Asia Cup: ಪಾಕಿಸ್ತಾನದ ವಿರುದ್ಧ ನಾಕೌಟ್ ಪಂದ್ಯದಲ್ಲಿ ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ UAE! | T20 Asia Cup: Pakistan’s Haris Rauf and Khushdil Shah Join Playing XI Against UAE | ಕ್ರೀಡೆ

Asia Cup: ಪಾಕಿಸ್ತಾನದ ವಿರುದ್ಧ ನಾಕೌಟ್ ಪಂದ್ಯದಲ್ಲಿ ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ UAE! | T20 Asia Cup: Pakistan’s Haris Rauf and Khushdil Shah Join Playing XI Against UAE | ಕ್ರೀಡೆ

Last Updated:

ಪಾಕಿಸ್ತಾನ ಮತ್ತು ಅತಿಥೇಯ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ತಂಡಗಳು ಬುಧವಾರ 2025ರ ಏಷ್ಯಾ ಕಪ್‌ನಲ್ಲಿ ಮುಖಾಮುಖಿಯಾಗಲಿವೆ. ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಪರಸ್ಪರ ಮುಖಾಮುಖಿಯಾಗುತ್ತಿವೆ.

ಪಾಕಿಸ್ತಾನ್ vs  ಯುಎಇಪಾಕಿಸ್ತಾನ್ vs  ಯುಎಇ
ಪಾಕಿಸ್ತಾನ್ vs ಯುಎಇ

ಪಾಕಿಸ್ತಾನ ಮತ್ತು ಅತಿಥೇಯ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ತಂಡಗಳು ಬುಧವಾರ 2025ರ ಏಷ್ಯಾ ಕಪ್‌ನಲ್ಲಿ ಮುಖಾಮುಖಿಯಾಗಲಿವೆ. ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಪರಸ್ಪರ ಮುಖಾಮುಖಿಯಾಗುತ್ತಿವೆ. ಟಾಸ್​​ ಗೆದ್ದಿರುವ  ಯುಎಇ ತಂಡ ಬೌಲಿಂಗ್ ಆಯ್ಕೆ ಮಾಡಿದೆ. ಎರಡೂ ತಂಡಕ್ಕೂ ಈ ಪಂದ್ಯ ನಾಕೌಟ್ ಪಂದ್ಯವಾಗಿದೆ. ಗೆದ್ದ ತಂಡ ಸೂಪರ್ 4ಗೆ ಎಂಟ್ರಿಕೊಟ್ಟರೆ, ಸೋತ ತಂಡ ಟೂರ್ನಿಯಿಂದ ಹೊರ ಬೀಳಲಿದೆ. ಎರಡೂ ತಂಡಗಳು ಭಾರತದ ವಿರುದ್ಧ ಸೋಲು ಕಂಡಿದ್ದರೆ, ಒಮಾನ್ ವಿರುದ್ದ ಗೆಲುವು ಪಡೆದು ತಲಾ 2 ಅಂಕ ಗಿಟ್ಟಿಸಿಕೊಂಡಿವೆ. ಇಂದು ಗೆಲ್ಲುವ ತಂಡ ಭಾರತದೊಂದಿಗೆ ಸೂಪರ್​ 4 ಹಂತಕ್ಕೆ ತೇರ್ಗಡೆಯಾಗಲಿದೆ.

ತಂಡದಲ್ಲಿ ಬದಲಾವಣೆ

ಹೆಡ್-ಟು-ಹೆಡ್ ದಾಖಲೆ

ಪಾಕಿಸ್ತಾನ ಮತ್ತು ಯುಎಇ ಇಲ್ಲಿಯವರೆಗೆ ಮೂರು ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿವೆ. ಪಾಕಿಸ್ತಾನ ಮೂರೂ ಪಂದ್ಯಗಳನ್ನು ಗೆದ್ದಿದೆ. ಮೊದಲ ಪಂದ್ಯವನ್ನು ಫೆಬ್ರವರಿ 2016 ರಲ್ಲಿ ಮಿರ್ಪುರದಲ್ಲಿ ಆಡಲಾಯಿತು, ಆದರೆ ಮುಂದಿನ ಎರಡು ಪಂದ್ಯಗಳನ್ನು ಏಷ್ಯಾಕಪ್‌ಗೆ ಮೊದಲು ತ್ರಿಕೋನ ಸರಣಿಯ ಸಮಯದಲ್ಲಿ ಶಾರ್ಜಾದಲ್ಲಿ ಆಡಲಾಯಿತು.

ಎರಡೂ ತಂಡಗಳ ಪ್ಲೇಯಿಂಗ್ ಇಲೆವೆನ್

ಯುಎಇ: ಅಲಿಶನ್ ಶರಾಫು, ಮುಹಮ್ಮದ್ ವಸೀಮ್ (ಸಿ), ಆಸಿಫ್ ಖಾನ್, ಮುಹಮ್ಮದ್ ಜೊಹೈಬ್, ಹರ್ಷಿತ್ ಕೌಶಿಕ್, ರಾಹುಲ್ ಚೋಪ್ರಾ (ವಿಕೀ), ಧ್ರುವ ಪರಾಶರ್, ಹೈದರ್ ಅಲಿ, ಮುಹಮ್ಮದ್ ರೋಹಿದ್ ಖಾನ್, ಸಿಮ್ರಂಜೀತ್ ಸಿಂಗ್, ಜುನೈದ್ ಸಿದ್ದಿಕ್

ಪಾಕಿಸ್ತಾನ  : ಸೈಮ್ ಅಯೂಬ್, ಸಾಹಿಬ್ಜಾದಾ ಫರ್ಹಾನ್, ಮೊಹಮ್ಮದ್ ಹ್ಯಾರಿಸ್(ವಿಕೀ), ಫಖರ್ ಜಮಾನ್, ಸಲ್ಮಾನ್ ಅಘಾ(ನಾಯಕ), ಖುಷ್ದಿಲ್ ಶಾ, ಹಸನ್ ನವಾಜ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಅಬ್ರಾರ್ ಅಹ್ಮದ್