Anam Mirza: ಹಣ ಉಳಿಸಲು ಆ ಎಲ್ಲಾ ಆ್ಯಪ್‌ಗಳನ್ನು ಡಿಲೀಟ್‌ ಮಾಡಿದ್ದಾರಂತೆ ಸಾನಿಯಾ ಮಿರ್ಜಾ ಸಹೋದರಿ ಅನಮ್ ಮಿರ್ಜಾ: ಯಾಕೆ ಗೊತ್ತಾ? | Sania Mirza’s Sister Shares Smart Tip: How Deleting UPI Apps Changed Her Spending Habits

Anam Mirza: ಹಣ ಉಳಿಸಲು ಆ ಎಲ್ಲಾ ಆ್ಯಪ್‌ಗಳನ್ನು ಡಿಲೀಟ್‌ ಮಾಡಿದ್ದಾರಂತೆ ಸಾನಿಯಾ ಮಿರ್ಜಾ ಸಹೋದರಿ ಅನಮ್ ಮಿರ್ಜಾ: ಯಾಕೆ ಗೊತ್ತಾ? | Sania Mirza’s Sister Shares Smart Tip: How Deleting UPI Apps Changed Her Spending Habits
ಯುಪಿಐ ಆ್ಯಪ್‌ಗಳನ್ನು ಡಿಲಿಟ್‌ ಮಾಡಿದ ಅನಮ್ ಮಿರ್ಜಾ 

ಇತ್ತೀಚೆಗೆ ಸಾನಿಯಾ ಮಿರ್ಜಾ ಅವರ ಸಹೋದರಿ ಅನಮ್ ಮಿರ್ಜಾ ಅವರು ಕೂಡ ಈ ಎಲ್ಲಾ ಆ್ಯಪ್‌ಗಳನ್ನು ಡಿಲಿಟ್‌ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್ ವೀಡಿಯೊದಲ್ಲಿ, ಅವರು ಯುಪಿಐ ಅಪ್ಲಿಕೇಶನ್‌ಗಳನ್ನು ಬಳಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದೇನೆ ಮತ್ತು ಇಂತಹ ಆ್ಯಪ್‌ಗಳನ್ನು ಅನ್‌ಇನ್‌ಸ್ಟಾಲ್‌ ಮಾಡಿದ್ದೇನೆ, ಹಣ ಉಳಿಸಲು ಇದೊಂದು ಸಣ್ಣ ಉಪಾಯ ಎಂದಿದ್ದಾರೆ.

ಈಗ ನನ್ನ ಬಳಿ ತ್ವರಿತ ಪಾವತಿಯ ಯಾವ ಅಪ್ಲಿಕೇಷನ್‌ಗಳು ಕೂಡ ಇಲ್ಲ. ಈ ವರ್ಷ, ನಾನು ನನ್ನ ಯುಪಿಐ ಖಾತೆಗಳನ್ನು ತೆಗೆದು ಹಾಕಿದ್ದೇನೆ. ಈ ವರ್ಷ ನಾನು ಮಾಡಿದ ಉತ್ತಮ ನಿರ್ಧಾರ ಇದು ಎಂದು ಹೇಳಿಕೊಂಡಿದ್ದಾರೆ.

ಉಳಿತಾಯದ ಮಾರ್ಗ

ಇದು  ಖರ್ಚು ಮಾಡುವ ಬಗ್ಗೆ ಹೆಚ್ಚು ಜಾಗರೂಕರಾಗಲು ನನಗೆ ಸಹಾಯ ಮಾಡಿತು. ಮೊದಲಿಗೆ ಈ ಅಪ್ಲಿಕೇಷನ್‌ ಇಲ್ಲದೇ ವ್ಯವಹರಿಸುವುದು ಕಷ್ಟವಾಗಿತ್ತು, ಆದರೆ ಈಗ ಎಲ್ಲಾ ಸರಿ ಹೋಗಿದೆ. ನಾನೀಗ ನಗದು ವ್ಯವಹಾರವನ್ನೇ ಮಾಡುತ್ತಿದ್ದೇನೆ ಎಂದಿದ್ದಾರೆ.

ಅನಮ್ ಮಿರ್ಜಾ ತಮ್ಮ ಇನ್‌ಸ್ಟಾಗ್ರಾಮ್‌ ಪೇಜಿನಲ್ಲಿ ‘ಲಿಟಲ್ ಚೇಂಜಸ್, ಬಿಗ್ ಇಂಪ್ಯಾಕ್ಟ್’ ಸರಣಿಯ ಭಾಗವಾಗಿ ಈ ಸಲಹೆಯನ್ನು ಹಂಚಿಕೊಂಡಿದ್ದಾರೆ. ತ್ವರಿತ ಪಾವತಿಗಳನ್ನು ತಪ್ಪಿಸುವುದರಿಂದ ತನ್ನ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದರ ಬಗ್ಗೆ ಹೆಚ್ಚಿನ ಅರಿವು ಮೂಡಿತು ಮತ್ತು ಹೆಚ್ಚಿನದನ್ನು ಉಳಿಸಲು ಸಹಾಯವಾಯಿತು ಎಂದು ಅನಮ್ ಹೇಳಿದರು.

ಏನಂದ್ರು ನೆಟ್ಟಿಗರು?

ಅನಮ್‌ ಮಿರ್ಜಾ ಈ ಸಲಹೆಗೆ ಸಾಮಾಜಿಕ ಮಾಧ್ಯಮದಲ್ಲಿ ತರಹೇವಾರಿ ಪ್ರತಿಕ್ರಿಯೆಗಳು ಬಂದಿವೆ.  “ನೀವು ಈಗಾಗಲೇ ಶ್ರೀಮಂತರಾಗಿರುವುದರಿಂದ ಇದು ನಿಮಗೆ ಸರಿಹೊಂದುತ್ತದೆ. ನಮ್ಮಂತಹ ಮಧ್ಯಮ ವರ್ಗದ ಜನರು ಮಾತ್ರ ಯುಪಿಐ ಹೊಂದಿರುವುದು ಎಷ್ಟು ಅನುಕೂಲಕರವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಲ್ಲರು. ಅನಗತ್ಯ ಖರ್ಚುಗಳನ್ನು ಮಾಡುವ ಮೊದಲು ಜನರು ಖಂಡಿತವಾಗಿಯೂ ಯೋಚಿಸಬೇಕು, ಆದರೆ ಅದಕ್ಕಾಗಿ ಇಂತಹ ಅಪ್ಲಿಕೇಷನ್‌ಗಳನ್ನು ಡಿಲಿಟ್‌ ಮಾಡುವ ಅಗತ್ಯವಿಲ್ಲ” ಎಂದು ಒಬ್ಬ ನೆಟ್ಟಿಗ ಪ್ರತಿಕ್ರಿಯಿಸಿದ್ದಾರೆ.

ಇತರ ಕೆಲವು ಬಳಕೆದಾರರು ಅನಮ್ ಮಿರ್ಜಾ ಅವರ ಉಪಕ್ರಮವನ್ನು ಮೆಚ್ಚಿದ್ದಾರೆ. ಇನ್ನೊಬ್ಬ ಬಳಕೆದಾರ ನಾನು ಕೂಡ ಇದನ್ನು ಕಳೆದ ಆರು ತಿಂಗಳಿಂದ ರೂಢಿಸಿಕೊಂಡಿದ್ದೇನೆ. ಇದು ನನಗೆ ದೊಡ್ಡ ವ್ಯತ್ಯಾಸವನ್ನುಂಟುಮಾಡಿದೆ. ನನ್ನ ಖರ್ಚು ಕೂಡ ಕಡಿಮೆಯಾಗಿದೆ ಎಂದಿದ್ದಾರೆ.

ಭಾರತದಲ್ಲಿ ಯುಪಿಐ ಕಾರುಬಾರು

ಮೇ 2025 ರ ಹೊತ್ತಿಗೆ, 673 ಬ್ಯಾಂಕುಗಳು ಯುಪಿಐನಲ್ಲಿ ಸಕ್ರಿಯವಾಗಿವೆ ಮತ್ತು ₹25 ಲಕ್ಷ ಕೋಟಿಗೂ ಹೆಚ್ಚು ಮೌಲ್ಯದ ವಹಿವಾಟುಗಳನ್ನು ಹೊಂದಿವೆ.  ಎಸ್‌ಬಿಐ ಪ್ರತಿ ನಿಮಿಷಕ್ಕೆ ಸುಮಾರು 5,000 ವಹಿವಾಟುಗಳೊಂದಿಗೆ ಯುಪಿಐ  ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿದೆ. ಇನ್ನು ಎಚ್‌ಡಿಎಫ್‌ಸಿ ಬ್ಯಾಂಕ್ ಪ್ರತಿ ನಿಮಿಷಕ್ಕೆ ಸುಮಾರು 1,500 ವಹಿವಾಟುಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.