Anirudh Ravichander: CSK VS MI ಪಂದ್ಯದಲ್ಲಿ ಅನಿರುದ್ಧ್ ಹುಕುಂ ಪರ್ಫಾಮೆನ್ಸ್! ಸಲಾಂ ಹೊಡೆದ ಪ್ರೇಕ್ಷಕರು | Anirudh Ravichander sings Rajinikanth song at IPL 2025 Opening Ceremony

Anirudh Ravichander: CSK VS MI ಪಂದ್ಯದಲ್ಲಿ ಅನಿರುದ್ಧ್ ಹುಕುಂ ಪರ್ಫಾಮೆನ್ಸ್! ಸಲಾಂ ಹೊಡೆದ ಪ್ರೇಕ್ಷಕರು | Anirudh Ravichander sings Rajinikanth song at IPL 2025 Opening Ceremony

ಈಗ ಮತ್ತೆ ಐಪಿಎಲ್ ಅದ್ದೂರಿಯಿಂದ ಪ್ರಾರಂಭವಾಗಿದೆ. ಕೆಲ ದಿನಗಳ ಹಿಂದೆ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಮಧ್ಯದ ಪಂದ್ಯ ಪ್ರಾರಂಭಕ್ಕೂ ಮುನ್ನ ಬಾಲಿವುಡ್ಡಿನ ಕಿಂಗ್ ಖಾನ್ ಹಾಗೂ ಕ್ರಿಕೆಟ್ ಜಗತ್ತಿನ ಕಿಂಗ್ ಕೊಹ್ಲಿ ಒಟ್ಟಿಗೆ ನೃತ್ಯ ಮಾಡಿ ನೆರೆದಿದ್ದ ಪ್ರೇಕ್ಷಕರಿಗೆ ರೋಮಾಂಚನ ಉಂಟು ಮಾಡಿದ್ದರು.

ಇದೀಗ ನಿನ್ನೆಯಷ್ಟೇ ಮೊದಲ ಪದ್ಯವಾಡಿದ ಸಿಎಸ್ಕೆ ಹಾಗು ಮುಂಬೈ ಇಂಡಿಯನ್ಸ್ ಮಧ್ಯದ ನಡುವಿನ ಪಂದ್ಯಕ್ಕೂ ಮುನ್ನ ತಮಿಳಿನ ಸೆಲೆಬ್ರಿಟಿ ಸಿಂಗರ್ ಅನಿರುದ್ಧ್ ರವಿಚಂದ್ರನ್ ತಮ್ಮ ಅದ್ಭುತ ಪ್ರದರ್ಶನ ನೀಡಿ ಕ್ರಿಕೆಟ್ ಪ್ರೇಮಿಗಳಿಗೆ ರಸದೌತಣ ನೀಡಿದರು.

ತಮಿಳಿನ ಇತ್ತೀಚನ ಬ್ಲಾಕ್ ಬಸ್ಟರ್ ಚಿತ್ರ ಜೈಲರ್ ನ ಹುಕುಮ್, ಹಾಗೂ ವಿಜಯ್ ಅವರ ಅರೇಬಿಕ್ ಕುತು ಹಾಗೂ ಇತರೆ ಹಿಟ್ ಹಾಡುಗಳ ಪವರ್ ಪ್ಯಾಕ್ಡ್ ಪ್ರದರ್ಶನ ನೀಡಿದ ಅನಿರುದ್ಧ್ ಕ್ರೀಡಾಂಗಣದಲ್ಲಿ ನೆರೆದಿದ್ದ ಎಲ್ಲರೂ ಸ್ಟೆಪ್ ಹಾಕುವಂತೆ ಮಾಡಿದರು. ಇದೀಗ ಅವರ ಪ್ರದರ್ಶನದ ವಿಡಿಯೊ ತುಣುಕುಗಳು ಸಾಮಾಜಿಕ ಮಾಧ್ಯಮಗಳಾದ್ಯಂತ ಸಖತ್ ವೈರಲ್ ಆಗುತ್ತಿವೆ.

ಬಿಳಿ ಬಣ್ಣದ ಉಡುಪು ಧರಿಸಿ, ಅನಿರುದ್ಧ್ ತಮ್ಮ ಪ್ರದರ್ಶನದ ಮೂಲಕ ಪಂದ್ಯಕ್ಕೆ ಹಾಜರಿದ್ದ ಇಡೀ ಪ್ರೇಕ್ಷಕರನ್ನು ಮೋಡಿ ಮಾಡಿದರು. ಅವರು ಜೈಲರ್ ಚಿತ್ರದ ಹುಕುಂ ಹಾಡಲು ಪ್ರಾರಂಭಿಸುತ್ತಿದ್ದಂತೆ, ಆ ಸಂದರ್ಭವು ರಜನೀಕಾಂತ್ ಉತ್ಸವವಾಗಿ ಮಾರ್ಪಟ್ಟಿತೆಂದರೆ ತಪ್ಪಾಗಲಿಕ್ಕಿಲ್ಲ.

ಆ ಹಾಡಿನ ಜೊತೆಗೆ ಅಲ್ಲಿ ನೆರೆದಿದ್ದ ಎಲ್ಲ ಪ್ರೇಕ್ಷಕರು ಜೊತೆ ಜೊತೆಯಲ್ಲೇ ಹಾಡುತ್ತಾ ಪ್ರಸಿದ್ಧ ಗಾಯಕನಿಗೆ ಇನ್ನಷ್ಟು ಹುರಿದುಂಬಿಸಿದರು. ಅನಿರುಧ್ ಕೂಡ ಆ ರೋಮಾಂಚಕಾರಿ ವಾತಾವರಣವನ್ನು ಆನಂದಿಸಿದರು ಮತ್ತು ಅವರ ಪ್ರದರ್ಶನದ ಉದ್ದಕ್ಕೂ ಅವರು ದಣಿವರಿಯದೆ ಕುಣಿಯುತ್ತಲೇ ಇದ್ದರು.

ಈ ಎಲ್ಲ ಕಾರ್ಯಕ್ರಮ ನಡೆಯುವುದಕ್ಕಿಂತ ಕೆಲ ಸಮಯದ ಮೊದಲು ಅಂದರೆ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಸಿಎಸ್‌ಕೆ vs ಎಂಐ ಪಂದ್ಯ ನಡೆಯುವುದಕ್ಕೂ ಮುನ್ನ ಸಹಜವಾಗಿ ಪ್ರಾರಂಭಿಕವಾಗಿ ನಡೆಯುವ ಅದ್ದೂರಿ ಸಮಾರಂಭವು ಕ್ರೀಡಾಂಗಣದಲ್ಲಿ ಆ ಸಮಯದಲ್ಲಿ ಹಾಜರಿದ್ದ ಜನರಿಗೆ ಮಾತ್ರವೇ ಎಂಬುದಾಗಿ ಸ್ಟಾರ್ ಸ್ಪೋರ್ಟ್ಸ್ ಘೋಷಿಸಿತು.

ಏಕೆಂದರೆ ಕಾರ್ಯಕ್ರಮದ ಪ್ರಸಾರದ ಹಕ್ಕುಗಳು ಇನ್ನೂ ಲಭ್ಯವಾಗಿರಲಿಲ್ಲ. ಉದ್ಘಾಟನಾ ಸಮಾರಂಭದಲ್ಲಿ ಅನಿರುದ್ಧ್ ರವಿಚಂದರ್ ಅವರ ನೇರ ಪ್ರದರ್ಶನವನ್ನು ವೀಕ್ಷಿಸಲು ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳು ಇದರಿಂದ ಖಂಡಿತ ನಿರಾಶೆಗೊಂಡರು.

ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ನಾಲ್ಕು ವಿಕೆಟ್‌ಗಳ ಗೆಲುವಿನೊಂದಿಗೆ ತಮ್ಮ ಐಪಿಎಲ್ 2025 ಜರ್ನಿ ಆರಂಭಿಸಿತು. ಮುಂಬೈ ಇಂಡಿಯನ್ಸ್ ಬ್ಯಾಟಿಂಗ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿ ಒಂಬತ್ತು ವಿಕೆಟ್‌ಗೆ 155 ರನ್ ಗಳಿಸಿತು. ರೋಹಿತ್ ಶರ್ಮಾ ರನ್ ಗಳಿಸದೆ ಔಟಾಗುವುದರೊಂದಿಗೆ ಎಂಐ ತಂಡದ ಆರಂಭಿಕ ಸವಾಲುಗಳು ಹೆಚ್ಚಾದವು.

ಇದನ್ನೂ ಓದಿ: Jaat Trailer: ಸಿಕಂದರ್​​ಗಿಂತ ಬೆಟರ್ ಅಂತಿದ್ದಾರೆ ಜನ! ಜಾಟ್ ಪವರ್ ಪ್ಯಾಕ್ಡ್ ಟ್ರೈಲರ್​ಗೆ ಸಿನಿಪ್ರೇಮಿಗಳು ಫಿದಾ

ಅನಿರುಧ್ ಅವರ ಕೆಲಸದ ಬಗ್ಗೆ ಹೇಳುವುದಾದರೆ, 2025 ಅವರಿಗೆ ಒಂದು ಅದ್ಭುತ ವರ್ಷವಾಗಲಿದೆ. ತೆಲುಗಿನಲ್ಲಿ, ಅವರು ವಿಜಯ್ ದೇವರಕೊಂಡ ಅಭಿನಯದ ಕಿಂಗ್‌ಡಮ್‌ಗೆ ಸಂಗೀತ ಸಂಯೋಜಿಸುತ್ತಿದ್ದಾರೆ. ಈ ಚಿತ್ರವು ಮೇ 30 ರಂದು ಬಿಡುಗಡೆಯಾಗಲಿದೆ. ಅಲ್ಲದೆ ಅವರು ನಾನಿ ಮತ್ತು ಶ್ರೀಕಾಂತ್ ಒಡೆಲಾ ಅವರ ದಿ ಪ್ಯಾರಡೈಸ್‌ನ ಭಾಗವೂ ಆಗಿದ್ದಾರೆ.

ಇದಲ್ಲದೆ, ಅವರು ಚಿರಂಜೀವಿ ಮತ್ತು ಬಾಲಕೃಷ್ಣ ನಟಿಸಿದ ಪ್ರಾಜೆಕ್ಟ್​ಗಳಲ್ಲಿಯೂ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ತಮಿಳಿನಲ್ಲಿ, ಅವರು ರಜನಿಕಾಂತ್ ನಟಿಸಿದ ಜೈಲರ್ 2 ಮತ್ತು ಕೂಲಿ ಚಿತ್ರಗಳಿಗೆ ಸಂಗೀತ ಸಂಯೋಜಿಸುತ್ತಿದ್ದಾರೆ.

ಇದನ್ನೂ ಓದಿ: Bigg Boss Rajath: ರೀಲ್ಸ್ ತಂದ ಆಪತ್ತು! FIR ಬೆನ್ನಲ್ಲೇ ರಜತ್ ಮೊಬೈಲ್ ಸ್ವಿಚ್‌ ಆಫ್! ಗಂಡನ ಬದಲು ವಿಚಾರಣೆಗೆ ಬಂದ ಪತ್ನಿ

ಅವರ ಇತರ ಚಿತ್ರಗಳಲ್ಲಿ ಪ್ರದೀಪ್ ರಂಗನಾಥನ್ ಅವರೊಂದಿಗೆ ಲವ್ ಇನ್ಶುರೆನ್ಸ್ ಕಂಪನಿ, ದಳಪತಿ ವಿಜಯ್ ನಟಿಸಿದ ಜನ ನಾಯಗನ್ ಮತ್ತು ಶಿವಕಾರ್ತಿಕೇಯನ್ ಅವರೊಂದಿಗಿನ ಮಧರಸಿ ಚಿತ್ರಗಳು ಸೇರಿವೆ.