Last Updated:
ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 9ನೇ ಪಂದ್ಯದಲ್ಲಿ ತಂಜಿದ್ ಹಸನ್ ಸಿಡಿಸಿದ ಅರ್ಧಶತಕದ ಹೊರೆತಾಗಿಯೂ ಬಾಂಗ್ಲಾದೇಶ ತಂಡ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 154 ರನ್ಗಳ ಸಾಧಾರಣ ಮೊತ್ತ ದಾಖಲಿಸಿದೆ.
ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಷ್ಯಾಕಪ್ನ 9ನೇ ಪಂದ್ಯದಲ್ಲಿ ತಂಜಿದ್ ಹಸನ್ ಸಿಡಿಸಿದ ಅರ್ಧಶತಕದ ಹೊರೆತಾಗಿಯೂ ಬಾಂಗ್ಲಾದೇಶ ತಂಡ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 154 ರನ್ಗಳ ಸಾಧಾರಣ ಮೊತ್ತ ದಾಖಲಿಸಿದೆ. ತಂಜಿದ್ 31 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ಗಳ ಸಹಿತ 52 ರನ್ಗಳಿಸಿ ತಂಡ 150ರ ಸನಿಹ ಬರಲು ನೆರವಾದರು. ಸೈಫ್ ಹಸನ್ 30 ಹಾಗೂ ಹೃದೋಯ್ 26 ರನ್ಗಳಿಸಿದರು.
ಟಾಸ್ ಗೆದ್ದ ಬಾಂಗ್ಲಾದೇಶ ತಂಡ ಉತ್ತಮ ಆರಂಭವನ್ನೇನೊ ಪಡೆದುಕೊಂಡಿತು. ಆದರೆ ಆರಂಭಿಕರ ಪತನದ ನಂತರ ಬಾಂಗ್ಲಾದೇಶ ಅಫ್ಘಾನಿಸ್ತಾನದ ಸ್ಪಿನ್ ದಾಳಿಗೆ ಉತ್ತರಿಸಲು ಪರದಾಡಿದರು. ಪವರ್ ಪ್ಲೇನಲ್ಲಿ 59 ರನ್ಗಳಿಸಿದ ಬಾಂಗ್ಲಾದೇಶ, ಆ ನಂತರದ 84 ಎಸೆತಗಳಲ್ಲಿ 95 ರನ್ ಮಾತ್ರಗಳಿಸಲು ಸಾಧ್ಯವಾಯಿತು. ಏಷ್ಯಾಕಪ್ನಲ್ಲಿ ಮೊದಲ ಬಾರಿಗೆ ಅವಕಾಶ ಪಡೆದಿದ್ದ ಸೈಫ್ ಹಸನ್ ಹಾಗೂ ತಂಜಿದ್ 63 ರನ್ಗಳ ಜೊತೆಯಾಟ ನಡೆಸಿದರು. ಸೈಫ್ 28 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 30 ರನ್ಗಳಿಸಿದರು. ಆದರೆ ಪಾಲುದಾರ ತಂಜಿದ್ ಹಸನ್ ಪವರ್ ಪ್ಲೇನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು.
ತಂಜಿದ್ 31 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ಗಳ ಸಹಿತ 52 ರನ್ಗಳಿಸಿದರು. ಆದರೆ ಇವರಿಬ್ಬರನ್ನ ಹೊರೆತುಪಡಿಸಿ ಉಳಿದ ಆಟಗಾರರು ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಯುವ ಆಟಗಾರ ತೌಹಿದ್ ಹೃದೋಯ್ ತಲಾ 1 ಬೌಂಡರಿ, ಸಿಕ್ಸರ್ ಸಹಿತ 26 ರನ್ಗಳಿಸಿ 3ನೇ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಶಮೀಮ್ ಹೊಸೈನ್ 11 ಎಸೆತಗಳಲ್ಲಿ 11 ರನ್ಗಳಿಸಿ ಔಟ್ ಆದರು. ಕೊನೆಯವರೆಗೂ ಕ್ರೀಸ್ನಲ್ಲಿದ್ದ ಜಾಕರ್ ಅಲಿ ಕಳಪೆ ಬ್ಯಾಟಿಂಗ್ ಮಾಡಿದರು. 13 ಎಸೆತಗಳಲ್ಲಿ 1 ಬೌಂಡರಿ ಸಹಿತ ಕೇವಲ 12 ರನ್ಗಳಿಸಿದರು. ನೂರುಲ್ ಹಸನ್ 6 ಎಸೆತಗಳಲ್ಲಿ 2 ಬೌಂಡರಿ ಸಹಿತ ಅಜೇಯ 12 ರನ್ಗಳಿಸಿದರು.
September 16, 2025 10:01 PM IST