Asia Cup: ಏಷ್ಯಾಕಪ್‌ಗೆ 17 ಸದಸ್ಯರನ್ನೊಳಗೊಂಡ ತಂಡ ಪ್ರಕಟಿಸಿದ ಪಾಕಿಸ್ತಾನ; ಬಾಬರ್, ರಿಜ್ವಾನ್‌ಗೆ ಟೀಮ್‌ನಿಂದ ಗೇಟ್‌ಪಾಸ್ | babar azam and mohammad rizwan out of pakista asia cup squad here is the 17 members team list | ಕ್ರೀಡೆ

Asia Cup: ಏಷ್ಯಾಕಪ್‌ಗೆ 17 ಸದಸ್ಯರನ್ನೊಳಗೊಂಡ ತಂಡ ಪ್ರಕಟಿಸಿದ ಪಾಕಿಸ್ತಾನ; ಬಾಬರ್, ರಿಜ್ವಾನ್‌ಗೆ ಟೀಮ್‌ನಿಂದ ಗೇಟ್‌ಪಾಸ್ | babar azam and mohammad rizwan out of pakista asia cup squad here is the 17 members team list | ಕ್ರೀಡೆ

Last Updated:

ಪಾಕಿಸ್ತಾನ ಕ್ರಿಕೆಟ್ ತಂಡ 2025 ರ ಏಷ್ಯಾ ಕಪ್‌ಗಾಗಿ ತನ್ನ 17 ಸದಸ್ಯರ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ಆಶ್ಚರ್ಯಕರ ರೀತಿಯಲ್ಲಿ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಇಬ್ಬರನ್ನೂ ಕೈಬಿಡಲಾಗಿದೆ.

ಮೊಹಮ್ಮದ್ ರಿಜ್ವಾನ್, ಬಾಬರ್ ಅಜಮ್ಮೊಹಮ್ಮದ್ ರಿಜ್ವಾನ್, ಬಾಬರ್ ಅಜಮ್
ಮೊಹಮ್ಮದ್ ರಿಜ್ವಾನ್, ಬಾಬರ್ ಅಜಮ್

ಪಾಕಿಸ್ತಾನ ಕ್ರಿಕೆಟ್ (PCB) ತಂಡ 2025 ರ ಏಷ್ಯಾ ಕಪ್‌ಗಾಗಿ (Asia Cup) ತನ್ನ 17 ಸದಸ್ಯರ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ಆಶ್ಚರ್ಯಕರ ರೀತಿಯಲ್ಲಿ ಬಾಬರ್ ಅಜಮ್ (Babar Azam) ಮತ್ತು ಮೊಹಮ್ಮದ್ ರಿಜ್ವಾನ್ (Rizwan) ಇಬ್ಬರನ್ನೂ ಕೈಬಿಡಲಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಫ್ಘಾನಿಸ್ತಾನ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಒಳಗೊಂಡ ತ್ರಿಕೋನ ಸರಣಿ ಹಾಗೂ ಏಷ್ಯಾ ಕಪ್‌ಗಾಗಿ ತಂಡವನ್ನು ಪ್ರಕಟಿಸಿದೆ. ಸಲ್ಮಾನ್ ಅಲಿ ಆಘಾ ತಂಡವನ್ನು ಮುನ್ನಡೆಸಲಿದ್ದಾರೆ. ರಿಜ್ವಾನ್ ಬ್ಲು ಮೊಹಮ್ಮದ್ ಹ್ಯಾರಿಸ್ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ. ಸ್ಟಾರ್ ವೇಗಿ ಶಾಹೀನ್ ಅಫ್ರಿದಿ, ಫಖರ್ ಜಮಾನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಅನುಭವಿ ಜೋಡಿ ಬಾಬರ್ ಆಝಂ ಮತ್ತು ಮೊಹಮ್ಮದ್ ರಿಜ್ವಾನ್‌ ತಂಡದಿಂದ ಹೊರಗುಳಿದಿದ್ದಾರೆ.

ತಂಡದಲ್ಲಿ ಯುವ ಆಟಗಾರರು

ಪಾಕಿಸ್ತಾನ ತಂಡದಲ್ಲಿ ಕಾಣಿಸಿಕೊಂಡ ಇತರ ಪ್ರಮುಖ ಆಟಗಾರರೆಂದರೆ ಹ್ಯಾರಿಸ್ ರೌಫ್, ಹಸನ್ ಅಲಿ ಮತ್ತು ಫಹೀಮ್ ಅಶ್ರಫ್, ಸೈಮ್ ಅಯೂಬ್ ಮತ್ತು ಹಸನ್ ನವಾಜ್ ಅವರಂತಹ ಯುವ ತಾರೆಯರು ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 2025 ರ ಏಷ್ಯಾಕಪ್ ಸೆಪ್ಟೆಂಬರ್ 9 ರಿಂದ ಸೆಪ್ಟೆಂಬರ್ 28 ರವರೆಗೆ ಯುಎಇಯಲ್ಲಿ ನಡೆಯಲಿದೆ. ಭಾರತ, ಯುಎಇ ಮತ್ತು ಒಮಾನ್ ಜೊತೆಗೆ ಪಾಕಿಸ್ತಾನ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಸೆಪ್ಟೆಂಬರ್ 12 ರಂದು ಓಮನ್ ವಿರುದ್ಧ ಮೊದಲ ಪಂದ್ಯವನ್ನು ಪಾಕಿಸ್ತಾನ ಆಡಲಿದೆ. ಸೆಪ್ಟೆಂಬರ್ 14 ರಂದು ಭಾರತ ಮತ್ತು ಸೆಪ್ಟೆಂಬರ್ 17 ರಂದು ಯುಎಇ ವಿರುದ್ಧ ಆಡಲಿದೆ.

ಇದನ್ನೂ ಓದಿ: Asia Cup: ಏಷ್ಯಾ ಕಪ್‌ಗೂ ಮುನ್ನಾ ಟೀಂ ಇಂಡಿಯಾಗೆ ಆನೆಬಲ; ಸ್ಟಾರ್ ವೇಗಿ ಆಡೋದು ಫಿಕ್ಸ್

2023 ರ ಏಷ್ಯಾ ಕಪ್ ನಲ್ಲಿ ಪಾಕಿಸ್ತಾನ ಉತ್ತಮ ಪ್ರದರ್ಶನ ನೀಡಲಿಲ್ಲ. ಏಕದಿನ ಮಾದರಿಯಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ, ಪಾಕಿಸ್ತಾನ ತಂಡವು ಸೂಪರ್-4 ರ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಸೋತಿದ್ದು, ಫೈನಲ್ ತಲುಪಲು ವಿಫಲವಾಯಿತು. 2022 ರಲ್ಲಿ, ಪಾಕಿಸ್ತಾನ ತಂಡವು ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಸೋತ ನಂತರ ರನ್ನರ್ ಅಪ್ ಸ್ಥಾನ ಪಡೆಯಿತು. ಪಾಕಿಸ್ತಾನ ತಂಡವು ಅಫ್ಘಾನಿಸ್ತಾನ ಮತ್ತು ಯುಎಇ ವಿರುದ್ಧ ಟಿ-20ಐ ತ್ರಿಕೋನ ಸರಣಿಯೊಂದಿಗೆ ಏಷ್ಯಾಕಪ್‌ಗೆ ಸಿದ್ಧವಾಗಲಿದೆ.

ಏಷ್ಯಾ ಕಪ್ 2025ಕ್ಕೆ ಪಾಕಿಸ್ತಾನ ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್ , ಫಹೀಮ್ ಅಶ್ರಫ್ , ಫಖರ್ ಜಮಾನ್, ಹ್ಯಾರಿಸ್ ರೌಫ್ , ಹಸನ್ ಅಲಿ, ಹಸನ್ ನವಾಜ್ , ಹುಸೇನ್ ತಲತ್, ಖುಷ್ದಿಲ್ ಶಾ , ಮೊಹಮ್ಮದ್ ಹ್ಯಾರಿಸ್ (ವಿಕೆಟ್-ಕೀಪರ್, ಮೊಹಮ್ಮದ್ ನವಾಝ್, ಮೊಹಮ್ಮದ್ ನವಾಜ್, ಮೊಹಮ್ಮದ್ ವಾಜ್ ಫರ್ಹಾನ್, ಸೈಮ್ ಅಯೂಬ್ , ಸಲ್ಮಾನ್ ಮಿರ್ಜಾ, ಶಾಹೀನ್ ಶಾ ಆಫ್ರಿದಿ ಮತ್ತು ಸುಫ್ಯಾನ್ ಮೊಕಿಮ್.