Last Updated:
ಸೆಪ್ಟೆಂಬರ್ 9ರಿಂದ ಬಹುನಿರೀಕ್ಷಿತ ಏಷ್ಯಾ ಕಪ್ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.
ಸೆಪ್ಟೆಂಬರ್ 9ರಿಂದ ಬಹುನಿರೀಕ್ಷಿತ ಏಷ್ಯಾ ಕಪ್ (Asia Cup) ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಈ ನಡುವೆ ಟೀಂ ಇಂಡಿಯಾ (Team India) ಸ್ಟಾರ್ ವೇಗಿ ಜಸ್ಪ್ರಿತ್ ಬುಮ್ರಾ (Jasprit Bumrah) ಏಷ್ಯಾ ಕಪ್ ತಂಡದಲ್ಲಿ ಟೀಂ ಇಂಡಿಯಾದ ಭಾಗವಾಗಿ ಇರುತ್ತಾರೋ ಇಲ್ಲವೋ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿತ್ತು. ಇದೀಗ ಟೀಂ ಇಂಡಿಯಾಗೆ ಗುಡ್ ನ್ಯೂಸ್ ಒಂದು ಸಿಕ್ಕಿದೆ.
ಹೌದು, ಭಾರತದ ತಂಡದ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಯುಎಇಯಲ್ಲಿ ನಡೆಯಲಿರುವ 2025 ರ ಏಷ್ಯಾ ಕಪ್ ತಂಡದ ಆಯ್ಕೆಗೆ ಲಭ್ಯವಿರುತ್ತಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ರಾಷ್ಟ್ರೀಯ ಆಯ್ಕೆದಾರರಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯ ಕೊನೆಯ ಪಂದ್ಯಕ್ಕೂ ಮೊದಲೇ ತಂಡದಿಂದ ನಿರ್ಗಮಿಸಿದ್ದರು. ಈ ನಡುವೆ ಅವರಿಗೆ ದೀರ್ಘಕಾಲದ ಗಾಯ ಅಥವಾ ಫಿಟ್‌ನೆಸ್ ಸಮಸ್ಯೆ ಬುಮ್ರಾ ಅವರನ್ನು ಕಾಡುತ್ತಿತ್ತು. ಈ ನಡುವೆ ಅವರು ಏಷ್ಯಾ ಕಪ್‌ನಲ್ಲಿ ಆಡುವುದನ್ನು ಖಚಿತಪಡಿಸಿದ್ದಾರೆ.
ಬಿಸಿಸಿಐ ವೈದ್ಯಕೀಯ ಸಿಬ್ಬಂದಿ ಸೂಚನೆಯಂತೆ ಬುಮ್ರಾ ಅವರು ಆಂಡರ್ಸನ್-ತೆಂಡುಲ್ಕರ್ ಸರಣಿಯ 5 ಟೆಸ್ಟ್‌ಗಳಲ್ಲಿ ಮೂರರಲ್ಲಿ ಆಡಿದ್ದರು. ಅದರಲ್ಲೂ ಅವರು ಗೆಲ್ಲಲೇಬೇಕಾದ ಒತ್ತಡದಲ್ಲಿದ್ದ ಕೊನೆಯ ಪಂದ್ಯದಿಂದ ದೂರ ಉಳಿದಿದ್ದು, ಅವರ ಅಭಿಮಾನಿಗಳಲ್ಲಿ ತೀವ್ರ ಗೊಂದಲ ಉಂಟುಮಾಡಿತ್ತು. ಕೆಲವು ಆಧಾರರಹಿತ ವರದಿಗಳು ಬುಮ್ರಾ ಅವು ಹೊಸ ಗಾಯದಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದ್ದವು.
ಆದ್ರೀಗ ಬಿಸಿಸಿಐನ ಮೂಲಗಳು ಏಷ್ಯಾ ಕಪ್ ಆಯ್ಕೆಗೆ ಬುಮ್ರಾ ಲಭ್ಯವಿರುವುದಾಗಿ ಆಯ್ಕೆದಾರರಿಗೆ ತಿಳಿಸಿದ್ದಾರೆ. ಮುಂದಿನ ವಾರ ಭೇಟಿಯಾಗಲಿರುವ ಆಯ್ಕೆ ಸಮಿತಿಯು ಈ ಬಗ್ಗೆ ಚರ್ಚಿಸಲಿದೆ ಎಂದು ಮೂಲವೊಂದು ತಿಳಿಸಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಆಗಸ್ಟ್ 19 ರಂದು ಮುಂಬೈನಲ್ಲಿ ಬಿಸಿಸಿಐ ಆಯ್ಕೆದಾರರು ಸಭೆ ಸೇರಿ ಟಿ-20 ಮಾದರಿಯಲ್ಲಿ ನಡೆಯಲಿರುವ ಏಷ್ಯಾ ಕಪ್ ಟೂರ್ನಮೆಂಟ್‌ಗೆ ಭಾರತ ತಂಡವನ್ನು ಆಯ್ಕೆ ಮಾಡಲಿದ್ದಾರೆ. ಸಭೆಯ ನಂತರ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ.
ಬುಮ್ರಾ ಅವರು ತಂಡಕ್ಕೆ ಆಯ್ಕೆಯಾಗುವುದು ಟೀಂ ಇಂಡಿಯಾದ ಬಲ ಹೆಚ್ಚಿಸಲಿದೆ. ಬುಮ್ರಾ ಕೊನೆಯದಾಗಿ 2024ರಲ್ಲಿ ನಡೆದ ಟಿ-20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಪರ ಆಡಿದ್ದರು. ಆ ಪಂದ್ಯದಲ್ಲಿ ಅವರು ಅಮೋಘ ಬೌಲಿಂಗ್ ದಾಳಿ ನಡೆಸಿದ್ದರು. 2/18 ನೀಡಿದ್ದರು. ಅವರ ಅಮೋಘ ಬೌಲಿಂಗ್‌ನಿಂದಾಗಿ ಟೀಂ ಇಂಡಿಯಾ ಪ್ರಶಸ್ತಿ ಗೆದ್ದುಕೊಂಡಿತ್ತು.
ಅದಾದ ಬಳಿಕ ನಡೆದ ಎಲ್ಲಾ ಟಿ-20 ಪಂದ್ಯಗಳಿಂದ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಈ ಮಾದರಿಯಲ್ಲಿ ಅವರು ಅತ್ಯುತ್ತಮ ವೇಗಿ ಎಂದು ಹೇಳಬಹುದು. ಟಿ-20ಯಲ್ಲಿ ಬುಮ್ರಾ ಅವರ ರೆಕಾರ್ಡ್ ನೋಡುವುದಾದ್ರೆ, 70 ಪಂದ್ಯಗಳಲ್ಲಿ 17.74 ಸರಾಸರಿಯಲ್ಲಿ, ಕೇವಲ 6.28 ರ ಎಕಾನಮಿ ದರದಲ್ಲಿ 89 ವಿಕೆಟ್‌ಗಳನ್ನು ಪಡೆದಿದ್ದಾರೆ.
August 17, 2025 3:23 PM IST