Anaya Bangar: ನಗ್ನ ಫೋಟೋ ಕಳಿಸಿದ್ರಂತೆ ಟೀಂ ಇಂಡಿಯಾ ಆಟಗಾರ! ಸಂಜಯ್ ಬಂಗಾರ್ ಪುತ್ರಿ ಅನಾಯಾ ಗಂಭೀರ ಆರೋಪ | Team India Ex Cricketer Sanjay Bangar Daughter Anaya Bangar Serious Allegation

Anaya Bangar: ನಗ್ನ ಫೋಟೋ ಕಳಿಸಿದ್ರಂತೆ ಟೀಂ ಇಂಡಿಯಾ ಆಟಗಾರ! ಸಂಜಯ್ ಬಂಗಾರ್ ಪುತ್ರಿ ಅನಾಯಾ ಗಂಭೀರ ಆರೋಪ | Team India Ex Cricketer Sanjay Bangar Daughter Anaya Bangar Serious Allegation

Last Updated:

ಆರ್ಯನ್ ಬದಲು ತಮ್ಮ ಹೆಸರನ್ನು ಅನಯಾ ಬಂಗಾರ್ ಅಂತ ಬದಲಾಯಿಸಿಕೊಂಡಿದ್ದಾರೆ. ಈ ನಡುವೆ ಅವರು, ಟೀಂ ಇಂಡಿಯಾ ಕ್ರಿಕೆಟಿಗರೊಬ್ಬರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಅನಯಾ ಬಂಗಾರ್ಅನಯಾ ಬಂಗಾರ್
ಅನಯಾ ಬಂಗಾರ್

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಮಾಜಿ ಕೋಚ್‌ ಸಂಜಯ್‌ ಬಂಗಾರ್‌ (Sanjay Bangar) ಅವರ ಮಗ ಆರ್ಯನ್‌ (Aryan Bangar) ಸದ್ಯ ಹುಡುಗಿಯಾಗಿ ಪರಿವರ್ತನೆ ಆಗಿದ್ದಾರೆ. ಮಾತ್ರವಲ್ಲ ತಮ್ಮ ಹೆಸರನ್ನೂ ಕೂಡ ಬದಲಾಯಿಸಿಕೊಂಡಿದ್ದಾರೆ. ಆರ್ಯನ್ ಬದಲು ತಮ್ಮ ಹೆಸರನ್ನು ಅನಯಾ ಬಂಗಾರ್ (Anaya Bangar) ಅಂತ ಬದಲಾಯಿಸಿಕೊಂಡಿದ್ದಾರೆ. ಈ ನಡುವೆ ಅವರು, ಟೀಂ ಇಂಡಿಯಾ ಕ್ರಿಕೆಟಿಗರೊಬ್ಬರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತನ್ನ ‘ನಗ್ನ ಚಿತ್ರ’ (Nude Photo) ಕಳುಹಿಸಿ ಕಿರುಕುಳ ನೀಡಿದ್ದಾರೆ ಎಂದು ಅನಯಾ ಗಂಭೀರ ಆರೋಪ ಮಾಡಿದ್ದಾರೆ.

ನಾನು 8 ವರ್ಷದವನಿದ್ದಾಗ ಹುಡುಗಿಯಾಗಬೇಕೆಂದು ಬಯಸಿದ್ದೆ

ಆಕೆಯ ಚಿಕಿತ್ಸೆಯ ಕುರಿತು ಸಾಕಷ್ಟು ಚರ್ಚೆ ನಡೆದಿದ್ದರೂ, ಆ ಸಮಯದಲ್ಲಿ ಏನಾಯಿತು ಎಂಬುದನ್ನು ಅವರು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಚಿಕಿತ್ಸೆ ನಂತರ ಅವಳು ತನ್ನ ಹೆಸರನ್ನು ಅನಯಾ ಎಂದು ಬದಲಾಯಿಸಿಕೊಂಡಳು ಮತ್ತು ಅವಳು ನೀಡಿರುವ ಹೇಳಿಕೆಯಲ್ಲಿ ನಾನು 8 ವರ್ಷದವನಿದ್ದಾಗ ಹುಡುಗಿಯಾಗಬೇಕೆಂದು ಬಯಸಿರುವುದಾಗಿ ಹೇಳಿದ್ದಾರೆ. ನನ್ನ ತಾಯಿಯ ಬಟ್ಟೆಗಳನ್ನು ತೆಗೆದುಕೊಂಡು ನಾನು ಹಾಕಿಕೊಳ್ಳುತ್ತಿದ್ದೆ. ನಾನು ಕನ್ನಡಿಯಲ್ಲಿ ನೋಡಿಕೊಂಡು ನಾನು ಹುಡುಗಿಯಾಗಬೇಕೆಂದು ಬಯಸುತ್ತಿದ್ದೆ ಎಂದು ಹೇಳುತ್ತಿದ್ದೆ ಎಂದರು.

ಹಲವು ಯುವ ಆಟಗಾರರ ಜೊತರೆ ಕ್ರಿಕೆಟ್

ತಾವು ನಾನು ಯಶಸ್ವಿ ಜೈಸ್ವಾಲ್, ಸರ್ಫರಾಜ್ ಖಾನ್ ಮತ್ತು ಇತರೆ ಆಟಗಾರರೊಂದಿಗೆ ಕ್ರಿಕೆಟ್ ಆಡಿರುವುದಾಗಿ ತಿಳಿಸಿದರು. ಆದರೆ ನಾನು ಯಾರೆಂದು ಎಲ್ಲರಿಂದ ಮರೆಮಾಡಬೇಕಾಯಿತು. ಏಕೆಂದರೆ ಕ್ರಿಕೆಟ್‌ ಪುರುಷ ಪ್ರಧಾನವಾಗಿದೆ ಎಂದರು. ನಾನು ಇದಕ್ಕೆ ಚಿಕಿತ್ಸೆ ಪಡೆದ ನಂತರ, ಕೆಲವರು ನನ್ನನ್ನು ಬೆಂಬಲಿಸಿದರು. ಆದರೆ ಕೆಲವರು ನನ್ನನ್ನೂ ನಿಂದಿಸಿದರು. ಕೆಲವು ಕ್ರಿಕೆಟಿಗರು ತಮ್ಮ ನಗ್ನ ಫೋಟೋಗಳನ್ನು ಸಹ ನನಗೆ ಕಳುಹಿಸಿದ್ದಾರೆ ಎಂದು ಸ್ಪೋಟಕ ಆರೋಪ ಮಾಡಿದರು.

ಇದನ್ನೂ ಓದಿ: Shrestha : ಈ ಫೋಟೋದಲ್ಲಿರೋ ಚೆಂದುಳ್ಳಿ ಚೆಲುವೆ ಯಾರ್‌ ಗೊತ್ತಾ? ಟೀಂ ಇಂಡಿಯಾ ಸ್ಟಾರ್‌ ಪ್ಲೇಯರ್‌ ಸಹೋದರಿ ಈಕೆ!

ಕೆಲವರು ನನ್ನ ನಿರ್ಧಾರ ಬೆಂಬಲಿಸದರು

ಒಬ್ಬ ವ್ಯಕ್ತಿ ನನ್ನನ್ನು ಬೆಂಬಲಿಸಿ ಇತರರೊಂದಿಗೆ ಮಾತನಾಡಿದರೂ, ನಾನು ಒಬ್ಬಂಟಿಯಾಗಿದ್ದಾಗ ಅವನು ನನ್ನ ಪಕ್ಕದಲ್ಲಿ ಕುಳಿತು ನನ್ನ ಫೋಟೋಗಳನ್ನು ಕೇಳುತ್ತಿದ್ದ. ನಾನು ಹಿರಿಯ ಕ್ರಿಕೆಟಿಗರಿಗೂ ನನ್ನ ಪರಿಸ್ಥಿತಿಯನ್ನು ವಿವರಿಸಿದೆ. ಆತ ಇನ್ನೊಂದು ದಿನ ನನ್ನ ಜೊತೆ ಕಾರಿನಲ್ಲಿ ಬಂದಿದ್ದ ನಾವು ಒಟ್ಟಿಗೆ ಇರಬಹುದೇ ಎಂದು ಕೂಡ ಕೇಳಿದ್ದ ಎಂದು ಆಟಗಾರನ ಹೆಸರು ಹೇಳದೆ ಆರೋಪಿಸಿದರು.

2023 ರಲ್ಲಿ ಮಹಿಳಾ ತಂಡಕ್ಕೆ ಆಡುವ ಕನಸು ಭಗ್ನ

ಅನಯಾ ಬಾಲ್ಯದಿಂದಲೂ ತನ್ನ ತಂದೆಯಂತೆ ಕ್ರಿಕೆಟಿಗನಾಗಲು ಶ್ರಮಿಸುತ್ತಿದ್ದ. ಆದರೆ 2023 ರಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಪರ್ಧೆಗಳಲ್ಲಿ ಭಾಗವಹಿಸುವುದನ್ನು ಟ್ರಾನ್ಸ್ಜೆಂಡರ್‌ಗಳಿಗೆ ನಿಷೇಧಿಸಿದರಿಂದ ಅನಯಳ ಕನಸು ಅಲ್ಲಿಗೆ ಕೊನೆಗೊಂಡಿತು. ಈ ಬಗ್ಗೆ ಅನಯಾ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ವಿಷಾದ ಕೂಡ ವ್ಯಕ್ತಪಡಿಸಿದ್ದರು. ಅನಯಾ ಪ್ರಸ್ತುತ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ವಾಸಿಸುತ್ತಿದ್ದಾರೆ.