ಯುವ ಕ್ರಿಕೆಟಿಗ ಅರ್ಜುನ್ ತೆಂಡೂಲ್ಕರ್ ತಂದೆಯ ಹಾದಿಯಲ್ಲೇ ನಡೆಯುತ್ತಿದ್ದಾರೆ. ಕೇವಲ ಕ್ರಿಕೆಟ್ ಮಾತ್ರವಲ್ಲ ಪ್ರೀತಿ, ಮದುವೆ ವಿಚಾರದಲ್ಲೂ ಅರ್ಜುನ್, ತೆಂಡೂಲ್ಕರ್ ಅವರ ರೀತಿಯಲ್ಲೇ ಮುನ್ನಡೆಯುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಸಚಿನ್, ಅಂಜಲಿಯನ್ನು ಮದುವೆಯಾದಾಗ ಇದೇ ವಿಚಾರವಾಗಿ ಸುದ್ದಿಗಳಲ್ಲಿ ಹೆಡ್ ಲೈನ್ ಆಗಿದ್ದರು. ಈಗ ಇದೇ ವಿಚಾರವಾಗಿ ಅರ್ಜುನ್ ಕೂಡ ಹೆಡ್ ಲೈನ್ ಆಗುತ್ತಿದ್ದು, ಸಚಿನ್ ರೀತಿಯೇ ತಮಗಿಂತ ಹಿರಿಯ ಯುವತಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದು, ದಾಂಪತ್ಯ ಜೀವನಕ್ಕೆ ಕಾಲಿಡುವ ಸಿದ್ಧತೆಯಲ್ಲಿದ್ದಾರೆ.