Ajit Agarkar:ಆಯ್ಕೆ ಸಮಿತಿ ವಿರುದ್ಧ ಶಮಿ ಆಕ್ರೋಶ! ಕೊನೆಗೂ ಪ್ರತಿಕ್ರಿಯಿಸಿದ ಚೀಫ್ ಸೆಲೆಕ್ಟರ್ ಅಗರ್ಕರ್ | Shami’s Snub Sparks Controversy: Agarkar Breaks Silence on Fitness Concerns | ಕ್ರೀಡೆ

Ajit Agarkar:ಆಯ್ಕೆ ಸಮಿತಿ ವಿರುದ್ಧ ಶಮಿ ಆಕ್ರೋಶ! ಕೊನೆಗೂ ಪ್ರತಿಕ್ರಿಯಿಸಿದ ಚೀಫ್ ಸೆಲೆಕ್ಟರ್ ಅಗರ್ಕರ್ | Shami’s Snub Sparks Controversy: Agarkar Breaks Silence on Fitness Concerns | ಕ್ರೀಡೆ

Last Updated:


ಚಾಂಪಿಯನ್ಸ್ ಟೂರ್ನಮೆಂಟ್‌ನಲ್ಲಿ ಒಂಬತ್ತು ವಿಕೆಟ್‌ಗಳನ್ನು ಪಡೆದಿದ್ದ ಶಮಿ, ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರೊಂದಿಗೆ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. ಆದರೆ ಆಯ್ಕೆದಾರರು ಈ ಬಲಗೈ ವೇಗಿಗೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾದ ತಂಡದಲ್ಲಿ ಸ್ಥಾನ ನೀಡಿಲ್ಲ.

ಅಗರ್ಕರ್-ಶಮಿಅಗರ್ಕರ್-ಶಮಿ
ಅಗರ್ಕರ್-ಶಮಿ

ಆಸ್ಟ್ರೇಲಿಯಾ ಪ್ರವಾಸಕ್ಕೆ (Australia Tour) ಆಯ್ಕೆಯಾಗದ ಕಾರಣಕ್ಕೆ ಟೀಮ್ ಇಂಡಿಯಾದ ಹಿರಿಯ ವೇಗಿ ಮೊಹಮ್ಮದ್ ಶಮಿ (Mohammed Shami) ಅವರ ಆಕ್ರೋಶದ ಕಾಮೆಂಟ್‌ಗಳಿಗೆ ಬಿಸಿಸಿಐ (BCCI) ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಪ್ರತಿಕ್ರಿಯಿಸಿದ್ದಾರೆ. ಶಮಿ ನಿಜವಾಗಿಯೂ ಫಿಟ್ ಆಗಿದ್ದರೆ, ಅವರು ಖಂಡಿತವಾಗಿಯೂ ತಂಡದಲ್ಲಿ ಇರುತ್ತಿದ್ದರು ಎಂಬ ತಮ್ಮ ನಿರ್ಧಾರವನ್ನು ಅಗರ್ಕರ್ ಸಮರ್ಥಿಸಿಕೊಂಡಿದ್ದಾರೆ. ಶಮಿ ಕೊನೆಯ ಬಾರಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ-2025 ರಲ್ಲಿ ಟೀಮ್ ಇಂಡಿಯಾ ಪರ ಆಡಿದ್ದರು.

ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್

ಚಾಂಪಿಯನ್ಸ್ ಟೂರ್ನಮೆಂಟ್‌ನಲ್ಲಿ ಒಂಬತ್ತು ವಿಕೆಟ್‌ಗಳನ್ನು ಪಡೆದಿದ್ದ ಶಮಿ, ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರೊಂದಿಗೆ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. ಆದರೆ ಆಯ್ಕೆದಾರರು ಈ ಬಲಗೈ ವೇಗಿಗೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾದ ತಂಡದಲ್ಲಿ ಸ್ಥಾನ ನೀಡಿಲ್ಲ.

ಈ ವಿಷಯದ ಕುರಿತು ತಂಡದ ಪ್ರಕಟಣೆಯ ಸಂದರ್ಭದಲ್ಲಿ ಮಾತನಾಡಿದ ಅಗರ್ಕರ್, ಶಮಿ ಅವರ ಫಿಟ್‌ನೆಸ್ ಬಗ್ಗೆ ತಮಗೆ ಯಾವುದೇ ಅಪ್‌ಡೇಟ್ ಇಲ್ಲ ಎಂದು ಹೇಳಿದ್ದರು. ಈ ಸಂದರ್ಭದಲ್ಲಿ, ಖಾಸಗಿ ಚಾನೆಲ್​​ಗಳಿಗೆ ನೀಡಿದ ಸಂದರ್ಶನದಲ್ಲಿ ಶಮಿ ತಾವೂ ಸಂಪೂರ್ಣವಾಗಿ ಫಿಟ್ ಆಗಿರುವುದಾಗಿ ಹೇಳಿದ್ದರು. ಆಯ್ಕೆದಾರರ ವರ್ತನೆಯನ್ನು ಟೀಕಿಸಿದ ಅವರು, ತಾವು ರಣಜಿ ಟ್ರೋಫಿ ಆಡಬಹುದು, ಆದರೆ ಏಕದಿನ ಪಂದ್ಯಗಳಲ್ಲಿ ಆಡಲು ಸಾಧ್ಯವಿಲ್ಲವೇ ಎಂದು ಅಗರ್ಕರ್​ ಹೇಳಿಕೆಗೆ ತಿರುಗೇಟು ನೀಡಿದ್ದರು.

ಅಪ್​ಡೇಟ್ ಕೊಡುವುದು ನನ್ನ ಕೆಲಸವಲ್ಲ

ನನ್ನ ಫಿಟ್ನೆಸ್ ಬಗ್ಗೆ ಯಾರಾದರೂ ಕೇಳಿದ್ರೆ ತಾವು ಉತ್ತರಿಸುತ್ತಿದ್ದೆ, ಆದರೆ ನಾನು ಫಿಟ್ ಆಗಿದ್ದೇನೇ ಎಂದು ಸ್ವತಃ ನಾನೆ ಹೇಳಲು ಸಾಧ್ಯವಿಲ್ಲ. ಹೀಗಾಗಿ, ಆಯ್ಕೆ ಪ್ರಕ್ರಿಯೆಯ ಸಮಯದಲ್ಲಿ ಯಾರೂ ತಮ್ಮನ್ನು ಸಂಪರ್ಕಿಸಿಲ್ಲ ಎಂದು ಪರೋಕ್ಷವಾಗಿ ಆಯ್ಕೆ ಸಮಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಈ ವಿಷಯದ ಬಗ್ಗೆ ಅಗರ್ಕರ್ ಪ್ರತಿಕ್ರಿಯಿಸಿದ್ದಾರೆ.

ಎನ್‌ಡಿಟಿವಿ ವಿಶ್ವ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಅಗರ್ಕರ್, ಶಮಿ ಬಗ್ಗೆ ತಮ್ಮ ನಿರ್ಧಾರ ಸರಿಯಾಗಿದೆ ಎಂದು ಹೇಳಿದ್ದಾರೆ. “ಅವರು ನೇರವಾಗಿ ಮಾತನಾಡಿದ್ದರೆ, ನಾನು ಅದಕ್ಕೆ ಪ್ರತಿಕ್ರಿಯಿಸುತ್ತಿದ್ದೆ. ಆದರೆ ಅವರು ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿರುವ ಅವರ ಉದ್ದೇಶ ಏನಿತ್ತು ಎಂದು ನನಗೆ ತಿಳಿದಿಲ್ಲ. ನನ್ನ ಕೇಳಿದ್ದರೆ ನಾನು ಇದರ ಬಗ್ಗೆ ಅವರಿಗೆ ಫೋನ್‌ನಲ್ಲಿ ಉತ್ತರಿಸುತ್ತಿದ್ದೆ. ನನ್ನ ಫೋನ್ ಪ್ರತಿ ಆಟಗಾರನಿಗೂ ಯಾವಾಗಲೂ ಆನ್ ಆಗಿರುತ್ತದೆ. ಕಳೆದ ಕೆಲವು ತಿಂಗಳುಗಳಿಂದ ನಾನು ಅವರೊಂದಿಗೆ ಆಗಾಗ್ಗೆ ಚಾಟ್ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಏನಾಗುತ್ತದೆ ಎಂದು ನೋಡೋಣ

ನಾನು ಈಗ ಇಲ್ಲಿ ನಿಮಗೆ ಹೆಡ್​ಲೈನ್ ಆಗುವ ರೀತಿ ಯಾವುದೇ ಹೇಳಿಕೆ ನೀಡಲು ಬಯಸುವುದಿಲ್ಲ. ಶಮಿ ಟೀಮ್ ಇಂಡಿಯಾ ಪರ ಅದ್ಭುತ ಪ್ರದರ್ಶನ ನೀಡಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಏನಾದರೂ ಇದ್ದರೆ, ನಾವು ಪರಸ್ಪರ ಮಾತನಾಡುತ್ತೇವೆ.

ಇಂಗ್ಲೆಂಡ್ ಪ್ರವಾಸಕ್ಕೂ ಮುಂಚೆಯೇ, ಅವರು ಫಿಟ್ ಆಗಿದ್ದರೆ, ನಾವು ಅವರನ್ನು ಖಂಡಿತವಾಗಿಯೂ ಪ್ರವಾಸಕ್ಕೆ ಕಳುಹಿಸುತ್ತೇವೆ ಎಂದು ನಾವು ಹೇಳಿದ್ದೆವು. ದುರದೃಷ್ಟವಶಾತ್, ಅವರು ಆಗ ಫಿಟ್ ಆಗಿರಲಿಲ್ಲ. ಮತ್ತು ದೇಶೀಯ ಕ್ರಿಕೆಟ್ ಋತುವು ಇದೀಗ ಪ್ರಾರಂಭವಾಗಿದೆ. ಏನಾಗುತ್ತದೆ ಎಂದು ನೋಡೋಣ,” ಎಂದು ಅಗರ್ಕರ್ ಸ್ಪಷ್ಟಪಡಿಸಿದ್ದಾರೆ.