Asia Cup: ಟಿ20 ಕ್ರಿಕೆಟ್​​ನಲ್ಲಿ ಚರಿತ್ರೆ ಸೃಷ್ಟಿಸಿದ ನಿಸ್ಸಾಂಕ! ಪದಾರ್ಪಣೆ ಮಾಡಿದ 4 ವರ್ಷಕ್ಕೆ ದಿಗ್ಗಜರನ್ನೇ ಹಿಂದಿಕ್ಕಿದ ಯುವ ಆಟಗಾರ | Pathum Nissanka Smashes T20I Record with Match-Winning 68 Against Hong Kong | ಕ್ರೀಡೆ

Last Updated:

2021ರಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​​ಗೆ ಪದಾರ್ಪಣೆ ಮಾಡಿದ ನಿಸ್ಸಾಂಕ ತಂಡದ ಟಾಪ್ ಬ್ಯಾಟರ್ ಆಗಿದ್ದಾರೆ. ಮೂರು ಮಾದರಿಯಲ್ಲೂ ತಂಡಕ್ಕೆ ನೆರವಾಗುವ ರೀತಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಈ ಮಧ್ಯೆ 70 ಪಂದ್ಯಗಳನ್ನಾಡಿರುವ ನಿಸ್ಸಾಂಕ 29ರ ಸರಾಸರಿ, 124ರ ಸ್ಟ್ರೈಕ್​ರೇಟ್​ನಲ್ಲಿ 2068 ರನ್​ಗಳಿಸಿದ್ದಾರೆ. 90 ರನ್ ಅವರ ಗರಿಷ್ಠ ಸ್ಕೋರ್​.

ಪಾತುಮ್ ನಿಸ್ಸಾಂಕಪಾತುಮ್ ನಿಸ್ಸಾಂಕ
ಪಾತುಮ್ ನಿಸ್ಸಾಂಕ

2025ರ T20 ಏಷ್ಯಾ ಕಪ್ (Asia Cup) ಟೂರ್ನಮೆಂಟ್‌ನಲ್ಲಿ ಶ್ರೀಲಂಕಾ (Sri Lanka) ತಂಡವು ಸತತ ಎರಡನೇ ಗೆಲುವು ಸಾಧಿಸಿದ್ದು, ಗುಂಪು Bನಲ್ಲಿ ತನ್ನ ಸೂಪರ್ 4 ಸ್ಥಾನವನ್ನು ಬಲಪಡಿಸಿಕೊಂಡಿದೆ. ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು(Bangladesh) 6 ವಿಕೆಟ್‌ಗಳಿಂದ ಸೋಲಿಸಿದ ಶ್ರೀಲಂಕಾ, ಎರಡನೇ ಪಂದ್ಯದಲ್ಲಿ (SL vs HK) ಯುವ ಹಾಂಗ್ ಕಾಂಗ್ ತಂಡವನ್ನು ಎದುರಿಸಿತು. ಈ ಪಂದ್ಯವು ಸೋಮವಾರ ರಾತ್ರಿ ದುಬೈನಲ್ಲಿ ನಡೆದಿದ್ದು, ಶ್ರೀಲಂಕಾ ತಂಡವು ಕಷ್ಟಪಟ್ಟು ಜಯಿಸಿತು. ಓಪನರ್ ಪಾತುಮ್ ನಿಸ್ಸಂಕಾ ಅವರ ಅದ್ಭುತ ಅರ್ಧಶತಕದ ಮೂಲಕ ತಂಡವು 150 ರನ್‌ಗಳ ಗುರಿಯನ್ನು 18.5 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ ತಲುಪಿ ಗೆದ್ದಿತು. ಈ ಮ್ಯಾಚ್ ವಿನ್ನಿಂಗ್ ಪ್ರದರ್ಶನದ ಮೂಲಕ ನಿಸ್ಸಾಂಕ ಅಪರೂಪದ ದಾಖಲೆಯನ್ನು ಸೃಷ್ಟಿಸಿದರು. T20 ಅಂತರರಾಷ್ಟ್ರೀಯ (T20I) ಕ್ರಿಕೆಟ್‌ನಲ್ಲಿ ಶ್ರೀಲಂಕಾ ಪರ ಅತ್ಯಂತ ಹೆಚ್ಚು 50 ಪ್ಲಸ್ ಸ್ಕೋರ್‌ಗಳನ್ನು (ಅರ್ಧಶತಕಗಳು) ಗಳಿಸಿದ ಆಟಗಾರ ಎನಿಸಿಕೊಂಡರು.

2021ರಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​​ಗೆ ಪದಾರ್ಪಣೆ ಮಾಡಿದ ನಿಸ್ಸಾಂಕ ತಂಡದ ಟಾಪ್ ಬ್ಯಾಟರ್ ಆಗಿದ್ದಾರೆ. ಮೂರು ಮಾದರಿಯಲ್ಲೂ ತಂಡಕ್ಕೆ ನೆರವಾಗುವ ರೀತಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಈ ಮಧ್ಯೆ 70 ಪಂದ್ಯಗಳನ್ನಾಡಿರುವ ನಿಸ್ಸಾಂಕ 29ರ ಸರಾಸರಿ, 124ರ ಸ್ಟ್ರೈಕ್​ರೇಟ್​ನಲ್ಲಿ 2068 ರನ್​ಗಳಿಸಿದ್ದಾರೆ. 90 ರನ್ ಅವರ ಗರಿಷ್ಠ ಸ್ಕೋರ್​.

ಶ್ರೀಲಂಕಾ ಪರ ಅತಿ ಹೆಚ್ಚು 50 ಪ್ಲಸ್ ಸ್ಕೋರ್

  • ಪಾತುಮ್ ನಿಸ್ಸಾಂಕ (70 ಪಂದ್ಯ) 17
  • ಕುಸಾಲ್ ಪರೆರಾ (84 ಪಂದ್ಯ)- 16(1 ಶತಕ)
  • ಕುಸಾಲ್ ಮೆಂಡಿಸ್ (86 ಪಂದ್ಯ) 16
  • ತಿಲಕರತ್ನೆ ದಿಲ್ಶನ್ (80 ಪಂದ್ಯ) 14
  • ಮಹೇಲ ಜಯವರ್ಧನೆ (55 ಪಂದ್ಯ) 10
ಪಂದ್ಯದ ಹಿನ್ನೆಲೆ ಮತ್ತು ಆರಂಭ

ಏಷ್ಯಾ ಕಪ್ 2025ರ ಗುಂಪು Bನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಹಾಂಗ್ ಕಾಂಗ್ ತಂಡಗಳು ಇದ್ದು, ಟಾಪ್ 2 ತಂಡಗಳು ಸೂಪರ್ 4ರ ಹಂತಕ್ಕೆ ಮುಂದುವರಿಯುತ್ತವೆ. ಶ್ರೀಲಂಕಾ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹಾಂಗ್ ಕಾಂಗ್ ತಂಡವು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 149 ರನ್‌ಗಳ ಸವಾಲಿನ ಸ್ಕೋರ್ ಗಳಿಸಿತು. ಓಪನರ್‌ಗಳಾದ ಜೀಶನ್ ಅಲಿ (23 ರನ್) ಮತ್ತು ಅಂಶುಮಾನ್ ರಾತ್ (48 ರನ್) ಉತ್ತಮ ಆರಂಭ ನೀಡಿದರು. ನಾಲ್ಕನೇ ಕ್ರಮಾಂಕದ ಬ್ಯಾಟ್ಸ್‌ಮನ್ ನಿಜಕತ್ ಖಾನ್ ಅವರ ಅಜೇಯ ಅರ್ಧಶತಕ (38 ಎಸೆತಗಳಲ್ಲಿ 52 ರನ್, 4 ಬೌಂಡರಿ ಮತ್ತು 2 ಸಿಕ್ಸರ್) ತಂಡವನ್ನು ಬಲಿಷ್ಠ ಸ್ಥಿತಿಯಲ್ಲಿ ಇರಿಸಿತು.

ಕಷ್ಟಪಟ್ಟು ಚೇಸ್ ಮಾಡಿದ ಶ್ರೀಲಂಕಾ

ಹಾಂಗ್ ಕಾಂಗ್ ನೀಡಿದ ಸಾಧಾರಣ ಗುರಿಯನ್ನು (150 ರನ್) ಬೆನ್ನಟ್ಟಲು ಶ್ರೀಲಂಕಾ ತಂಡವು ಶ್ರಮಿಸಬೇಕಾಯಿತು. ಹಾಂಗ್ ಕಾಂಗ್ ಬೌಲರ್‌ಗಳ ಅತ್ಯುತ್ತಮ ಪ್ರದರ್ಶನದಿಂದ ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ ಪರೇಡ್ ನಡೆಸಿದರು. ಆರಂಭಿಕರಾದ ಕುಸಲ್ ಮೆಂಡಿಸ್ 11 ರನ್, ಕಮಿಲ್ ಮಿಶಾರ 19 ರನ್, ಕುಸಾಲ್ ಪೆರೆರಾ 20 ರನ್ ಗಳಿಸಿದರು. ನಾಯಕ ಚರಿತ್ ಅಸಲಂಕಾ ಕೇವಲ 2 ರನ್, ಕಮಿಂದು ಮೆಂಡಿಸ್ 5 ರನ್ ಮಾಡಿ ಔಟ್ ಆದರು. ತಂಡವು 127/6 ಸ್ಕೋರ್‌ಗೆ ಸಿಲುಕಿತು, ಆದರೆ ಇದರಲ್ಲಿ ಒಂದು ಕಡೆ ವಿಕೆಟ್‌ಗಳು ಬೀಳುತ್ತಿದ್ದರೂ, ಮತ್ತೊಂದು ಕಡೆ ಓಪನರ್ ಪಾತುಮ್ ನಿಸ್ಸಂಕಾ ದೃಢವಾಗಿ ನಿಂತು ಗೆಲ್ಲಿಸಿದರು.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Asia Cup: ಟಿ20 ಕ್ರಿಕೆಟ್​​ನಲ್ಲಿ ಚರಿತ್ರೆ ಸೃಷ್ಟಿಸಿದ ನಿಸ್ಸಾಂಕ! ಪದಾರ್ಪಣೆ ಮಾಡಿದ 4 ವರ್ಷಕ್ಕೆ ದಿಗ್ಗಜರನ್ನೇ ಹಿಂದಿಕ್ಕಿದ ಯುವ ಆಟಗಾರ