Asia Cup: ಫೈನಲ್​ನಲ್ಲಿ ಭಾರತ ಗೆದ್ರೆ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಕೈಯಿಂದ ಟ್ರೋಫಿ ಸ್ವೀಕರಿಸುತ್ತಾ? ಅಥವಾ ಇಲ್ವಾ? | Will India Accept Trophy from PCB Chairman Mohsin Naqvi After Asia Cup Win? | ಕ್ರೀಡೆ

Asia Cup: ಫೈನಲ್​ನಲ್ಲಿ ಭಾರತ ಗೆದ್ರೆ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಕೈಯಿಂದ ಟ್ರೋಫಿ ಸ್ವೀಕರಿಸುತ್ತಾ? ಅಥವಾ ಇಲ್ವಾ? | Will India Accept Trophy from PCB Chairman Mohsin Naqvi After Asia Cup Win? | ಕ್ರೀಡೆ

Last Updated:

ಏಷ್ಯಾಕಪ್ 2025ರ ಫೈನಲ್‌ನಲ್ಲಿ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಮುನ್ನಡೆಸುತ್ತಿರುವ ಭಾರತ ಗೆಲ್ಲುವ ನೆಚ್ಚಿನ ತಂಡವಾಗಿದೆ. ಲೀಗ್ ಹಂತದಲ್ಲಿ ಪಾಕಿಸ್ತಾನ ತಂಡಕ್ಕೆ ಸೋಲಿ ರುಚಿಯನ್ನು ಟೀಮ್ ಇಂಡಿಯಾ ತೋರಿಸಿದೆ. ಫೈನಲ್ ಪಂದ್ಯದಲ್ಲಿಯೂ ಪಾಕಿಸ್ತಾನ ವಿರುದ್ಧ ಭಾರತ ತನ್ನ ಪ್ರಾಬಲ್ಯವನ್ನು ಮುಂದುವರೆಸಿ ಟ್ರೋಫಿಯನ್ನು ಗೆದ್ದರೆ ಹಲವು ಘಟನೆಗಳಿಗೆ ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂ ಸಾಕ್ಷಿಯಾಗಲಿದೆ.

ಭಾರತ ತಂಡ- ಎಸಿಸಿ ಅಧ್ಯಕ್ಷ ಮೊಹ್ಶಿನ್ ನಖ್ವಿಭಾರತ ತಂಡ- ಎಸಿಸಿ ಅಧ್ಯಕ್ಷ ಮೊಹ್ಶಿನ್ ನಖ್ವಿ
ಭಾರತ ತಂಡ- ಎಸಿಸಿ ಅಧ್ಯಕ್ಷ ಮೊಹ್ಶಿನ್ ನಖ್ವಿ

ಭಾನುವಾರ (ಸೆಪ್ಟೆಂಬರ್ 28) ನಡೆಯಲಿರುವ ಏಷ್ಯಾಕಪ್ 2025ರ (Asia Cup 2025) ಫೈನಲ್‌ನಲ್ಲಿ ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನ ಮತ್ತು ಭಾರತ (India vs Pakistan) ಮುಖಾಮುಖಿಯಾಗುತ್ತಿವೆ. ಹೈವೋಲ್ಟೇಜ್ ಫೈನಲ್ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಅಭಿಮಾನಿಗಳಲ್ಲಿ ಕೂತೂಹಲ ಮನೆ ಮಾಡಿದೆ. ಏಷ್ಯಾ ಖಂಡದ ಕ್ರಿಕೆಟ್ ಮಹಾಯುದ್ದದಲ್ಲಿ ಗೆಲುವು ಯಾರ ಪಾಲಾಗುತ್ತದೆ? ಎಂಬುದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಉಭಯ ದೇಶಗಳ ರಾಜಕೀಯ ಸಂಬಂಧ ಹದೆಗೆಟ್ಟಿದ್ದು, ಇದರ ಬಿಸಿ ಕ್ರಿಕೆಟ್ ಮೈದಾನಕ್ಕೆ ತಟ್ಟಿದೆ. ಈಗಾಗಲೇ ಎರಡೂ ತಂಡದ ಆಟಗಾರರು ಕೂಡ ಪಂದ್ಯದ ವೇಳೆ ಘರ್ಷಣೆ ನಡೆಸಿ, ದಂಡಕ್ಕೂ ತುತ್ತಾಗಿರುವುದರಿಂದ ಫೈನಲ್ ಪಂದ್ಯ ಮತ್ತಷ್ಟು ರೋಚಕತೆ ಹುಟ್ಟಿಸಿದೆ.

ಏಷ್ಯಾಕಪ್ 2025ರ ಫೈನಲ್‌ನಲ್ಲಿ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಮುನ್ನಡೆಸುತ್ತಿರುವ ಭಾರತ ಗೆಲ್ಲುವ ನೆಚ್ಚಿನ ತಂಡವಾಗಿದೆ. ಲೀಗ್ ಹಂತದಲ್ಲಿ ಪಾಕಿಸ್ತಾನ ತಂಡಕ್ಕೆ ಸೋಲಿ ರುಚಿಯನ್ನು ಟೀಮ್ ಇಂಡಿಯಾ ತೋರಿಸಿದೆ. ಫೈನಲ್ ಪಂದ್ಯದಲ್ಲಿಯೂ ಪಾಕಿಸ್ತಾನ ವಿರುದ್ಧ ಭಾರತ ತನ್ನ ಪ್ರಾಬಲ್ಯವನ್ನು ಮುಂದುವರೆಸಿ ಟ್ರೋಫಿಯನ್ನು ಗೆದ್ದರೆ ಹಲವು ಘಟನೆಗಳಿಗೆ ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂ ಸಾಕ್ಷಿಯಾಗಲಿದೆ.

ಕುತೂಹಲ ಮೂಡಿಸಿದ ಭಾರತ vs ಪಾಕಿಸ್ತಾನ ಫೈನಲ್ ಪಂದ್ಯ?

ಪಾಕಿಸ್ತಾನದ ಸಂಸದೀಯ ಸಚಿವ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಮುಖ್ಯಸ್ಥರೂ ಆಗಿರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಮೊಹ್ಸಿನ್ ನಖ್ವಿ, ಭಾನುವಾರ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಏಷ್ಯಾಕಪ್ ಫೈನಲ್‌ಗೆ ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂಗೆ ಆಗಮಿಸಲಿದ್ದಾರೆ. ಪಾಕಿಸ್ತಾನ ತಂಡವನ್ನು ಮಣಿಸಿ ಭಾರತ ಚಾಂಪಿಯನ್ ಆದರೆ, ಮೊಹ್ಸಿನ್ ನಖ್ವಿ ಅವರಿಂದ ಕಪ್ ಸ್ವೀಕರಿಸುತ್ತದೆಯೋ? ಅಥವಾ ಇಲ್ಲವೋ ಎಂಬುದು ಕುತೂಹಲ ಮೂಡಿಸಿದೆ.

ಟ್ರೋಫಿ ಸ್ವೀಕರಿಸುತ್ತಾ ಭಾರತ?

ಪಹಲ್ಗಾಮ್ ಭಯೋತ್ಪಾದಕ ದಾಳಿ ನಂತರ ಪಾಕಿಸ್ತಾನ ಮತ್ತು ಭಾರತ ಕ್ರಿಕೆಟ್ ಸಂಬಂಧವೂ ಹಳ್ಳ ಹಿಡಿದಿದೆ. ಏಷ್ಯಾಕಪ್ ಲೀಗ್ ಹಂತದ ಪಂದ್ಯಗಳಲ್ಲಿಯೂ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದ ಸಂದರ್ಭದಲ್ಲಿ ಉಭಯ ತಂಡಗಳ ಆಟಗಾರರು ಪಂದ್ಯದ ಮೊದಲು ಮತ್ತು ಕೊನೆಯಲ್ಲಿ ಹ್ಯಾಂಡ್ ಶೇಕ್ ಮಾಡಿರಲಿಲ್ಲ. ಈಗ ಎಸಿಸಿ ಅಧ್ಯಕ್ಷರಾಗಿ, ನಖ್ವಿ ಚಾಂಪಿಯನ್ ತಂಡಕ್ಕೆ ಟ್ರೋಫಿಯನ್ನು ನೀಡುವಾಗ ಎರಡೂ ತಂಡಗಳೊಂದಿಗೆ ಹ್ಯಾಂಡ್‌ ಶೇಕ್‌ ಮಾಡುವ ನಿರೀಕ್ಷೆಯಿದೆ. ಇಂತಹ ಸಂದರ್ಭದಲ್ಲಿ ಟೀಮ್ ಇಂಡಿಯಾ ಆಟಗಾರರು ಹೇಗೆ ಪ್ರತಿಕ್ರಿಯಿಸುತ್ತಾರೆ? ಎಂಬುದು ಎಲ್ಲರಲ್ಲೂ ಕುತೂಹಕ ಹುಟ್ಟು ಹಾಕಿದೆ.

ಪಾಕಿಸ್ತಾನಕ್ಕೆ ಟಕ್ಕರ್ ಕೊಟ್ಟ ಟೀಮ್ ಇಂಡಿಯಾ ಅಭಿಮಾನಿಗಳು

ಮೂಲಗಳ ಪ್ರಕಾರ ಬಿಸಿಸಿಐ ಪ್ರೋಟೀಕಾಲ್ಗಳ ಅನ್ವಯ ಪ್ರಶಸ್ತಿ ಸ್ವೀಕರಿಸಲು ಅನುಮತಿ ನೀಡುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ. ಏಕೆಂದರೆ  ಸೆಪ್ಟೆಂಬರ್ 14 ರಂದು ಇಲ್ಲಿ ನಡೆದ ಪಂದ್ಯದ ನಂತರ ಪಂದ್ಯದ ರೆಫರಿ ಆಂಡಿ ಪೈಕ್ರಾಫ್ಟ್  ಶೇಕ್ ಹ್ಯಾಂಡ್ ಮಾಡದಿರುವ ಭಾರತದ ನಾಯಕನ ನಡೆಯನ್ನ ಪ್ರಶ್ನಿಸಲಿಲ್ಲ ಎಂದು ಪಿಸಿಬಿ ಆರೋಪಿಸಿ, ಅವರನ್ನ ಏಷ್ಯಾಕಪ್​ನಿಂದ ನಿಷೇಧಿಸಬೇಕೆಂದು ಆರೋಪಿಸಿತ್ತು. ಆದರೆ ಇದನ್ನು ಐಸಿಸಿ ಸ್ಪಷ್ಟವಾಗಿ ತಿರಸ್ಕರಿಸಿತು. ಜೊತೆಗೆ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಆಪರೇಷನ್ ಸಿಂಧೂರ್ ಪದ ಬಳಸಿದ್ದಕ್ಕಾಗಿ ಕ್ರಮ ಕೈಗೊಳ್ಳಲು ಐಸಿಸಿಗೆ ದೂರು ಸಲ್ಲಿಸಿತ್ತು. ಇದೆಲ್ಲಾ ಕಾರಣಗಳಿಂದ ನಖ್ವಿ ಕೈಯಿಂದ ಟ್ರೋಫಿ ಪಡೆಯಲು ಭಾರತೀಯ ಆಟಗಾರರು ನಿರ್ಧರಿಸಬಹುದು ಎನ್ನಲಾಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಭಾರತೀಯ ಆಟಗಾರರಿಗೆ ಹಲವಾರು ಸಲಹೆಗಳನ್ನ ನೀಡುತ್ತಿದ್ದಾರೆ. ಒಂದು ವೇಳೆ ಭಾರತ ಚಾಂಪಿಯನ್ ಆದರೆ, ಪ್ರಶಸ್ತಿಯನ್ನ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಟ್ರೋಫಿ ನೀಡಲು ಮುಂದಾದರೆ, ಟೀಮ್ ಇಂಡಿಯಾ ಕೋಚಿಂಗ್ ಸ್ಟಾಫ್ಗಳಾದ ಮಾರ್ನ್​ ಮಾರ್ಕೆಲ್ ಅಥವಾ ರಯಾನ್ ಟೆನ್ ಡೋಶಾಟ್​ ಕಳುಹಿಸಬೇಕು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.