಗುರುವಾರ ಸಂಜೆ 05ಕ್ಕೆ ಮತ್ತು 5.45ಕ್ಕೆ ವಿಮಾನ ಸಂಚಾರವಿರಲಿದೆ.
- ಮಂಗಳೂರು – ನವಿ ಮುಂಬೈ (6E 866) ನಡುವೆ ಮಂಗಳವಾರ, ಬುಧವಾರ, ಶುಕ್ರವಾರ, ಶನಿವಾರ, ರವಿವಾರ ಮಧ್ಯಾಹ್ನ 12:40ಕ್ಕೆ ಮತ್ತು 2:20ಕ್ಕೆ ವಿಮಾನ ಸಂಚಾರ ಇರಲಿದೆ.
ಕರಾವಳಿಗೆ ಖುಷಿಯ ಸುದ್ದಿ
ಈ ಹೊಸ ಸಂಪರ್ಕದಿಂದ ವ್ಯಾಪಾರಿಗಳು, ಪ್ರವಾಸಿಗರು ಹಾಗೂ ಕರಾವಳಿ-ಮುಂಬೈ ನಡುವೆ ಓಡಾಡುವ ಸಾವಿರಾರು ಮಂದಿಗೆ ದೊಡ್ಡ ಮಟ್ಟದ ಸೌಲಭ್ಯವಾಗಲಿದೆ. ಪ್ರಸ್ತುತ ಮಂಗಳೂರು ವಿಮಾನ ನಿಲ್ದಾಣದಿಂದ ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಮುಂಬೈ (ಛತ್ರಪತಿ ಶಿವಾಜಿ) ಹಾಗೂ ತಿರುವನಂತಪುರಂ – ಈ ಆರು ದೇಶೀಯ ತಾಣಗಳಿಗೆ ವಿಮಾನ ಸಂಪರ್ಕವಿದೆ. ನವಿ ಮುಂಬೈ ಏಳನೇ ದೇಶೀಯ ಗಮ್ಯಸ್ಥಾನವಾಗಲಿದೆ. ಈ ಸೇವೆ ಕ್ರಿಸ್‌ಮಸ್ ದಿನದಿಂದಲೇ ಆರಂಭವಾಗುತ್ತಿರುವುದು ಪ್ರವಾಸಿಗರಿಗೆ ಸಿಹಿ ಸುದ್ದಿಯಾಗಿದೆ.
Mangalore,Dakshina Kannada,Karnataka
November 30, 2025 5:23 PM IST