Last Updated:
ಮಂಗಳೂರು ಚಾಲಿ ಅಡಕೆ ದರ ಕಳೆದೊಂದು ವಾರದಿಂದ ಇಳಿಕೆಯಾಗಿದ್ದು, ಹಳೆ ಅಡಕೆ 520 ರೂಪಾಯಿ, ಹೊಸದು 410 ರೂಪಾಯಿ. ಮಳೆ, ರೋಗ, ಆಮದು ಕಾರಣಕ್ಕೆ ಕೃಷಿಕರು ಆತಂಕದಲ್ಲಿದ್ದಾರೆ.
ಮಂಗಳೂರು: ಉತ್ತಮ ದರದಿಂದ (Rate) ಸಂತಸಗೊಂಡಿದ್ದ ಕರಾವಳಿಯ ಅಡಿಕೆ ಬೆಳೆಗಾರರ ಮುಖದಲ್ಲಿ ಮತ್ತೆ ನಿರಾಸೆ ಮೂಡಿದೆ. ಕಳೆದೊಂದು ವಾರದಿಂದ (Week) ಮಂಗಳೂರು ಚಾಲಿ ಅಡಕೆ ದರ ಕುಸಿಯುತ್ತಿದ್ದು, ಇಳಿಕೆಯ ಹಾದಿ ಹಿಡಿದಿದೆ. ಇದರಿಂದ ಅಡಿಕೆ ಬೆಳೆಗಾರರಿಗೆ ಆತಂಕ (tension) ಎದುರಾಗಿದೆ.
ಹಳೆ ಮತ್ತು ಹೊಸ ಅಡಕೆಗೆ ಪ್ರತೀ ಕೆಜಿಗೆ ಹತ್ತು ರೂಪಾಯಿಯಷ್ಟು ದರ ಕುಸಿತವಾಗಿದೆ. ಹಳೆ ಅಡಕೆಗೆ 520 ರೂಪಾಯಿ ಇದ್ರೆ ಹೊಸ ಅಡಿಕೆ ಕೆಜಿಗೆ 410 ರೂಪಾಯಿ ಆಸುಪಾಸು ದರದಲ್ಲಿ ಮಾರಾಟವಾಗುತ್ತಿದೆ.
ಈ ವರ್ಷದ ಅಡಿಕೆ ಫಸಲು ಕಡಿಮೆ ಇರುವ ಕಾರಣ ಕೃಷಿಕರಿಗೆ ಉತ್ತಮ ದರವೊಂದೇ ಸಮಾಧಾನ ಮೂಡಿಸಿತ್ತು. ಒಮ್ಮೆಲೇ ಏರಿದ್ದ ದರ ಈಗ ಇಳಿಕೆಯತ್ತ ಮುಖ ಮಾಡುತ್ತಿದ್ದು, ಕೃಷಿಕರಿಗೆ ನಿರಾಶೆ ಮೂಡಿಸಿದೆ. ಉತ್ಪಾದನಾ ದರ ಹೆಚ್ಚಳವಾಗುತ್ತಿದ್ದು, ಅದಕ್ಕೆ ತಕ್ಕಂತೆ ದರ ಸಿಗುತ್ತಿಲ್ಲ. ಮಳೆ ಹವಾಮಾನ ವೈಪರೀತ್ಯದಿಂದಾಗಿ ಫಸಲು ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿದೆ. ಜೊತೆಗೆ ಎಲೆಚುಕ್ಕೆ, ಹಳದಿ ರೋಗ, ಅಡಕೆ ಕೃಷಿಗೆ ಮಾರಕವಾಗಿದೆ. ಕೆಲವೆಡೆ ರೋಗದ ತೀವ್ರತೆಗೆ ಮರಗಳು ಸಾಯುತ್ತಿದ್ದು, ಕೃಷಿಕರು ಕಂಗಾಲಾಗಿದ್ದಾರೆ.
ಇಂತಹ ವಿಷಮ ಸಂದರ್ಭದಲ್ಲಿ ಸ್ಥಿರತೆ ಕಾಣದ ಅಡಕೆ ಮರ ಕೃಷಿಕರಿಗೆ ಗಾಯದ ಮೇಲೆ ಬರೆ ಎಳೆಯುತ್ತಿದೆ. ಫಸಲು ನಷ್ಟ ಅನುಭವಿಸಿರುವ ಕೃಷಿಕರು ಈ ಬಾರಿ ಇನ್ನೂ ಅಡಕೆ ಕೊಯ್ಲಿಗೆ ಮುಂದಾಗಿಲ್ಲ. ಕಳೆದೊಂದು ತಿಂಗಳುಗಳಿಂದ ಇಳಿಕೆಯಾಗುತ್ತಿರುವ ದರದ ಬಗ್ಗೆ ನಾನಾ ಕಾರಣಗಳನ್ನು ಶಂಕಿಸಲಾಗಿದೆ. ಅಕ್ರಮವಾಗಿ ಅಡಕೆ ಆಮದು ಆಗುತ್ತಿರುವುದೇ ಕಾರಣ ಅಂತಾ ಹೇಳಲಾಗುತ್ತಿದೆ. ಸರ್ಕಾರದ ಕಠಿಣ ನಿಯಮಗಳನ್ನು ಜಾರಿಗೆ ತಂದರೂ ಕಳ್ಳ ಮಾರ್ಗದ ಮೂಲಕ ಅಡಕೆ ನಿರಂತರವಾಗಿ ದೇಶದೊಳಗೆ ಬರುತ್ತಿರುವ ಕಾರಣ ಕೃಷಿಕರು ಮತ್ತಷ್ಟು ದರ ಇಳಿಕೆಯಾಗುವ ಭೀತಿಯಲ್ಲಿದ್ದಾರೆ.
ವಿಪರೀತ ಮಳೆಯಿಂದ ಬೆಳೆ ಹಾನಿ
Dakshina Kannada,Karnataka
December 11, 2025 3:06 PM IST