Last Updated:
ಪಾಕಿಸ್ತಾನವನ್ನು ಭಾರತ ಸೋಲಿಸಿ ಏಷ್ಯಾಕಪ್ 2025 ರ ಚಾಂಪಿಯನ್ ಆಗಿದೆ. ಆದರೆ, ಇನ್ನೂ ಭಾರತ ತಂಡಕ್ಕೆ ಏಷ್ಯಾಕಪ್ ಸಿಕ್ಕಿಲ್ಲ. ಈ ಕುರಿತು ಇಲ್ಲಿದೆ ಮಾಹಿತಿ.
ಏಷ್ಯಾಕಪ್ (Asia Cup) 2025 ರ ಚಾಂಪಿಯನ್ ಭಾರತ ತಂಡ ಎಂಬುದು ಗೊತ್ತಿರುವ ಸಂಗತಿ. ಆದರೆ ಭಾರತ ತಂಡದ ಬಳಿ ಏಷ್ಯಾಕಪ್ ಟ್ರೋಫಿ ಇಲ್ಲ. ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿದ ಟೀಮ್ ಇಂಡಿಯಾಕ್ಕೆ (India vs Pakistan) ಏಷ್ಯಾಕಪ್ ಕ್ರಿಕೆಟ್ ಕೌನ್ಸಿನ್ (ACC) ಇದುವರೆಗೂ ಟ್ರೋಫಿಯನ್ನು ನೀಡಿಲ್ಲ. ಗೆಲುವಿನ ಬಳಿಕ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ (Mohsin Naqvi) ಕೈ ಯಿಂದ ಟ್ರೋಫಿ ತೆಗೆದುಕೊಳ್ಳುವುದಿಲ್ಲ ಎಂದು ಟೀಮ್ ಇಂಡಿಯಾ ಆಟಗಾರರು ನಿರಾಕರಿಸಿದ್ದರು. ಈ ವೇಳೆ ಮೊಹ್ಸಿನ್ ನಖ್ವಿ ಮತ್ತು ಟೀಮ್ ಇಂಡಿಯಾ (Team India) ಆಟಗಾರರು ನಡುವೆ ಮೈದಾನದಲ್ಲಿ ದೊಡ್ಡ ಹೈಡ್ರಾಮಾವೇ ನಡೆದಿತ್ತು.
ಟೀಮ್ ಇಂಡಿಯಾ ಆಟಗಾರರ ನಡೆಗೆ ತಲೆ ಕೆಟ್ಟು ನಖ್ವಿ ತನ್ನೊಂದಿಗೆ ಮೆಡೆಲ್ ಮತ್ತು ಟ್ರೋಫಿಯನ್ನು ತೆಗೆದುಕೊಂಡು ಹೋಗಿದ್ದರು. ಇದಾದ ನಂತರ ಟ್ರೋಫಿ ಎಲ್ಲಿದೆ?, ಯಾವಾಗ ಟೀಮ್ ಇಂಡಿಯಾ ಕೈ ಸೇರುತ್ತದೆ? ಎಂಬ ಪ್ರಶ್ನೆಗಳು ಕ್ರಿಕೆಟ್ ಅಭಿಮಾನಿಗಳನ್ನು ಕಾಡುತ್ತಿದ್ದವು. ಇದೀಗ ಈ ಕುರಿತು ಬಿಗ್ ಅಪ್ಡೇಟ್ ಸಿಕ್ಕಿದೆ.
ವರದಿಗಳ ಪ್ರಕಾರ, ಕಳೆದ ವಾರ ನಡೆದ ಫೈನಲ್ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಭಾರತ ಗೆದ್ದ ಏಷ್ಯಾ ಕಪ್ ಟ್ರೋಫಿ ಪ್ರಸ್ತುತ ದುಬೈನಲ್ಲಿರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಪ್ರಾದೇಶಿಕ ಕಚೇರಿಯಲ್ಲಿದೆ. ಶೀಘ್ರದಲ್ಲೇ ದುಬೈನಲ್ಲಿರುವ ಬಿಸಿಸಿಐ ಅಧಿಕಾರಿಗಳಿಗೆ ಟ್ರೋಫಿ ಹಸ್ತಾಂತರಿಸುವ ಸಾಧ್ಯತೆಯಿದೆ.
ಇದೇ ವೇಳೆ ಸಭೆಯಲ್ಲಿ ಎಸಿಸಿ ಅಧ್ಯಕ್ಷ ಸ್ಥಾನದಿಂದ ಮೊಹ್ಸಿನ್ ನಖ್ವಿ ಅವರನ್ನು ವಜಾಗೊಳಿಸುವಂತೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಒತ್ತಾಯಿಸಿದೆ. ಟ್ರೋಫಿ ಕಳ್ಳತನದ ಬಗ್ಗೆ ಬಿಸಿಸಿಐ ಅಧಿಕಾರಿಗಳು ವರದಿ ಮಾಡಲು ಸೂಚಿಸಿದ ನಂತರ ಈ ಬೆಳವಣಿಗೆ ನಡೆದಿದೆ. ನಖ್ವಿಯವರ ನಡವಳಿಕೆಯು ಅಧಿಕೃತ ತನಿಖೆಗೆ ಅರ್ಹವಾಗಿದೆ. ಅವರ ನಡವಳಿಕೆಯು ವಿಜೇತ ತಂಡವನ್ನು ಅಗೌರವಿಸಿದ್ದಲ್ಲದೆ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ನ ಸದಸ್ಯ ರಾಷ್ಟ್ರಗಳ ವಿರುದ್ಧ ಪಾಕಿಸ್ತಾನದ ರಾಜಕೀಯ ತಾರತಮ್ಯವನ್ನು ಬಿಸಿಸಿಐ ಅಧಿಕಾರಿ ಬಹಿರಂಗಪಡಿಸಿದ್ದಾರೆ.
October 01, 2025 4:02 PM IST